ETV Bharat / city

ನಿಷೇಧಿತ ಕಳೆ ನಾಶಕ ಬಗ್ಗೆ ಚರ್ಚೆ : ತೊಂದರೆಯಾದ ದೂರು ಬಂದಿಲ್ಲ ಎಂದ ಬಿ.ಸಿ.ಪಾಟೀಲ್​ಗೆ ಸ್ಪೀಕರ್ ಚಾಟಿ

ಗ್ಲೈಕೋ ಫಾಸ್ಫೇಟ್​ನಂತಹ ಕಳೆನಾಶಕ ಬಳಕೆಯಿಂದ ಆಹಾರ ವಿಷವಾಗುತ್ತಿದೆ. ದೂರು ಬಂದಿಲ್ಲ ಎಂದು ಹೇಳುವುದು ಸರಿಯಲ್ಲ. ಬಿಗಿಯಾದ ಕ್ರಮಕೈಗೊಳ್ಳಬೇಕೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ ಸ್ಪೀಕರ್ ತಾಕೀತು ಮಾಡಿದರು..

BC Patil
BC Patil
author img

By

Published : Mar 23, 2022, 7:20 PM IST

ಬೆಂಗಳೂರು : ನಿಷೇಧಿತ ಕಳೆ ನಾಶಕ ಗ್ಲೈಕೋ ಫಾಸ್ಫೇಟ್ ಬಳಕೆ ವಿಚಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿ ಗಂಭೀರ ಚರ್ಚೆಗೆ ಕಾರಣವಾಗಿತ್ತು. ಬುಧವಾರ ಶೂನ್ಯ ವೇಳೆಯಲ್ಲಿ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ವಿಷಯ ಪ್ರಸ್ತಾಪಿಸಿ ಹಲವು ರಾಜ್ಯಗಳಲ್ಲಿ ನಿರ್ಬಂಧ ಹೇರಿರುವ ಗ್ಲೈಕೋಫಾಸ್ಪೆಟ್ ಕಳೆ ನಾಶಕವನ್ನು ರೈತರು ವ್ಯಾಪಕವಾಗಿ ಬಳಸುತ್ತಿದ್ದಾರೆ. ಎರೆಹುಳು ಸೇರಿದಂತೆ ಜೀವವೈವಿಧ್ಯ ನಾಶವಾಗುತ್ತದೆ ಎಂದರು.

ಅಲ್ಲದೇ, ನಿಷೇಧಿತ ಕಳೆ ನಾಶಕದಿಂದ ಜಲಮೂಲ ವಿಷವಾಗುತ್ತದೆ. ಮನುಷ್ಯರು, ಪ್ರಾಣಿಗಳಿಗೂ ಹಾನಿಕಾರಕವಾಗಿದೆ. ಕೃಷಿ ಇಲಾಖೆ ಬದುಕಿದೆಯೋ ಇಲ್ಲವೋ ಎಂದು ಪ್ರಶ್ನಿಸಿದರು. ಈ ವೇಳೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಉತ್ತರಿಸಿ, ಕಳೆ ಕೀಳಲು ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಹಾಗಾಗಿ, ಕಳೆ ಔಷಧ ಸಿಂಪಡಿಸುವ ಕೆಲಸ ಆಗುತ್ತಿದೆ. ಇದರಲ್ಲಿ ಯಾವುದೇ ತೊಂದರೆಯಾಗಿರುವ ದೂರುಗಳು ರೈತರಿಂದ ಬಂದಿಲ್ಲ ಎಂದರು.

ಆಗ ಮಧ್ಯಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಇಂತಹ ಕಳೆನಾಶಕ ಬಳಕೆಯಿಂದ ಆಹಾರ ವಿಷವಾಗುತ್ತಿದೆ. ದೂರು ಬಂದಿಲ್ಲ ಎಂದು ಹೇಳುವುದು ಸರಿಯಲ್ಲ. ಬಿಗಿಯಾದ ಕ್ರಮಕೈಗೊಳ್ಳಬೇಕು ಎಂದು ಚಾಟಿ ಬೀಸಿದರು. ಇದಕ್ಕೆ ಬಿ.ಸಿ.ಪಾಟೀಲ್ ಮಾತನಾಡಿ, ಕಳೆ ನಾಶಕ ಗ್ಲೈಕೋಫಾಸ್ಪೆಟ್‍ನ್ನು ರೈತರು ವ್ಯಾಪಕವಾಗಿ ಬಳಸುತ್ತಾರೆ. ನಿರ್ಬಂಧದ ಅಗತ್ಯವಿದ್ದರೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.

ಇದನ್ನೂ ಓದಿ: ಜನರ ಬಳಿ ಹೋಗಿ ಬಿಜೆಪಿಯವರ ಪರ್ಸೆಂಟೇಜ್ ಬಂಡವಾಳ ಬಯಲು ಮಾಡ್ತೇವೆ: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.