ETV Bharat / city

ಉಪ ಚುನಾವಣೆಯಲ್ಲಿ ಹಿನ್ನಡೆ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲವೆಂದ ಡಿಸಿಎಂ - ಕರ್ನಾಟಕ ಬಿಜೆಪಿ ನಾಯಕತ್ವ ಬದಲಾವಣೆ

ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಬಹಳ ಉಪ ಚುನಾವಣೆ ನಡೆದಿದೆ, ಅವುಗಳಲ್ಲಿ ನಾವು ಗೆದ್ದಿದ್ದೇವೆ. ಹಾಗಾಗಿ ಈ ಉಪ ಚುನಾವಣೆಗೂ ನಾಯಕತ್ವ ಬದಲಾವಣೆಗೂ ಯಾವ ಸಂಬಂಧ ಇಲ್ಲ. ಅಲ್ಲದೆ 2026ಕ್ಕೆ ಕೇರಳ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೇ ಬರಲಿದೆ ಎಂದು ಡಿಸಿಎಂ ಅಶ್ವತ್ಥನಾರಾಯಣ್ ಹೇಳಿದರು.

dcm-ashwath-narayana-clarified-about-leadership-change
ಡಿಸಿಎಂ ಅಶ್ವತ್ಥನಾರಾಯಣ್
author img

By

Published : May 2, 2021, 5:23 PM IST

ಬೆಂಗಳೂರು: ಉಪ ಚುನಾವಣಾ ಫಲಿತಾಂಶಕ್ಕೂ, ನಾಯಕತ್ವ ಬದಲಾವಣೆ ವಿಷಯಕ್ಕೂ ಸಂಬಂಧವಿಲ್ಲ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಡಿಸಿಎಂ ಅಶ್ವತ್ಥನಾರಾಯಣ್ ಸ್ಪಷ್ಟಪಡಿಸಿದ್ದು, 2026ರಲ್ಲಿ ಬಿಜೆಪಿ ಕೇರಳದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ರೇಸ್ ಕೋರ್ಸ್ ರಸ್ತೆ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಬಹಳ ಉಪ ಚುನಾವಣೆ ನಡೆದಿವೆ, ಅವುಗಳಲ್ಲಿ ನಾವು ಗೆದ್ದಿದ್ದೇವೆ. ಹಾಗಾಗಿ ಈ ಉಪ ಚುನಾವಣೆಗೂ ನಾಯಕತ್ವ ಬದಲಾವಣೆಗೂ ಯಾವ ಸಂಬಂಧ ಇಲ್ಲ. ನಾಯಕತ್ವ ಬದಲಾವಣೆ ಪ್ರಶ್ನೆ ಉದ್ಭವವಾಗಲ್ಲ ಎಂದರು.

2026ಕ್ಕೆ ಕೆರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಕೇರಳದಲ್ಲಿ ಬಹಳ ಉತ್ತಮ ಪ್ರಯತ್ನ ಮಾಡಿದ್ದೇವೆ, 5-10 ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು, ಇನ್ನು ಸಮಯ ಇದೆ, ಬರಬಹುದು. ಆ ರಾಜ್ಯದ ಜನತೆಗೆ ಯುಡಿಎಫ್ ಮತ್ತು ಎಲ್ ಡಿಎಫ್ ಎರಡೂ ಪಕ್ಷದ ಮೇಲೆ ಭರವಸೆ ಇಲ್ಲ. ಅದನ್ನ ಕಿತ್ತು ಎಸೆಯಬೇಕು ಎಂದು ಬಹಳ ಸ್ಪಷ್ಟವಾಗಿ ಜನಾಭಿಪ್ರಾಯ ಇದೆ. ಆದರೆ ನಮಗೆ ಅವಕಾಶ ಇನ್ನು ಇಲ್ಲ. ಯುಡಿಎಪ್, ಎಲ್​ಡಿಎಫ್ ಪರಸ್ಪರ ಸೋಲಿಸಲು ಜನ ಮತ ಹಾಕುತ್ತಿದ್ದು, ಬಿಜೆಪಿ ಬೇಕು ಎನ್ನುವ ಒಲವು ಅಲ್ಲಿದೆ. 2024ಕ್ಕೆ ಲೋಕಸಭೆ ಚುನಾವಣೆಯಲ್ಲಿ ನಮಗೆ ಈ ಚುನಾವಣೆಯ ಪ್ರತಿಫಲ ಸಿಗಲಿದೆ. 2026ಕ್ಕೆ ಕೇರಳ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೇ ಬರಲಿದೆ. ಈ ಎರಡು ಪಕ್ಷ ಪರಿಹಾರ ಅಲ್ಲ ಎನ್ನುವುದು ಸ್ಪಷ್ಟವಾಗಿದೆ. ಕೇರಳದಲ್ಲಿ ಕಾಂಗ್ರೆಸ್​ಗೆ ಎಡಪಕ್ಷದ ಆಕ್ಸಿಜನ್ ಕಟ್ ಆಗಿದೆ, ಯುಡಿಎಫ್ ಭವಿಷ್ಯವೂ ಅಲ್ಲಿ ಮುಗಿದಿದೆ ಹಾಗಾಗಿ ಬಿಜೆಪಿ ಎನ್‌ಡಿಎ ಗೆ ಸ್ಪೇಸ್ ಕ್ರಿಯೇಟ್ ಆಗುತ್ತಿದೆ. ಮುಂದೆ ನಾವು ಗೆಲ್ಲಲಿದ್ದೇವೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲವೆಂದ ಡಿಸಿಎಂ

ದೀದಿಯಿಂದ ಅಧಿಕಾರ ದುರ್ಬಳಕೆ: ಪಶ್ಚಿಮ ಬಂಗಾಳದಲ್ಲಿ ಅಧಿಕಾರ ದುರ್ಬಳಕೆ, ಕೀಳುಮಟ್ಟದ ರಾಜಕಾರಣ ನಡೆಯುತ್ತಿದೆ. ಪೊಲೀಸ್ ಇದೆಯೋ ಇಲ್ಲವೋ ಎನ್ನುವ ವಾತಾವರಣವಿದೆ. ಪ್ರಜಾಪ್ರಭುತ್ವದಲ್ಲಿ ನ್ಯಾಯಯುತ ಮಾರ್ಗದಲ್ಲಿ ನಡೆದ ಚುನಾವಣೆ ಇದಲ್ಲ. ಬೆದರಿಕೆ, ಅಧಿಕಾರ ದುರ್ಬಳಕೆಯಿಂದ ಅಧಿಕಾರ ಉಳಿಸಿಕೊಂಡಿದ್ದಾರೆ. ನಿಜವಾದ ಜನಾಭಿಪ್ರಾಯ ಅವರಿಗಿಲ್ಲ. ನಾವು ಶಕ್ತಿಮೀರಿ ಪ್ರಯತ್ನ ಮಾಡಿದ್ದೆವು, ಗೆಲ್ಲುವ ವಿಶ್ವಾಸ ಇತ್ತು ಆದರೆ ಇದು ಮಂದಿನ ಚುನಾವಣೆಗೆ ದಿಕ್ಸೂಚಿಯಾಗಲಿದೆ ಅಲ್ಲಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.

ವಿಜಯೇಂದ್ರಗೆ ಸೋಲಿನ ಹೊಣೆ ಇಲ್ಲ: ಕೆ.ಆರ್. ಪೇಟೆ, ಶಿರಾ ಗೆದ್ದಾಗ ವಿಜಯೇಂದ್ರರನ್ನು ಚಾಣಕ್ಯ ಎಂದರು, ಸೋತಾಗ ಯಾಕೆ ಹೊಣೆ ಹೊರುವುದಿಲ್ಲ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ, ನಮ್ಮ ಪಕ್ಷದಲ್ಲಿ ವ್ಯಕ್ತಿಯನ್ನು ಹೊಣೆ ಮಾಡುವುದಿಲ್ಲ, ಸಂಘಟನೆ ಜವಾಬ್ದಾರಿ ಹೊರಲಿದೆ, ಮಸ್ಕಿ ಕಾಂಗ್ರೆಸ್ ಕ್ಷೇತ್ರ, ಜನರ ತೀರ್ಪು ನಮ್ಮ ಪರವಾಗಿಲ್ಲ, ಕಾಂಗ್ರೆಸ್ ಪರ ಇದೆ, ಅದನ್ನು ಸ್ವೀಕರಿಸಲಿದ್ದೇವೆ, ಬಸವಕಲ್ಯಾಣ ಕೂಡ ಕಾಂಗ್ರೆಸ್ ಕ್ಷೇತ್ರ ಆದರೆ ಅಲ್ಲಿ ನಮ್ಮ ಅಭ್ಯರ್ಥಿ ಗೆದ್ದಿದ್ದಾರೆ, ಮಸ್ಕಿ ಗೆಲ್ಲಬೇಕು ಎನ್ನುವ ನಮ್ಮ ಉದ್ದೇಶ ಈಡೇರಲಿಲ್ಲ ಆದರೂ ಕಾಂಗ್ರೆಸ್ ಗೆ ಒಂದು ಕಡೆ ಸೋಲಾಗಿದೆ, ನಮಗೆ ಒಂದು ಕಡೆ ಗೆಲುವಾಗಿದೆ ಎಂದರು.

ಆಡಳಿತ ವಿರೋಧಿ ಅಲೆಯಿಲ್ಲ: 9 ಸ್ಥಳೀಯ ಸಂಸ್ಥೆ, ಮಸ್ಕಿ ಸೋಲು, ಆಡಳಿತ ವಿರೋಧಿ ಅಲೆಯಲ್ಲ. ನಾವು ಸೋತ ಭಾಗದಲ್ಲಿ ಬಿಜೆಪಿ ಶಾಸಕರಿಲ್ಲ, ಪ್ರತಿಪಕ್ಷಗಳ ಶಾಸಕರಿದ್ದಾರೆ, ಪ್ರತಿಪಕ್ಷಗಳಿಂದ ನಾವು ಆ ಸ್ಥಾನಗಳ ವಶಕ್ಕೆ ಪಡೆಯುವ ಪ್ರಯತ್ನ ಮಾಡಿದ್ದೇವೆ ಅಷ್ಟೇ, ಕಾಂಗ್ರೆಸ್ ಬಸವಕಲ್ಯಾಣ ಸೋತು, ಮಸ್ಕಿ ಉಳಿಸಿಕೊಂಡಿದ್ದಾರೆ ಅಷ್ಟೇ ಎಂದರು.

ಕೊರೊನಾ ಪರಿಣಾಮ ಬೀರಿಲ್ಲ: ಎಲ್ಲಾ ದೇಶದಲ್ಲೂ ಕೊರೊನಾ ನಿರ್ವಹಣೆ ಸವಾಲಾಗಿದೆ, ನಮ್ಮ ಶಕ್ತಿ ಮೀರಿದೆ. ವ್ಯವಸ್ಥೆ ಪೂರಕವಾಗಿ ಇಲ್ಲ, ಬಹಳ ವೇಗವಾಗಿ ಹರಡುತ್ತಿದೆ, ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ, ಇದರಲ್ಲಿ ನಮಗೆ ಸ್ವಲ್ಪ ಹಿನ್ನಡೆಯಾಗಿದೆ, ನ್ಯೂನತೆಯೂ ಇದೆ, ನಿಯಂತ್ರಣಕ್ಕಾಗಿ ಬೇಕಾದ ಎಲ್ಲ ಬೇಡಿಕೆ ನಮ್ಮ ಕೈಮೀರಿವೆ, ಆಮ್ಲಜನಕ, ರೆಮ್ ಡಿಸಿವಿರ್ ಬೇಡಿಕೆ ಕೂಡ ಅಜಗಜಾಂತರ ವ್ಯತ್ಯಾಸವಿದೆ ಆದರೂ ಎಲ್ಲಾ ರೀತಿಯ ವ್ಯವಸ್ಥೆ ಮಾಡುವ ಕೆಲಸ ಮಾತ್ರ ನಡೆದಿದೆ. ಅಲ್ಪ ಸಮಯದಲ್ಲೇ ಹೆಚ್ಚಿನ ಪ್ರಯತ್ನ ಮಾಡಿದ್ದೇವೆ. ಈ ಕೊರೊನಾ ಪರಿಣಾಮ ಫಲಿತಾಂಶದ ಮೇಲೆ ಬೀರಿಲ್ಲ, ಚುನಾವಣೆ ವೇಳೆ ಈ ಪರಿಸ್ಥಿತಿ ಇರಲಿಲ್ಲ ಎಂದರು.

ಲಸಿಕೆ ವಿಳಂಬ: 18-44 ವರ್ಷದವರಿಗೆ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಸ್ವಲ್ಪ ವಿಳಂಬವಾಗಲಿದೆ, ಸಧ್ಯ ಈಗ ಲಸಿಕೆ ಇದ್ದರೂ ಕಾರ್ಯಕ್ರಮಕ್ಕೆ ಬೇಕಾದ ಪ್ರಮಾಣದ ಲಸಿಕೆ ಬಂದಿಲ್ಲ ಹಾಗಾಗಿ ಅಗತ್ಯ ದಾಸ್ತಾನು ಬಂದ ನಂತರವೇ ಲಸಿಕೆ ಹಾಕುವ ಕಾರ್ಯಕ್ರಮ ಆರಂಭಿಸಲು ಸರ್ಕಾರ ನಿರ್ಧರಿಸಿದೆ ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ್ ಸ್ಪಷ್ಟಪಡಿಸಿದ್ದಾರೆ.

ಪ್ರತಿ ದಿನ ಎಷ್ಟು ಜನರಿಗೆ ಲಸಿಕೆ ನೀಡಬೇಕು ಎನ್ನುವ ಅಂಕಿ ಅಂಶ ಆಧಾರದ ಮೇಲೆ ಲಸಿಕೆ ನೀಡಿಕೆ ಆರಂಭಿಸಬೇಕು ಹಾಗಾಗಿ ಅಗತ್ಯ ದಾಸ್ತಾನು ಬಂದ ನಂತರ ಲಸಿಕೆ ನೀಡಿಕೆ ಆರಂಭಿಸಲಿದ್ದೇವೆ. ಲಸಿಕೆಗೆ ತುಂಬಾ ಬೇಡಿಕೆ ಇದೆ, ನೂಗು ನುಗ್ಗಲು ಆಗಬಾರದು ಎನ್ನುವ ಕಾರಣಕ್ಕೆ ಎಲ್ಲ ವ್ಯವಸ್ಥೆ ಮಾಡಿಕೊಂಡೇ ಲಸಿಕೆ ನೀಡಲು ಮುಂದಾಗುತ್ತೇವೆ ಎಂದರು.

18 ವರ್ಷದ ನಂತರದ ಎಲ್ಲರಿಗೂ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಆರೋಗ್ಯ ಸಿಬ್ಬಂದಿ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತದೆ, ಈಗಾಗಲೇ 45 ವರ್ಷ ದಾಟಿದವರಿಗೆ ಲಸಿಕೆ ನೀಡುತ್ತಿದ್ದು ಅದನ್ನೇ ವಿಸ್ತರಿಸಲಾಗುತ್ತದೆ, ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಆರೋಗ್ಯ ಸಿಬ್ಬಂದಿ ಕೊರತೆ ಅಷ್ಟಿಲ್ಲ, ಆದರೂ ಎಲ್ಲ ವ್ಯವಸ್ಥೆ ಮಾಡಿಕೊಂಡು ಲಸಿಕೆ ಅಭಿಯಾನ ನಡೆಸಲಾಗುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.