ಬೆಂಗಳೂರು: ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಬಳಕೆ ವಿಚಾರವಾಗಿ ಡಿಜಿಪಿ ಸುತ್ತೋಲೆ ನೀಡಿದ ಬೆನ್ನಲ್ಲೇ ರಾಜ್ಯಾದ್ಯಂತ ಪೊಲೀಸರು ಅಲರ್ಟ್ ಆಗಿದ್ದಾರೆ. ಪ್ರತಿ ಜಿಲ್ಲೆಗಳ ಮಸೀದಿ, ಮಂದಿರ, ಚರ್ಚ್ಗಳಿಗೆ ಹಾಗು ಬಾರ್, ರೆಸ್ಟೋರೆಂಟ್‌ಗಳಿಗೆ ಪೊಲೀಸರು ನೋಟಿಸ್ ನೀಡುತ್ತಿದ್ದಾರೆ. ನೋಟಿಸ್ ನೀಡಿರುವ ಜಿಲ್ಲಾವಾರು ವಿವರ ಹೀಗಿದೆ..
ಚಿಕ್ಕಬಳ್ಳಾಪುರ: 153 ಮಸೀದಿ, 145 ದೇವಸ್ಥಾನ, 32 ಚರ್ಚ್ ಸೇರಿ 330 ಧಾರ್ಮಿಕ ಕೇಂದ್ರಗಳಿಗೆ ನೋಟಿಸ್ ನೀಡಲಾಗಿದೆ. ತುಮಕೂರು: 738 ಧಾರ್ಮಿಕ ಕೇಂದ್ರಗಳು 27 ಬಾರ್ ಅಂಡ್ ರೆಸ್ಟೋರೆಂಟ್‌ಗಳಿಗೆ ನೋಟಿಸ್ ನೀಡಲಾಗಿದೆ. ಇವುಗಳಲ್ಲಿ 233 ಮಸೀದಿ, 478 ದೇವಸ್ಥಾನ, 41 ಚರ್ಚ್ ಸೇರಿವೆ. 16 ಬಾರ್, 11 ರೆಸ್ಟೋರೆಂಟ್ ಸೇರಿದಂತೆ ಒಟ್ಟು 27 ಸ್ಥಳಗಳಿಗೆ ನೋಟಿಸ್ ನೀಡಲಾಗಿದೆ.
ಬೆಂಗಳೂರು ಗ್ರಾಮಾಂತರ: 374 ಧಾರ್ಮಿಕ ಕೇಂದ್ರ ಹಾಗೂ 17 ಬಾರ್ ಆಂಡ್ ರೆಸ್ಟೋರೆಂಟ್‌ಗಳಿಗೆ ನೋಟಿಸ್ ನೀಡಲಾಗಿದೆ. ಇದರಲ್ಲಿ 156 ಮಸೀದಿ, 171 ದೇವಸ್ಥಾನ, 47 ಚರ್ಚ್ ಸೇರಿವೆ. 14 ಬಾರ್ ಅಂಡ್ ರೆಸ್ಟೋರೆಂಟ್ ಸೇರಿದಂತೆ ಒಟ್ಟು 17 ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಕೋಲಾರ: 398 ಧಾರ್ಮಿಕ ಕೇಂದ್ರಗಳಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. 173 ಮಸೀದಿ , 202 ದೇವಸ್ಥಾನ, 23 ಚರ್ಚ್ ಸೇರಿವೆ. ರೆಸ್ಟೋರೆಂಟ್ ಗಳಿಗೆ 15 ನೋಟಿಸ್ ನೀಡಲಾಗಿದೆ. ಕೆಜಿಎಫ್: ಜಿಲ್ಲೆಯಲ್ಲಿ 37 ಮಸೀದಿ, 46 ದೇವಸ್ಥಾನ, 30 ಚರ್ಚ್ ಸೇರಿ ಒಟ್ಟು 113 ಧಾರ್ಮಿಕ ಕೇಂದ್ರಗಳಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಇದನ್ನೂ ಓದಿ:'ಬೊಮ್ಮಾಯಿ ಒಳ್ಳೆಯ ಕೆಲಸ ಮಾಡ್ತಿದ್ದಾರೆ, ಸಿಎಂ ಸ್ಥಾನದಿಂದ ಬದಲಾವಣೆ ಇಲ್ಲ'