ETV Bharat / city

ಚುನಾವಣೆ ಹಿನ್ನೆಲೆ ಬೆಂಗಳೂರು ಪೊಲೀಸರು ಫುಲ್​ ಅಲರ್ಟ್​: ಈಟಿವಿ ಭಾರತ್​ಗೆ ಡಿಸಿಪಿ ಇಶಾ ಪಂಥ್ ಮಾಹಿತಿ - ಪ್ರತಿಕ್ರಿಯೆ

ಚುನಾವಣಾ ಭದ್ರತಾ ವಿಚಾರವಾಗಿ ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂಥ್ ಈಟಿವಿ ಭಾರತ್ ಜೊತೆಗೆ ಮಾತನಾಡಿದ್ದಾರೆ.

ಡಿಸಿಪಿ ಇಶಾ ಪಂಥ್ ಪ್ರತಿಕ್ರಿಯೆ
author img

By

Published : Mar 22, 2019, 4:54 PM IST

ಬೆಂಗಳೂರು: ಜಿಲ್ಲಾ ಚುನಾವಣಾಧಿಕಾರಿಗಳ ವ್ಯಾಪ್ತಿಯ 3 ಲೋಕಸಭಾ ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಚುನಾವಣೆ ನಿಗದಿಯಾಗಿದ್ದು, ಬೆಂಗಳೂರು ಪೊಲೀಸರು ಫುಲ್​ ಅಲರ್ಟ್​ ಆಗಿದ್ದಾರೆ.

ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ ಹಾಗೂ ದಕ್ಷಿಣ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ದಿನಾಂಕ ಫಿಕ್ಸ್ ಆಗಿದೆ‌. ಈ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಚೆಕ್​ಪೋಸ್ಟ್ ಹಾಕಿ ‌ಭದ್ರತೆ ವ್ಯವಸ್ಥೆ ಮಾಡಿದ್ದಾರೆ. ಅನುಮಾನಾಸ್ಪದ ವ್ಯಕ್ತಿ, ವಾಹನಗಳ‌ ಮೇಲೆ ಕಣ್ಣಿಟ್ಟು ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಭದ್ರತಾ ವಿಚಾರವಾಗಿ ಈಟಿವಿ ಭಾರತ್ ಜೊತೆಗೆ ಮಾತನಾಡಿರುವ ಆಗ್ನೇಯ ವಿಭಾಗ ಡಿಸಿಪಿ ಇಶಾ ಪಂಥ್​, ಆಗ್ನೇಯ ವಿಭಾಗದ ಎಲ್ಲಾ ಪೊಲೀಸರಿಗೆ ಅಲರ್ಟ್ ಆಗಿರುವಂತೆ ಸೂಚಿಸಲಾಗಿದೆ. ಈ ವಿಚಾರವಾಗಿ ಈಗಾಗಲೇ ದೆಹಲಿಗೆ ತೆರಳಿ ಚುನಾವಣಾ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇವೆ. ನಾಳೆ ನಮ್ಮ ವಿಭಾಗದ ಎಲ್ಲಾ ರೌಡಿಗಳನ್ನ ಕರೆದು ರೌಡಿ ಪರೇಡ್ ನಡೆಸಲಿದ್ದೇವೆ.‌ ಚುನಾವಣಾ ಸಂದರ್ಭ ಈ ರೌಡಿಗಳು ತಮ್ಮ ಅಟ್ಟಹಾಸ ತೋರಿಸುವ ಸಾಧ್ಯತೆ ಇದೆ. ಯಾರು ಬೇಲ್​ನಲ್ಲಿ ಹೊರಗಿದ್ದಾರೆ, ಅವರು ಮಾರಕಾಸ್ತ್ರ ಹೊಂದಿದ್ದಾರೋ ಇಲ್ಲವೋ ಅನ್ನೋದರ ತಪಾಸಣೆ ನಡೆಸಲಿದ್ದೇವೆ ಎಂದು ಮಾಹಿತಿ ನೀಡಿದರು.

ಡಿಸಿಪಿ ಇಶಾ ಪಂಥ್ ಪ್ರತಿಕ್ರಿಯೆ

ಇಷ್ಟು ಮಾತ್ರವಲ್ಲದೆ, ಬಾರ್ ಮಾಲೀಕರುಗಳಿಗೆ ಕೆಲ ನಿಯಮಗಳನ್ನ ಪಾಲಿಸುವಂತೆ ಕೂಡ ಸೂಚನೆ ನೀಡಿದ್ದೇವೆ. ಹಾಗೆಯೇ ಸಿಆರ್​ಪಿಎಫ್ ಸಿಬ್ಬಂದಿ ಈಗಾಗಲೇ ರೂಟ್ ಮಾರ್ಚ್ ಮಾಡಿದ್ದಾರೆ. ಹೆಚ್ಚಿನ ಭದ್ರತೆಗೆ ತುಕಡಿಗಳ ನಿಯೋಜಿಸಿದ್ದೇವೆ ಎಂದರು.

ಭದ್ರತೆ ವಿಚಾರವಾಗಿ ಯಾರೂ ಕೂಡ ಭಯಪಡಬೇಕಿಲ್ಲ. ಎಲೆಕ್ಷನ್ ಸಂಬಂಧ ಯಾವುದೇ ಮಾಹಿತಿ ಬೇಕಾದರೆ, c_vigil citizen app ಮೂಲಕ ಮಾಹಿತಿ ಪಡೆಯಬಹುದು. ಹಾಗೆಯೇ 100 ಸಂಖ್ಯೆಗೆ ಕರೆ ಮಾಡಿ ದೂರನ್ನ ಕೂಡ ನೀಡಬಹುದು. ಪೊಲೀಸ್​ ಸಿಬ್ಬಂದಿ ಕೂಡ ಅಲರ್ಟ್ ಆಗಿರುತ್ತಾರೆ ಎಂದು ಡಿಸಿಪಿ ಇಶಾ ಪಂಥ್​ ಹೇಳಿದ್ದಾರೆ.

ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿಗಳ ವ್ಯಾಪ್ತಿಯವ3ಲೋಕ ಸಭಾ ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಚುನಾವಣೆ ನಿಗಧಿಪಡಿಸಿದ್ದು ಅದರಂತೆ ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣಾ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ದಿನಾಂಕ ಈಗಾಗ್ಲೇ ಫಿಕ್ಸ್ ಆಗಿದೆ‌ . ಹಾಗಾಗಿ ಈಗಾಗ್ಲೇ ರಾಜಕಾರಣಿಗಳು ಚುನಾವಣೆಯ ತಯಾರಿಯಲ್ಲಿ ತೊಡಗಿದ್ದಾರೆ. ಅದ್ರಲ್ಲು ಬೆಂಗಳೂರು ಪೊಲಿಸರು ಚೆಕ್ ಪೋಸ್ಟ್ ಹಾಕಿ‌ಭದ್ರತೆಯಲ್ಲಿ ನಿರತರಾಗಿದ್ದಾರೆ ಅನುಮಾನಸ್ಪದ ವ್ಯಕ್ತಿ ಅನುಮಾನಸ್ಪದ ವಾಹನಗಳ‌ಮೇಲೆ ಕಣ್ಣಿಟ್ಟು ಪರಿಶೀಲನೆಯಲ್ಲಿ ತೊಡಗಿದ್ದಾರೆ. ಇನ್ನು ಆಗ್ನೇಯ ವಿಭಾಗ ಡಿಸಿಪಿ ಈಶಾ ಪಂತ್ ಈ ಟಿವಿ ಭಾರತ್ ಜೊತೆ ಮಾತಾನಾಡಿ ಆಗ್ನೆಯ ವಿಭಾಗದ ಎಲ್ಲಾ ಪೊಲೀಸರಿಗೆ ಅಲರ್ಟ್ ಇರುವಂತೆ ಸೂಚೊಸಲಾಗಿದೆ. ಈಗಾಗ್ಲೇ ಡಿಲ್ಲಿಗೆ ತೆರಳಿ ಚುನಾವಣಾ ಅಧಿಕಾರಿಗಳ ಜೊತೆ ತೆರಳಿ ಮಾತುಕತೆ ನಡೆಸ್ಸಿದ್ದಿವಿ. ನಾಳೆ ನಮ್ಮ ವಿಭಾಗದ ಎಲ್ಲಾ ರೌಡಿಗಳನ್ನ ಕರೆದು ರೌಡಿ ಪರೆಡ್ ನಡೆಸ್ತಿವಿ‌ ಯಾಕಂದ್ರೆ ಎಲೆಕ್ಸ್ನ್ ಸಂಧರ್ಭ ಬೇರೆ ರೌಡಿಗಳು ತಮ್ಮ ಅಟ್ಟಹಾಸ ತೊರಿಸುವ ಸಾದ್ಯತೆಇದೆ. ಯಾರು ಬೈಲ್ ನಲ್ಲಿ ಹೊರಗಿದ್ದಾರೆ ಇನ್ನು ಕುಕೃತ್ಯ ಹಾಗೂ ಮಾರಕಾಸ್ತ್ರ ಹೊಂದಿದ್ದಾರ ಅನ್ನೋದ್ರ ತಪಾಸಣೆ ನಡೆಸಲಿದ್ದೆವೆ. ಹಾಗೆ ಬಾರ್ ಓನರ್ಸ್ಗಳಿಗೆ ಕೆಲ ನಿಯಮಗಳನ್ನ ಫಾಲೋ ಮಾಡುವಂತೆ ಕೂಡ ಸುಚನೆ ನೀಡಿದ್ದಿವಿ‌ . ಹಾಗೆ ಸಿ ಆರ್ ಪಿ ಎಫ್ ಈಗಾಗ್ಲೆ ರೂಟ್ ಮಾರ್ಚ್ ಮಾಡಿದ್ದಾರೆ. ಹೆಚ್ಚಿಮ ಭದ್ರತೆಗೆ ತುಕಡಿಗಳ ನೇಮಕ‌ಮಾಡಿದ್ದಿವಿ. ಹಾಗೆ ಸಾರ್ವಜನಿಕರಿಗೆ ಈಶಾ ಪಂಥ್ ಸಂದೇಶ ರವಾನೆ ಮಾಡಿದ್ದು ಯಾರು ಕೂಡ ಭಯಪಡಬೇಕಿಲ್ಲ ಎಲೆಕ್ಷಾನ್ ಮಾಹಿತಿ ಬೇಕಾದ್ರೆ c_vigil citizen app ಮೂಲಕ ಮಾಹಿತಿ ಪಡೆಯಬಹುದು ಹಾಗೆ ನಮ್ಮ 100ಕರೆ ಮಾಡಿ ದೂರನ್ನ ಕೂಡ ನೀಡಬಹುದು ಆಯಾ ಬೀಟಿನಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳು ಅಲರ್ಟ್ ಆಗಿರ್ತಾರೆ ಎಂದು ಹೇಳಿದ್ದಾರೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.