ETV Bharat / city

ಸರ್ಕಾರದಿಂದ ಬಜೆಟ್ ಅನುದಾನ ಕಡಿತ : ಕಾರ್ಪೋರೇಟರ್​ಗಳ ಮಾತಿನ ಸಮರ - Council

ಬಜೆಟ್ ಅನುದಾನ ಕಡಿತಗೊಳಿಸಿರುವ ರಾಜ್ಯ ಸರ್ಕಾರದ ನಡೆಯ ವಿರುದ್ಧ ಪಾಲಿಕೆ ಸಭೆಯಲ್ಲಿ ಕಾಂಗ್ರೆಸ್​-ಬಿಜೆಪಿ ಪಕ್ಷದ ಕಾರ್ಪೋರೇಟರ್​ಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಪಾಲಿಕೆ ಸಭೆಯಲ್ಲಿ ಕಾರ್ಪೋರೇಟರ್ಸ್ ಮಾತಿನ ಸಮರ
author img

By

Published : Sep 1, 2019, 3:01 AM IST

ಬೆಂಗಳೂರು: ಕಾಂಗ್ರೆಸ್ ಪಾಲಿಕೆ ಸದಸ್ಯರ 564 ಕೋಟಿ ರೂ. ಅನುದಾನ ಕಡಿತಗೊಳಿಸಿರುವ ರಾಜ್ಯ ಸರ್ಕಾರದ ನಡೆಯ ವಿರುದ್ಧ ಶನಿವಾರ ನಡೆದ ಪಾಲಿಕೆ ಸಭೆಯಲ್ಲಿ ಕಾರ್ಪೋರೇಟರ್​ಗಳು ಮಾತಿನ ಸಮರ ನಡೆಸಿದರು.

ಉಪಮೇಯರ್ ಭದ್ರೇಗೌಡ ಮಾತನಾಡಿ, 14 ನೇ ಹಣಕಾಸು ಆಯೋಗದಡಿ ಮೀಸಲಿಟ್ಟಿದ್ದ 10 ಕೋಟಿ ರೂ ಅನುದಾನದಲ್ಲಿ 5 ಕೋಟಿ ರೂ. ಕಡಿತ ಮಾಡಲಾಗಿದೆ. ಹಾಗೂ ಉಪಮೇಯರ್ ವಿವೇಚನೆಗೆ ಬಿಟ್ಟಿದ್ದ 5 ಕೋಟಿ ರೂ. ಅನುದಾನದಲ್ಲಿ ಮೂರು ಕೋಟಿ ರೂ. ಕಡಿತ ಮಾಡಲಾಗಿದ್ದು, ಬಿಜೆಪಿ ಸರ್ಕಾರ ಅನ್ಯಾಯ ಮಾಡಿದೆ. ಅಲ್ಲದೆ ಮಹಾಲಕ್ಷ್ಮಿ ಲೇಔಟ್​​ನಲ್ಲಿ ಸದ್ಯ ಶಾಸಕರು ಇಲ್ಲದಿದ್ದರೂ 20 ಕೋಟಿ ಕೊಟ್ಟಿದಾರೆ ಎಂದು ಆರೋಪಿಸಿದರು.

ಪಾಲಿಕೆ ಸಭೆಯಲ್ಲಿ ಕಾರ್ಪೋರೇಟರ್ಸ್ ಮಾತಿನ ಸಮರ

ಈ ವೇಳೆ ಕಾರ್ಪೋರೇಟರ್ ಹೇಮಲತಾ ಗೋಪಾಲಯ್ಯ ಮಾತನಾಡಿ, 20 ಕೋಟಿ ರೂ. ಅನುದಾನವನ್ನು ಮನೆಗೆ ತೆಗೆದುಕೊಂಡು ಹೋಗುವುದಕ್ಕೆ ಇಟ್ಟಿಲ್ಲ. ಮಹಾಲಕ್ಷ್ಮೀ ಲೇಔಟ್​​ನಲ್ಲಿ 7 ವಾರ್ಡ್​ಗಳಿವೆ ಎಂದು ತಿರುಗೇಟು ನೀಡಿದರು.

ಬಜೆಟ್ ಪರಿಷ್ಕರಣೆಯನ್ನು ಸಮರ್ಥಿಸಿಕೊಂಡ ಬಿಜೆಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಬಿಬಿಎಂಪಿಯಲ್ಲಿ 102 ಜನ ಬಿಜೆಪಿ ಸದಸ್ಯರಿದ್ದೇವೆ. ಕಾಂಗ್ರೆಸ್ ಪಾಲಿಕೆ ಸದಸ್ಯರು 75 ಜನ, ಜೆಡಿಎಸ್​​ನಲ್ಲಿ 14 ಜನ ಇದ್ದಾರೆ. ನಮಗಿಂತ ಹೆಚ್ಚು ಅನುದಾನ ಅವರಿಗೇ ನೀಡಲಾಗಿದೆ. ಹೆಚ್ಚುವರಿ ಅನುದಾನ 3 ಲಕ್ಷ ರೂ. ಸಹ ಅವರಿಗೇ ನೀಡಲಾಗಿದೆ ಎಂದರು.

Intro:ಬಜೆಟ್ ಅನುದಾನ ಕಡಿತ- ಸಮರ್ಥನೆಗಳ ಗದ್ದಲ- ಶೀಘ್ರ ಕಡತ ವಿಲೇವಾರಿಗೆ ಕೌನ್ಸಿಲ್ ಆಗ್ರಹ

ಬೆಂಗಳೂರು- ಕಾಂಗ್ರೆಸ್ ಪಾಲಿಕೆ ಸದಸ್ಯರ 564 ಕೋಟಿ ರೂ ಅನುದಾನ ಕಡಿತಗೊಳಿಸಿರುವ ರಾಜ್ಯಸರ್ಕಾರದ ನಡೆಯ ವಿರುದ್ಧ ಕಾರ್ಪೋರೇಟರ್ಸ್ ಇಂದಿನ ಪಾಲಿಕೆ ಸಭೆಯಲ್ಲಿ ಮಾತಿನ ಸಮರ ನಡೆಸಿದ್ರು.
ಉಪಮೇಯರ್ ಭದ್ರೇಗೌಡ ಮಾತನಾಡಿ, ಹದಿನಾಲ್ಕನೇ ಹಣಕಾಸು ಆಯೋಗದಡಿ ಮೀಸಲಿಟ್ಟಿದ್ದ 10 ಕೋಟಿ ರೂ ಅನುದಾನದಲ್ಲಿ ಐದು ಕೋಟಿ ಕಡಿತ ಮಾಡಲಾಗಿದೆ. ಅಲ್ಲದೆ ಉಪಮೇಯರ್ ವಿವೇಚನೆಗೆ ಬಿಟ್ಟಿದ್ದ ಐದು ಕೋಟಿ ರೂ ಅನುದಾನದಲ್ಲಿ ಮೂರು ಕೋಟಿ ರೂ ಕಡಿತ ಮಾಡಲಾಗಿದೆ. ಬಿಜೆಪಿ ಸರ್ಕಾರ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು. ಅಲ್ಲದೆ ಮಹಾಲಕ್ಷ್ಮಿ ಲೇಔಟ್ ನಲ್ಲಿ ಸಧ್ಯ ಶಾಸಕರು ಇಲ್ಲದಿದ್ದರೂ 20 ಕೋಟಿ ಕೊಟ್ಟಿದಾರೆ ಎಂದರು. ಈ ವೇಳೆ ಹೇಮಲತಾ ಗೋಪಾಲಯ್ಯ ಎದ್ದು ನಿಂತು ‘20 ಕೋಟಿ ರೂ. ಅನುದಾನವನ್ನು ಮನೆಗೆ ತೆಗೆದುಕೊಂಡು ಹೋಗುವುದಕ್ಕೆ ಇಟ್ಟಿಲ್ಲ. ಮಹಾಲಕ್ಷ್ಮೀ ಲೇಔಟ್ನಲ್ಲಿ 7 ವಾರ್ಡ್ಗಳಿವೆ’ ಎಂದು ತಿರುಗೇಟು ನೀಡಿದರು. ಮಾತು ಮುಂದುವರಿಸಿದ ಭದ್ರೇಗೌಡ, 20 ಕೋಟಿ ರೂ. ಅನುದಾನವನ್ನು ಮಹಾಲಕ್ಷ್ಮೀ ಲೇಔಟ್ನ ಎಲ್ಲ ವಾರ್ಡ್ಗಳಿಗೂ ಸಮಾನವಾಗಿ ಹಂಚಿಕೆ ಮಾಡಬೇಕು ಎಂದು ಮೇಯರ್ ಬಳಿ ಮನವಿ ಮಾಡಿದರು.

ಬಜೆಟ್ ಪರಿಷ್ಕರಣೆಯನ್ನು ಸಮರ್ಥಿಸಿಕೊಂಡ ಬಿಜೆಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಬಿಬಿಎಂಪಿಯಲ್ಲಿ 102ಜನ ಬಿಜೆಪಿ ಸದಸ್ಯರಿದ್ದೇವೆ. ಕಾಂಗ್ರೆಸ್ ಪಾಲಿಕೆ ಸದಸ್ಯರು 75ಜನ, ಜೆಡಿಎಸ್ನಲ್ಲಿ 14 ಜನ ಇದ್ದಾರೆ. ನಮಗಿಂತ ಹೆಚ್ಚು ಅನುದಾನ ಅವರಿಗೇ ನೀಡಲಾಗಿದೆ. ಹೆಚ್ಚುವರಿ ಅನುದಾನ 3 ಲಕ್ಷರೂ. ಸಹ ಅವರಿಗೇ ನೀಡಲಾಗಿದೆ ಎಂದರು.
ಬಿಬಿಎಂಪಿಯಲ್ಲಿ ಕಾಮಗಾರಿಗಳಿಗೆ ಸಂಬಂಧಿಸಿದ ಕಡತಗಳ ವಿಲೇವಾರಿ ವಿಧಾನವನ್ನು ಸರಳೀಕರಣಗೊಳಿಸುತ್ತೇವೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಹೇಳಿದರು.
ಟೆಂಡರ್ ಪ್ರಕ್ರಿಯೆಯಲ್ಲಿರುವ ಲೋಪಗಳನ್ನು ಬಗೆಹರಿಸಲಾಗುವುದು. ಕಡತ ವಿಲೇವಾರಿಗೆ ಅಧಿಕಾರಿಗಳ ಮಟ್ಟದಲ್ಲಿ ಕಾರ್ಯಾಗಾರ ನಡೆಸಲಾಗುವುದು. ಮೂರು ತಿಂಗಳಲ್ಲಿ ಕಾಮಗಾರಿಗಳಿಗೆ ಕಾರ್ಯಾದೇಶ ನೀಡುವಂತೆ ಕ್ರಮತೆಗೆದು ಕೊಳ್ಳಲಾಗುವುದು ಎಂದರು.

ದಯಾನಂದ ವಾರ್ಡ್ ನಲ್ಲಿ ಅತ್ಯಂತ ಕಡಿಮೆ ಬಾಡಿಗೆ ಕೇವಲ ಏಳು ಸಾವಿರಕ್ಕೆ ನೀಡಿರುವ ‘ಡಾ.ಅಂಬೇಡ್ಕರ್ ಡೇಕೇರ್ ಸೆಂಟರ್’ ಅನ್ನು ವಾಪಾಸು ಪಾಲಿಕೆಯ ವಶಕ್ಕೆ ಪಡೆಯುವಂತೆ ಕಾರ್ಪೋರೇಟರ್ ಕುಮಾರಿ ಪಳನಿಕಾಂತ್ ಒತ್ತಾಯಿಸಿದರು.
ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಡಾ.ಅಂಬೇಡ್ಕರ್ ಡೇಕೇರ್ ಸೆಂಟರ್ ಅನ್ನು ಈ ಹಿಂದೆ ಕೇವಲ 7 ಸಾವಿರರೂ.ಗೆ ಖಾಸಗಿ ಅವರಿಗೆ ಬಾಡಿಗೆ ನೀಡುವುದಕ್ಕೆ ಪಾಲಿಕೆ ಒಪ್ಪಂದ ಮಾಡಿಕೊಂಡಿತ್ತು. ಇದನ್ನು ರದ್ದುಪಡಿಸುವಂತೆ ಮನವಿ ಮಾಡಿದರು.

ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಸರ್ಕಾರ ಅನುದಾನ ನೀಡುವ ವರೆಗೆ ಪಾಲಿಕೆ ಹಣದಲ್ಲಿ ನಿರ್ವಹಣೆ ಮಾಡುವುದಕ್ಕೆ ಬಿಬಿಎಂಪಿ ತೀರ್ಮಾನಿಸಿದೆ. ಕ್ಯಾಂಟೀನ್ಗಳ ನಿರ್ವಹಣೆಗೆ ರಾಜ್ಯ ಸರ್ಕಾರದ ಪೂರಕ ಬಜೆಟ್ನಲ್ಲಿ ಅನುದಾನ ಒದಗಿಸುವುದಕ್ಕೆ ಮನವಿ ಮಾಡಲು ಕೌನ್ಸಿಲ್ ತೀರ್ಮಾನಿಸಿತು.

ಕೌನ್ಸಿಲ್ ಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದ್ರೆ ಬಿಬಿಎಂಪಿಯ ನೂತನ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಮಾತ್ರ ಸಭೆಯ ಉದ್ದಕ್ಕೂ ಮೊಬೈಲ್ ನಲ್ಲಿ ಮುಳುಗಿದ್ದರು.

ಸೌಮ್ಯಶ್ರೀ
Kn_Bng_04_council_meeting_7202707

Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.