ETV Bharat / city

ಈ ರಾಜಹಂಸ ಬಸ್‌ನಲ್ಲಿ ಪ್ರಯಾಣಿಸಿದವರು ದಯವಿಟ್ಟು ತಕ್ಷಣ ತಪಾಸಣೆ ಮಾಡಿಕೊಳ್ಳಿ..

ಬಸ್​ನಲ್ಲಿ ಪ್ರಯಾಣಿಸಿದ್ದ ಇಬ್ಬರಿಗೆ ಕೋವಿಡ್​-19 ಸೋಂಕು ತಗುಲಿರುವುದು ದೃಢಪಟ್ಟಿದ್ದು, ಪ್ರಯಾಣಿಕರು ಈ ಮಾರ್ಗದಲ್ಲಿ ಪ್ರಯಾಣಿಸಿದ್ದರೆ ಮಾಹಿತಿ ನೀಡಿ ಅಂತ ನಿಗಮದ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಕರ್ನಾಟಕ ಸಾರಿಗೆ ಬಸ್
ಕರ್ನಾಟಕ ಸಾರಿಗೆ ಬಸ್
author img

By

Published : Mar 28, 2020, 12:46 PM IST

ಬೆಂಗಳೂರು: ಕೆಎಸ್​ಆರ್​ಟಿಸಿ ಬಸ್​ನಲ್ಲಿ ಪ್ರಯಾಣಿಸಿದ ಪ್ರಯಾಣಿಕರೊಬ್ಬರಿಗೆ ಕೋವಿಡ್​-19 ಸೋಂಕು ತಗುಲಿರುವುದು ದೃಢಪಟ್ಟಿದ್ದು, ಪ್ರಯಾಣಿಕರು ಈ ಮಾರ್ಗದಲ್ಲಿ ಪ್ರಯಾಣಿಸಿದ್ದರೆ ಮಾಹಿತಿ ನೀಡಿ ಅಂತಾ ನಿಗಮದ ಅಧಿಕಾರಿಗಳು ಮನವಿ ಮಾಡಿದ್ದಾರೆ.

ದಿನಾಂಕ 18-03-2020 ರಂದು ರಾಜಹಂಸ ಬಸ್​ ನಂ. KA57F3802, ಬೆಳಗ್ಗೆ 10 ಕ್ಕೆ ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ದಾವಣಗೆರೆಗೆ ಹೊರಟಿರುತ್ತದೆ. ಈ ಬಸ್​ನಲ್ಲಿ‌ ಪ್ರಯಾಣಿಸಿದ ಪ್ರಯಾಣಿಕರು ದಯವಿಟ್ಟು ಈ‌ ಕೂಡಲೇ ಹತ್ತಿರದ ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಲು ಮನವಿ ಮಾಡಿದೆ.‌

ಮತ್ತೊಂದು, ದಿನಾಂಕ 21-03-2020 ರಂದು ಕರ್ನಾಟಕ ಸಾರಿಗೆ ಬಸ್​ ನಂ. KA19 F3329, ಸಂಜೆ 4.30 ಕ್ಕೆ ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ಮಂಗಳೂರಿಗೆ ಹೊರಟಿರುತ್ತದೆ. ಇಲ್ಲೂ ಕೂಡ ಒಬ್ಬ ಪ್ರಯಾಣಿಕರು ಬಸ್​ನಲ್ಲಿ ಪ್ರಯಾಣ ಮಾಡಿದ್ದು, ಈ ಬಸ್​ನಲ್ಲಿ‌ ಪ್ರಯಾಣಿಸಿದ ಪ್ರಯಾಣಿಕರು ಕೂಡ ಹತ್ತಿರದ ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಲು ಕೋರಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.