ETV Bharat / city

ಗಲಭೆ ಪ್ರಕರಣ: ನಷ್ಟಕ್ಕೆ ಒಳಗಾದ ಸಾರ್ವಜನಿಕರು ಹಾನಿ ಅರ್ಜಿ ಸಲ್ಲಿಸೋದು ಹೇಗೆ? - ಹೈಕೋರ್ಟ್​​ ಕ್ಲೇಮ್​ ಕಮಿಷನರ್ ಸಮಿತಿ

ಗಲಭೆ ಸಂಬಂಧ ಸಾರ್ವಜನಿಕ ಹಾಗೂ ಖಾಸಗಿ ಸ್ವತ್ತುಗಳ ನಾಶ ಹಾಗೂ ನಷ್ಟವನ್ನು ಗಲಭೆಕೋರರಿಂದ ಭರಿಸಲು ನ್ಯಾಯಾಲಯ ಆದೇಶಿಸಿದೆ. ಇದರಂತೆ ಘಟನೆಗೆ ಕಾರಣೀಕರ್ತರಾದ ವ್ಯಕ್ತಿ ಅಥವಾ ಸಂಘಟಗಳಿಂದ ನಷ್ಟ ವಸೂಲಿ ಮಾಡುವ ತೀರ್ಮಾನಕ್ಕೆ ಬರಲಾಗಿದೆ‌ ಎಂದು ನ್ಯಾ. ಹೆಚ್.ಎಸ್.ಕೆಂಪಣ್ಣ ಹೇಳಿದರು.

dg-halli-kg-halli-victims-can-apply-for-damage-report-to-claim-commissioner
ಗಲಭೆ ಪ್ರಕರಣ
author img

By

Published : Feb 19, 2021, 3:53 PM IST

ಬೆಂಗಳೂರು: ಕಳೆದ ವರ್ಷ ಆ. 11ರಂದು ನಡೆದ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿಯಲ್ಲಿ ನಡೆದ ಗಲಭೆಯಲ್ಲಿ ನಷ್ಟಕ್ಕೆ‌ ಒಳಗಾದವರು ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸುವಂತೆ ಕ್ಲೇಮ್​ ಕಮಿಷನರ್ ನ್ಯಾ. ಹೆಚ್.ಎಸ್.ಕೆಂಪಣ್ಣ ತಿಳಿಸಿದ್ದಾರೆ.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹೈಕೋರ್ಟ್ ನಿರ್ದೇಶನದ ಮೇರೆಗೆ ಕ್ಲೇಮ್​ ಕಮಿಷನರ್ ಕಾರ್ಯಾಲಯ ಸ್ಥಾಪನೆಯಾಗಿದೆ. ಈ ಸಂಬಂಧ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನ್ಯಾ. ಕೆಂಪಣ್ಣ, ಗಲಭೆ ಸಂಬಂಧ ಸಾರ್ವಜನಿಕ ಹಾಗೂ ಖಾಸಗಿ ಸ್ವತ್ತುಗಳ ನಾಶ ಹಾಗೂ ನಷ್ಟವನ್ನು ಗಲಭೆಕೋರರಿಂದ ಭರಿಸಲು ನ್ಯಾಯಾಲಯ ಆದೇಶಿಸಿದೆ. ಇದರಂತೆ ಘಟನೆಗೆ ಕಾರಣೀಕರ್ತರಾದ ವ್ಯಕ್ತಿ ಅಥವಾ ಸಂಘಟಗಳಿಂದ ನಷ್ಟ ವಸೂಲಿ ಮಾಡುವ ತೀರ್ಮಾನಕ್ಕೆ ಬರಲಾಗಿದೆ‌.

ಇಲ್ಲಿಯವರೆಗೆ ಮೂರು ಅರ್ಜಿಗಳು ಮಾತ್ರ ಬಂದಿವೆ

ಈ‌ ನಿಟ್ಟಿನಲ್ಲಿ‌ ಈಗಾಗಲೇ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಠಾಣಾ ವ್ಯಾಪ್ತಿಗಳಲ್ಲಿ ನಾಮಫಲಕ ಹಾಕಲಾಗಿದೆ‌. ಅಗತ್ಯ ಇರುವ ಕಡೆಗಳಲ್ಲಿ ಅಧಿಸೂಚನೆ ಭಿತ್ತಿಪತ್ರ ಹಾಕಲಾಗಿದೆ. ಪತ್ರಿಕೆಗಳ‌ ಮೂಲಕ ಪ್ರಕಟಣೆ ಹೊರಡಿಸಲಾಗಿದೆ‌. ಈ ಬಗ್ಗೆ ಮಾಧ್ಯಮಗಳ ಮೂಲಕ ಹೆಚ್ಚಿನ ಪ್ರಚಾರ ಮಾಡಬೇಕೆಂದು ಮನವಿ ಮಾಡಿಕೊಂಡರು. ಗಲಭೆ ವೇಳೆ ವಾಹನಗಳು ನಾಶವಾಗಿವೆ. ಇದುವರೆಗೂ 3 ಅರ್ಜಿಗಳು ಮಾತ್ರ ಬಂದಿವೆ. ನಷ್ಟಕ್ಕೆ‌ ಒಳಗಾದ ಬಹುತೇಕರು ಅರ್ಜಿ ಸಲ್ಲಿಸಲು ಇನ್ನೂ ಮುಂದೆ ಬಂದಿಲ್ಲ. ಈ ಬಗ್ಗೆ ಮಾಹಿತಿ ಕೊರತೆ ಇರುವುದರಿಂದ ಹಾನಿ ಪರಿಹಾರ ಅರ್ಜಿ ಸಲ್ಲಿಸಿರಲಿಲ್ಲ.

ನಷ್ಟದ ಸ್ಥಳಕ್ಕೆ ಭೇಟಿ ನೀಡಿ ಮೌಲ್ಯಮಾಪನ

ನಷ್ಟಕ್ಕೆ ಕಾರಣರಾದವರನ್ನು ಗುರುತಿಸಿ ಅವರ ಹೆಸರು ಅಥವಾ ಸಂಘ ಸಂಬಂಧ ಹೈಕೋರ್ಟ್​ಗೆ ವರದಿ ನೀಡಬೇಕು. ಬಳಿಕ ಕೋರ್ಟ್ ಆದೇಶದಂತೆ ನಷ್ಟ ಪರಿಹಾರ ಒದಗಿಸಬೇಕು. ಸಾರ್ವಜನಿಕರು ಅರ್ಜಿ ಸಲ್ಲಿಸಿದ ಬಳಿಕ ನಷ್ಟದ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಮೌಲ್ಯಮಾಪನ ನಡೆಸಿದ ಬಳಿಕ ಪರಿಹಾರ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಶಾಸಕರೇ ಕ್ಲೇಮ್​ ಕಮಿಷನರ್​​ಗೆ ಅರ್ಜಿ ಸಲ್ಲಿಸಿಲ್ಲ

ಡಿ.ಜೆ. ಹಳ್ಳಿ ಗಲಭೆ ವೇಳೆ ಪುಲಕೇಶಿನಗರ ಶಾಸಕರ ಮನೆ ಮತ್ತು ಆಸ್ತಿಪಾಸ್ತಿಗೂ ನಷ್ಟ ಉಂಟಾಗಿತ್ತು. ಆದರೆ ಈವರೆಗೂ ಶಾಸಕರೇ ಕ್ಲೇಮ್​ ಕಮಿಷನರ್ ಮುಂದೆ ಅರ್ಜಿ ಸಲ್ಲಿಸಿಲ್ಲ. ಇನ್ನು ಸಾರ್ವಜನಿಕರು ಅಗತ್ಯ ದಾಖಲೆಗಳ ಜೊತೆ ಬಾಲಬ್ರೂಹಿ ಅತಿಥಿ ಗೃಹದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಗಲಭೆಯಲ್ಲಿನ ಸಂತ್ರಸ್ತರು ತಮ್ಮ ಆಸ್ತಿ, ವಾಹನ ನಷ್ಟದ ದಾಖಲೆ, ಆಡಿಯೋ, ವಿಡಿಯೋ ರೆಕಾರ್ಡ್, ಹಾನಿಯಾದ ಸ್ವತ್ತಿನ ಮೌಲ್ಯ ಸೇರಿದಂತೆ ಅಗತ್ಯ ದಾಖಲೆ ಒದಗಿಸಬೇಕಾಗಿದೆ.

ಯಾರಿಗೂ ಹೆದರದೆ ಅರ್ಜಿ ಸಲ್ಲಿಸಿ

ಇನ್ನು ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಗಲಭೆಗೆ ಸಂಬಂಧಿಸಿದಂತೆ 72 ಎಫ್​​ಐಆರ್ ದಾಖಲಾಗಿ ತನಿಖೆ ನಡೆಯುತ್ತಿದೆ. ಕ್ಲೇಮ್​ ಕಮಿಷನರ್ ಮುಂದೆ ಯಾವುದೇ ಅಂಜಿಕೆಯಿಲ್ಲದೆ, ಯಾರ ಬೆದರಿಕೆಗೂ ಬಗ್ಗದೇ ಅರ್ಜಿಯನ್ನು ಸಲ್ಲಿಸಿ. ಜನರಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಪೊಲೀಸರು ವಿಶ್ವಾಸ ಮೂಡಿಸುತ್ತಿದ್ದಾರೆ. ಸದ್ಯ ಕೇವಲ 3 ಅರ್ಜಿಗಳು ಮಾತ್ರ ಕ್ಲೇಮ್​ ಕಮಿಷನರ್ ಮುಂದೆ ಬಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದು ಅರ್ಜಿ ಸಲ್ಲಿಸಬೇಕು. ಆ ಮೂಲಕ ಗಲಭೆಕೋರರಿಂದಲೇ ನಷ್ಟ ಭರ್ತಿಗೆ ಅನುವಾಗಲಿದೆ ಎಂದು ಕ್ಲೇಮ್ ಕಮಿಷನರ್ ಮನವಿ‌ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.