ETV Bharat / city

ನಿಲುವಳಿ ಸೂಚನೆ ಮಂಡನೆ ವೇಳೆ ಪ್ರತಿಪಕ್ಷ-ಆಡಳಿತ ಪಕ್ಷದ ಮಾತಿನ ವಾಗ್ವಾದ : ನಿಲುವಳಿ ತಿರಸ್ಕರಿಸಿದ ಸ್ಪೀಕರ್ - ಪ್ರತಿಪಕ್ಷದ ಉಪನಾಯಕ ಯು.ಟಿ.ಖಾದರ್

ರಾಜ್ಯದ ಅಭಿವೃದ್ಧಿಗೆ ಕಾನೂನು ಸುವ್ಯವಸ್ಥೆ ಸರಿಯಾಗಿರಬೇಕು. ಶಿವಮೊಗ್ಗದಲ್ಲಿ ಹತ್ಯೆಯಾಗಿದೆ. ಚರ್ಚ್‌ಗಳ ಮೇಲೂ ದಾಳಿಯಾಗಿದೆ ಎಂದು ಹೇಳುತ್ತಿದ್ದಂತೆ, ಮಧ್ಯ ಪ್ರವೇಶಿಸಿದ ಕಾನೂನು ಸಚಿವ ಜೆ.ಸಿ‌. ಮಾಧುಸ್ವಾಮಿ ಈ ವಿಚಾರವನ್ನು ಈಗಾಗಲೇ ಚರ್ಚಿಸಲಾಗಿದೆ ಎರಡೆರೆಡು ಬಾರಿ ಚರ್ಚಿಸುವುದು ಒಳ್ಳೆಯದಲ್ಲ ಎಂದು ಹೇಳಿದ್ದು, ಕೆಳಮನೆಯಲ್ಲಿ ವಾಗ್ವಾದ ಉಂಟಾಗಲು ಕಾರಣವಾಯಿತು..

disputation-between-ruling-party-and-opposition-party-on-adjournment-motion
ನಿಲುವಳಿ ಸೂಚನೆ ಮಂಡನೆ ವೇಳೆ ಪ್ರತಿಪಕ್ಷ-ಆಡಳಿತ ಪಕ್ಷದ ಮಾತಿನ ವಾಗ್ವಾದ: ನಿಲುವಳಿ ತಿರಸ್ಕರಿಸಿದ ಸ್ಪೀಕರ್
author img

By

Published : Mar 16, 2022, 5:42 PM IST

Updated : Mar 16, 2022, 5:57 PM IST

ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವಿಚಾರಕ್ಕೆ ಸಂಬಂಧಿಸಿದಂತೆ ನಿಲುವಳಿ ಸೂಚನೆ ಮಂಡನೆ ವೇಳೆ ಪ್ರತಿಪಕ್ಷದ ಸದಸ್ಯರು ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ಮಾತಿನ ವಾಗ್ದಾಳಿ ನಡೆದ ಘಟನೆ ವಿಧಾನಸಭೆಯಲ್ಲಿ ಇಂದು ನಡೆಯಿತು.

ನಿಲುವಳಿ ಸೂಚನೆ ಮಂಡನೆ ಮಾಡಿ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷದ ಉಪನಾಯಕ ಯು.ಟಿ.ಖಾದರ್, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ. ಮಕ್ಕಳಿಂದ ದೊಡ್ಡವರೆಗೂ ಎಲ್ಲರಲ್ಲೂ ಭಯದ ವಾತಾವರಣ ಇದೆ. ರಾಜ್ಯದ ಅಭಿವೃದ್ಧಿಗೆ ಕಾನೂನು ಸುವ್ಯವಸ್ಥೆ ಸರಿಯಾಗಿರಬೇಕು.

ಶಿವಮೊಗ್ಗದಲ್ಲಿ ಹತ್ಯೆಯಾಗಿದೆ. ಚರ್ಚ್‌ಗಳ ಮೇಲೂ ದಾಳಿಯಾಗಿದೆ ಎಂದು ಹೇಳುತ್ತಿದ್ದಂತೆ, ಮಧ್ಯ ಪ್ರವೇಶಿಸಿದ ಕಾನೂನು ಸಚಿವ ಜೆ.ಸಿ‌. ಮಾಧುಸ್ವಾಮಿ, ನಿಲುವಳಿ ಸೂಚನೆಯಡಿ ನಿರ್ದಿಷ್ಟ ವಿಚಾರ, ತುರ್ತು ಸಂಗತಿ ಪ್ರಸ್ತಾಪಿಸಬೇಕಿದೆ. ಆದರೆ, ಖಾದರ್ ಅವರು ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲೇ ಪ್ರಸ್ತಾಪಿಸಿದ್ದಾರೆ. ಎರಡೆರಡು ಬಾರಿ ಚರ್ಚಿಸಿದರೆ ಗೌರವ ತರುವುದಿಲ್ಲ ಎಂದು ಆಕ್ಷೇಪಿಸಿದರು.

ಪ್ರತಿಪಕ್ಷ-ಆಡಳಿತ ಪಕ್ಷದ ಮಾತಿನ ವಾಗ್ವಾದ

ಆಗ ಬಿಜೆಪಿ-ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಸದಸ್ಯರನ್ನು ಸ್ಪೀಕರ್ ಸಮಾಧಾನಪಡಿಸಿ, ನಿಲುವಳಿ ಪೂರ್ವಭಾವಿ ವಿಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಪರಿಶೀಲನೆ ಹಂತದಲ್ಲೆ ಇದರ ನಿರ್ಧಾರ ಮಾಡಬೇಕಿತ್ತು ಎಂಬುದು ಸಚಿವರ ಅಭಿಪ್ರಾಯ. ಸದನದ ಕಾರ್ಯಕಲಾಪಗಳ ಸಮಿತಿ ಸಭೆಯಲ್ಲಿ ತೀರ್ಮಾನ ಮಾಡಿ ಬಿಟ್ಟಿವೆ. ಅದರಂತೆ ನಡೆದುಕೊಳ್ಳಲಾಗುವುದು ಎಂದರು.

ಆಗ ಮಾಧುಸ್ವಾಮಿ ನಿಯಮಾನುಸಾರ ಸಭೆ ನಡೆಸುವುದು ನಿಮ್ಮ ಜವಾಬ್ದಾರಿ. ಎಲ್ಲದರಲ್ಲೂ ನಿಲುವಳಿ ಸೂಚನೆ ಬ್ರಹ್ಮಾಸ್ತ್ರವಾಗುತ್ತದೆ ಎಂದು ಆಕ್ಷೇಪಿಸಿ ಬೇರೆ ನಿಯಮದಡಿ ಪ್ರಸ್ತಾಪಿಸಲಿ ಎಂದರು. ಮಧ್ಯೆ ಪ್ರವೇಶಿಸಿದ ಮಾಜಿ ಸ್ಪೀಕರ್ ರಮೇಶ್‍ ಕುಮಾರ್ ಅವರು, ನಿಲುವಳಿ ಸೂಚನೆ ಪ್ರಸ್ತಾವನೆ ಬಗ್ಗೆ ಸ್ಪೀಕರ್ ತಮ್ಮ ಕಚೇರಿಯಲ್ಲೇ ಪರಿಶೀಲಿಸಿ ತಿಳಿಸಬೇಕು. ನಿಯಮಗಳ ಪಾಲನೆ ವಿಚಾರದಲ್ಲಿ ಹಿತ-ಅಹಿತ ಇರಬಾರದು. ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಸಮಾನ ವೇತನ ಪರಿಷ್ಕರಿಸಲು ಆಯೋಗ ರಚನೆ ಬಗ್ಗೆ ಸಿಎಂ ಘೋಷಣೆ

ಮತ್ತೆ ಮಾತನಾಡಿದ ಯು.ಟಿ.ಖಾದರ್, ರಾಜ್ಯದಲ್ಲಿ ತಳ ಮಟ್ಟದಲ್ಲಿ ಏನಾಗುತ್ತಿದೆ ಎಂಬುದು ಸರ್ಕಾರದ ಗಮನಕ್ಕೆ ಬರುತ್ತಿಲ್ಲ. ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಮಲಗಿರುವ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಲಾಗುತ್ತಿದೆ. ದ್ವೇಷದ ಸಾವು ಆಗಿಲ್ಲವೇ? ನಿಷೇಧಾಜ್ಞೆ, ಕರ್ಫ್ಯೂ ಪರಿಹಾರವೇ? ಇಂತಹ ಪರಿಸ್ಥಿತಿ ಬಾರದಂತೆ ಶಾಶ್ವತವಾಗಿ ಸೋದರತ್ವ ಸಮಾಜ ನಿರ್ಮಾಣವಾಗಬೇಕು.

ದ್ವೇಷದ ಭಾಷಣಕ್ಕೆ ಕೊನೆಯಾಗಬೇಕು. ಭ್ರಷ್ಟಾಚಾರ ರಹಿತ ಪೊಲೀಸ್ ಇಲಾಖೆಯಾಗಬೇಕು. ಆದರೆ, ಜನಸ್ನೇಹಿ ಪೊಲೀಸ್ ಠಾಣೆ ಆಗುವ ಬದಲು ರಾಜಕಾರಣಿ ಸ್ನೇಹಿ ಠಾಣೆಯಾಗಿದೆ ಎಂದು ಆರೋಪಿಸಿದರು. ಆಗ ಮತ್ತೆ ಆಕ್ಷೇಪಿಸಿದ ಸಚಿವ ಮಾಧುಸ್ವಾಮಿ, ಇದೇ ರೀತಿ ಮುಂದುವರೆದರೆ ನಾವೇ ಸಭಾತ್ಯಾಗ ಮಾಡಬೇಕಾಗುತ್ತದೆ ಎಂದರು. ಆಗ ಸ್ಪೀಕರ್ ಕಾಗೇರಿ ನಿಲುವಳಿ ಸೂಚನೆಯಡಿ ಈ ವಿಚಾರದ ಚರ್ಚೆಗೆ ಅವಕಾಶವಿಲ್ಲ. ನಿಲುವಳಿ ಸೂಚನೆಯನ್ನು ತಿರಸ್ಕರಿಸುತ್ತಿದ್ದೇನೆ. ನಿಯಮ 69ರಡಿ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿ, ಈ ವಿಚಾರದ ಚರ್ಚೆಗೆ ತೆರೆ ಎಳೆದರು.

ಸಮರ್ಪಕ ಉತ್ತರ ಕೊಡಲು ಸಿದ್ದ : ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಪ್ರಸ್ತಾಪಿಸಿದಾಗ ಮಧ್ಯೆ ಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಚರ್ಚೆ ನಡೆಸಲು ಸಮರ್ಪಕ ಉತ್ತರ ಕೊಡಲು ಸರ್ಕಾರ ಸಿದ್ಧವಿದೆ ಎಂದರು. ವಿವಾದಾತ್ಮಕ ವಿಚಾರಗಳ ಬಗ್ಗೆ ನ್ಯಾಯಾಲಯದ ಆದೇಶಗಳು ಹಲವು ಬಾರಿ ಬಂದಾಗಲು ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸಿದೆ. ಜವಾಬ್ದಾರಿ, ನಿಯಂತ್ರಣವಿಟ್ಟುಕೊಂಡು ಪ್ರಚೋದನೆಯಾಗದಂತೆ ಮಾತನಾಡಬೇಕು. ಕಾನೂನು ಸುವ್ಯವಸ್ಥೆ ವಿಚಾರದ ಚರ್ಚೆಯಿಂದ ಸರ್ಕಾರ ಹಿಂದೆ ಸರಿಯುವುದಿಲ್ಲ ಎಂದರು.

Last Updated : Mar 16, 2022, 5:57 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.