ಬೆಂಗಳೂರು: ಅನರ್ಹ ಶಾಸಕ ಮುನಿರತ್ನ ರಾಜಕೀಯ ಪರಿಸ್ಥಿತಿ ಅತಂತ್ರಕ್ಕೆ ಸಿಲುಕಿದ್ದು, ಹೈಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ಮುಂದುವರಿದ ಹಿನ್ನೆಲೆಯಲ್ಲಿ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದರು.
ಪ್ರತಿದಿನ ಸಿಎಂ ಭೇಟಿ ಮಾಡುತ್ತಿರುವ ಅನರ್ಹ ಶಾಸಕ ಮುನಿರತ್ನ ಇಂದು ಕೂಡ ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸಕ್ಕೆ ಭೇಟಿ ನೀಡಿದರು. ತಮ್ಮ ವಿರುದ್ಧ ದಾಖಲಾಗಿರುವ ನಕಲಿ ವೋಟರ್ ಐಡಿ ಪ್ರಕರಣದ ತನಿಖೆಯನ್ನು ಹೈಕೋರ್ಟ್ ಫೆಬ್ರವರಿಗೆ ಮುಂದೂಡಿದ ಹಿನ್ನೆಲೆಯಲ್ಲಿ ಸಿಎಂ ಭೇಟಿಯಾಗಿ ಸಮಾಲೋಚನೆ ನಡೆಸಿದರು. ತಮ್ಮ ವಿರುದ್ಧದ ಪ್ರಕರಣ ವಾಪಸ್ ಪಡೆಯುವಂತೆ ಸಿಎಂಗೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ.
ಆದರೆ ಸಿಎಂ ಎಷ್ಟೇ ಪ್ರಯತ್ನ ಪಟ್ಟರೂ, ಪ್ರಕರಣ ವಾಪಸ್ ಪಡೆಯಲು ದೂರುದಾರ ತುಳಸಿ ಮುನಿರಾಜುಗೌಡ ನಿರಾಕರಿಸುತ್ತಿದ್ದು, ಮುನಿರತ್ನಗೆ ಹೊಸ ತಲೆನೋವು ಸೃಷ್ಟಿಸಿದೆ.
ಈ ನಡುವೆ ಸಿಎಂ ನಿವಾಸಕ್ಕೆ ಮ್ಯಾರಥಾನ್ ಭೇಟಿ ಮುಂದುವರಿಸಿದ ಎಂಟಿಬಿ ನಾಗರಾಜ್, ಸೋಲಿನ ನಂತರ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ. ಸಂಪುಟದಲ್ಲಿ ಸ್ಥಾನ ನೀಡಬೇಕು ಹಾಗು ಸಂಸದ ಬಚ್ಚೇಗೌಡ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ ಎಂಟಿಬಿ, ತನ್ನ ಕ್ಷೇತ್ರದ ಕಾಮಗಾರಿಗಳ ಬಗ್ಗೆಯೂ ಸಿಎಂ ಜೊತೆ ಚರ್ಚಿಸಿದರು ಎನ್ನಲಾಗಿದೆ.