ಬೆಂಗಳೂರು: ಬೆಂಗಳೂರಿನಿಂದ 225 ಕಿ.ಮೀ ದೂರದಲ್ಲಿರುವ ಚಿತ್ರದುರ್ಗ ಜಿಲ್ಲೆಯ ಐಐಎಸ್ಸಿಯ ಚಳ್ಳಕೆರೆ ಕ್ಯಾಂಪಸ್‌ನಲ್ಲಿ ಸ್ಥಾಪಿಸಲಾದ ಹೆಚ್‌ಎಎಲ್-ಐಐಎಸ್ಸಿ ಕೌಶಲ್ಯ ಅಭಿವೃದ್ಧಿ ಕೇಂದ್ರ(SDC)ವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಜ್ಞಾನವೇ ಶಕ್ತಿ. ನುರಿತ ಕಾರ್ಯಪಡೆಯು ನವನಿರ್ಮಾಣ ಮತ್ತು ಸೃಜನಶೀಲತೆಗೆ ಮೂಲಭೂತ ಅವಶ್ಯಕತೆಯಾಗಿದೆ. ಎಸ್‌ಡಿಸಿಯು ದೇಶದ ಪ್ರಮುಖ ಏರೋಸ್ಪೇಸ್ ದೈತ್ಯ ಮತ್ತು ಕ್ಲಾಸ್ ಪ್ರೀಮಿಯರ್ ಅಕಾಡೆಮಿಯ ಅತ್ಯುತ್ತಮವಾದ ಸಹಯೋಗಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಅವರು ಹೇಳಿದರು.
ಈ ಕೌಶಲ್ಯಾಭಿವೃದ್ಧಿ ಕೇಂದ್ರವು ದೇಶದ ಅಭಿವೃದ್ಧಿಗೆ ಆಗುತ್ತಿರುವ ಸವಾಲುಗಳಿಗೆ ಉತ್ತರಿಸುವ ಶಕ್ತಿಯನ್ನು ಹೆಚ್ಚಿನ ಸಂಖ್ಯೆಯ ನೌಕರರಿಗೆ ನೀಡಲಿದ್ದು, ಆರ್ಥಿಕ ಪ್ರಗತಿ ಹಾಗೂ ಸ್ವಯಂ ಪರ್ಯಾಪ್ತಗೊಳಿಸಲು ಅನುವು ಮಾಡಿಕೊಡಲಿದೆ. ಗ್ರಾಮೀಣ ಭಾಗದಲ್ಲಿ ಐಐಎಸ್ಸಿ ಪ್ರಾಧ್ಯಾಪಕರಿಗೆ ಗಣಿತ ಹಾಗೂ ವಿಜ್ಞಾನದ ಯಶಸ್ವಿ ತರಬೇತಿಯನ್ನು 2011 ರಿಂದ ಚಳ್ಳಕೆರೆ ಕೇಂದ್ರದಲ್ಲಿ ನೀಡುತ್ತಿದೆ.
ಕಾರ್ಯಕ್ರಮದಲ್ಲಿ ರಕ್ಷಣಾ ಪಡೆ ಮುಖ್ಯಸ್ಥ(CDS) ಬಿಪಿನ್ ರಾವತ್, ರಕ್ಷಣಾ ಕಾರ್ಯದರ್ಶಿ ಡಾ.ಅಜಯ್ ಕುಮಾರ್, ಕಾರ್ಯದರ್ಶಿ(ರಕ್ಷಣಾ ಉತ್ಪಾದನೆ) ರಾಜ್ ಕುಮಾರ್ ಮೊದಲಾದವರು ಪಾಲ್ಗೊಂಡಿದ್ದರು.