ETV Bharat / city

ಮೊಯ್ಲಿ ನಾಮಪತ್ರ ಸಲ್ಲಿಕೆ ವೇಳೆ ಕಾಣದ ಜೆಡಿಎಸ್​ ಶಾಸಕರು!

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮೊಯ್ಲಿ ನಾಮಪತ್ರ ಸಲ್ಲಿಕೆ. ಕೈ ಸಂಸದನಿಗೆ ಸಾಥ್​ ನೀಡದ ಜೆಡಿಎಸ್​ ಶಾಸಕ, ಮುಖಂಡರು. ‌ಕಾಂಗ್ರೆಸ್ -ಜೆಡಿಎಸ್​ನಲ್ಲಿ ಮುಂದುವರೆದ ಭಿನ್ನಮತ.

ಮೊಯ್ಲಿ ನಾಮಪತ್ರ ಸಲ್ಲಿಕೆ
author img

By

Published : Mar 25, 2019, 1:38 PM IST

ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ‌ಕಾಂಗ್ರೆಸ್ ಮತ್ತು ಜೆಡಿಎಸ್​ಗೆ ಭಿನ್ನಮತ ಇದೇ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.

ಹೌದು, ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿ ನಾಮಪತ್ರ ಸಲ್ಲಿಸಲು ಚಿಕ್ಕಬಳ್ಳಾಪುರಕ್ಕೆ ಬಂದಿದ್ದು, ಈ ವೇಳೆ ಕಾಂಗ್ರೆಸ್​ನ ಶಾಸಕ ವೆಂಕಟರಮಣಯ್ಯ, ಸಚಿವ ಎಂ.ಟಿ ಬಿ ನಾಗರಾಜ್ ಸೇರಿದಂತೆ ನೂರಾರು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಮೊಯ್ಲಿಗೆ ಸಾಥ್ ನೀಡಿದ್ದಾರೆ. ಆದರೆ ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ ಮತ್ತು ಮುಖಂಡರು ಮಾತ್ರ ಕಾಣಿಸಿಕೊಂಡಿಲ್ಲ.

ಮೊಯ್ಲಿ ನಾಮಪತ್ರ ಸಲ್ಲಿಕೆ

ಜೆಡಿಎಸ್ ಮುಖಂಡರನ್ನು ಸಂಪರ್ಕಿಸಿಲ್ವ ಮೊಯ್ಲಿ..!

ಸಂಸದ ವೀರಪ್ಪ ಮೊಯ್ಲಿ ಅಥವಾ ಕಾಂಗ್ರೆಸ್ ಮುಖಂಡರು ಜೆಡಿಎಸ್ ಶಾಸಕ ಸೇರಿದಂತೆ ಆ ಪಕ್ಷದ ಮುಖಂಡರನ್ನು ಸಂಪರ್ಕಿಸಿಲ್ಲವೆಂದು ಜೆಡಿಎಸ್ ಮೂಲಗಳು ಹೇಳುತ್ತಿವೆ.

ಕಾಮಗಾರಿ ಸಂದರ್ಭದಲ್ಲಿ ಮಾತ್ರ ಮೊಯ್ಲಿ ಜೊತೆಯಲ್ಲಿರುತ್ತಿದ್ದ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ನಾಮಪತ್ರ ಸಲ್ಲಿಸುವ ವೇಳೆ ಗೈರುಹಾಜರಾಗಿದ್ದಾರೆ. ಅಲ್ಲದೆ, ಬಹಿರಂಗವಾಗಿಯೇ ಮೊಯ್ಲಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಜೆಡಿಎಸ್ ಜಿಲ್ಲಾಧ್ಯಕ್ಷ ಮುನೇಗೌಡ ಕೂಡ ಗೈರುಹಾಜರಾಗಿದ್ದು ಮೈತ್ರಿ ಪಕ್ಷದಲ್ಲಿನ ಭಿನ್ನಮತಕ್ಕೆ ಸಾಕ್ಷಿಯಂಬಂತೆ ಕಂಡುಬಂತು.

KN_BNG_03_250319_JDS_script_Ambarish Slug: ಕಾಂಗ್ರೆಸ್ ಗೆ ಬೆಂಬಲ ನೀಡದ ಜೆಡಿಎಸ್ ಮುಖಂಡರು ನಾಮ ಪತ್ರ ಸಲ್ಲಿಕೆಯಲ್ಲಿ ಕಾಣದ ತೆನೆಯ ಶಾಸಕರು ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ‌ಕಾಂಗ್ರೆಸ್ ಮತ್ತು ಜೆಡಿ ಎಸ್ ಗೆ ಭಿನ್ನಮತ ಇದೇ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.. ಕಾಂಗ್ರೆಸ್ ಅಭ್ಯರ್ಥಿ ವೀರಪ್ಪಮೊಯ್ಲಿ ನಾಮಿ ನೇಷನ್ ಹಾಕಲು ಚಿಕ್ಕಬಳ್ಳಾಪುರಕ್ಕೆ ಹೋಗಿದ್ದಾರೆ.. ಆದರೆ ಈ ವೇಳೆ ಕಾಂಗ್ರೆಸ್ ನ ಶಾಸಕ ವೆಂಕಟರಮಣಯ್ಯ, ಸಚಿವ ಎಂ.ಟಿ ಬಿ ನಾಗರಾಜ್ ಸೇರಿದಂತೆ ನೂರಾರು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಮೊಯ್ಲಿಗೆ ಸಾಥ್ ನೀಡಲು ಬಂದಿದ್ದಾರೆ.. ಆದರೆ ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ ಮತ್ತು ಮುಖಂಡರು ನಾಮಿನೇಷನ್ ವೇಳೆ ಕಾಣಿಸಿಕೊಂಡಿಲ್ಲ.. ಜೆಡಿಎಸ್ ಮುಖಂಡರನ್ನು ಸಂಪರ್ಕಿಸದ ಮೋಯ್ಲಿ..! ಯೆಸ್, ಆರಂಭದಿಂದಲೂ ವೀರಪ್ಪಮೊಯ್ಲಿ ಕಂಡರೆ ಜೆಡಿಎಸ್ ಮುಖಂಡರಿಗೆ ಅಷ್ಟಕಷ್ಟೆ.. ಕಾಮಗಾರಿಯ ಸಂದರ್ಭದಲ್ಲಿ ಮಾತ್ರ ಮೊಯ್ಲಿ ಜೊತೆಯಲ್ಲಿ ಇರುವ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ನಾಮ ಪತ್ರ ಸಲ್ಲಿಸುವ ವೇಳೆ ಗೈರಾಗಿದ್ದಾರೆ.. ಇದರ ಜೊತೆಯಲ್ಲಿ ಬಹಿರಂಗವಾಗಿ ವೀರಪ್ಪಮೊಯ್ಲಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ ಜೆಡಿ ಎಸ್ ಜಿಲ್ಲಾ ಅಧ್ಯಕ್ಷ ಮುನೇಗೌಡ ಕೂಡ ಗೈರಾಗಿದ್ದು, ಅವರ ಕಾರ್ಯಕರ್ತರು ನಾಮಿನೇಷನ್ ವೇಳೆ ಕಾಣಿಸಿಕೊಂಡಿಲ್ಲ.. ಅಲ್ಲದೇ ವೀರಪ್ಪಮೊಯ್ಲಿ ಅಥವಾ ಕಾಂಗ್ರೆಸ್ ಮುಖಂಡರು ಜೆಡಿಎಸ್ ಶಾಸಕ ಸೇರಿದಂತೆ ಜೆಡಿಎಸ್ ಮುಖಂಡರನ್ನು ಸಂಪರ್ಕ ಮಾಡಿಲ್ಲ ಎಂದು ಜೆಡಿಎಸ್ ಮೂಲಗಳು ಹೇಳುತ್ತಿವೆ.. ಮೊಯ್ಲಿ ಸೋಲಿಗೆ ಕಾರಣವಾಗುತ್ತ ಭಿನ್ನಾಭಿಪ್ರಾಯ..? ಇದೇ ವೇಳೆ ಚುನಟವಣೆ ಆರಂಭದಿಂದಲೂ ವೀರಪ್ಪಮೊಯ್ಲಿ ಮೊಯ್ಲಿ ವಿರುದ್ದ ಕೆಂಡ ಕಾರುತ್ತಿರುವ ಜೆಡಿಎಸ್ ಮುಖಂಡರಿಂದಲೇ ವೀರಪ್ಪಮೊಯ್ಲಿ ಸೋಲಿಗೆ ಸಿಲುಕಲಿದ್ದಾರೆ ಎನ್ನಲಾಗುತ್ತಿದೆ.. ಮೊನ್ನೆ ತಾನೆ ಜೆಡಿಎಸ್ ಮುಖಂಡರು ಗ್ರಾಮ ಮತ್ತು ತಾಲೂಕು ಮಟ್ಟದಲ್ಲಿ ಮೀಟಿಂಗ್ ನಡಸಿ ಬಿಜೆಪಿಗೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.. ಇದರಿಂದ ಮೊಯ್ಲಿ ಸೋಲು ಖಚಿತ ಅನ್ನೋ ಅನುಮಾನ ಮೂಡುತ್ತಿದೆ..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.