ಬೆಂಗಳೂರು : ಭಾಷೆ ಯಾವತ್ತೂ ವಿವಾದದ ಕೇಂದ್ರ ಬಿಂದು ಆಗಬಾರದು. ಕೆಲವರು ಅದನ್ನು ವಿವಾದವನ್ನಾಗಿ ಮಾಡುತ್ತಾರೆ. ಅವರಿಗೆ ನನ್ನ ಬೆಸ್ಟ್ ವಿಷಸ್. ವಿವಾದ ಮಾಡುವವರು ಅದನ್ನೇ ಮಾಡುತ್ತಿರಲಿ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
ಐಐಎಸ್ಸಿಯಲ್ಲಿ ಮಾತನಾಡಿದ ಅವರು, ಮಾತೃ ಭಾಷೆ ಬಹಳ ಮುಖ್ಯವಾಗಿದೆ. ಜಪಾನ್ ಈಗ ಅತ್ಯಂತ ಅಭಿವೃದ್ಧಿ ಹೊಂದಿದ ಸೂಪರ್ ಪವರ್ ರಾಷ್ಟ್ರವಾಗಿದೆ. ಅವರು ತಮ್ಮ ಮಾತೃ ಭಾಷೆಗೆ ಆದ್ಯತೆ ನೀಡಿದ್ದಾರೆ. ಅವರು ಇಂಗ್ಲಿಷಿಗೆ ಆದ್ಯತೆ ನೀಡಿಲ್ಲ.
ನಾವೆಲ್ಲರೂ ಇಂದು ಹಿಂದಿ ಬಳಸ ಬೇಕಾ?, ಮಾತೃ ಭಾಷೆ ಬಳಸಬೇಕಾ ಎಂಬ ಚರ್ಚೆ ನಡೆಸುತ್ತಿದ್ದೇವೆ. ನಾನು ಕನ್ನಡ, ಒಡಿಯಾ, ಹಿಂದಿ, ಗುಜರಾತಿ, ಪಂಜಾಬಿ, ಆಂಗ್ಲ ಭಾಷೆಯ ಪರವಾಗಿಯೂ ಇದ್ದೇನೆ. ಆದರೆ, ಮಾತೃ ಭಾಷೆ ವ್ಯಾಕರಣ ಬದ್ದವಾಗಿ ಯೋಚಿಸಲು ಸಹಕಾರ ಮಾಡುತ್ತದೆ ಎಂದರು.
ಎನ್‌ಇಪಿಯಲ್ಲಿ ಮಾತೃ ಭಾಷೆ ಹಾಗೂ ಸ್ಥಳೀಯ ಭಾಷೆಗೆ ಆದ್ಯತೆ ನೀಡಲಾಗಿದೆ. ನಾನು ಒಡಿಯಾ, ಹಿಂದಿ, ಇಂಗ್ಲಿಷ್ ಮಾತನಾಡುತ್ತೇನೆ. ಆಂಗ್ಲದಲ್ಲಿ ಮಾತನಾಡುವ ವೇಳೆ ನಾನು ಮೊದಲು ಒಡಿಶಾದಲ್ಲಿ ಯೋಚಿಸಿ ಅದನ್ನು ಹಿಂದಿಗೆ ಭಾಷಾಂತರ ಮಾಡಿ ಬಳಿಕ ಆಂಗ್ಲ ಭಾಷೆಯಲ್ಲಿ ಮಾತನಾಡುತ್ತೇನೆ ಎಂದರು.
ಇದನ್ನೂ ಓದಿ: ಹಿಂದಿ ಎಂದ್ಕೂಡಲೇ ಭೂತನೋ, ಸೈತಾನೋ ಎನ್ನುವಂತೆ ನೋಡ್ಬೇಡಿ.. ಶಾ ಹೇಳಿಕೆ ತಿರುಚಲಾಗುತ್ತಿದೆ : ಪ್ರತಾಪ್ ಸಿಂಹ