ETV Bharat / city

ಪಿಯು ತರಗತಿಗಳಿಗೆ ನಾಳೆಯಿಂದ 8 ದಿನಗಳ ದಸರಾ ರಜೆ - mysuru dasara

ನಾಡಿನೆಲ್ಲೆಡೆ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಈಗಾಗಲೇ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ರಾಜ್ಯದ ಪದವಿ ಪೂರ್ವ ಕಾಲೇಜುಗಳಿಗೂ ರಜೆಯನ್ನು ಘೋಷಣೆ ಮಾಡಲಾಗಿದೆ.

dasara-holiday-break-for-pre-university
ಪಿಯು ತರಗತಿಗಳಿಗೆ ನಾಳೆಯಿಂದ 8 ದಿನಗಳ ದಸರಾ ರಜೆ
author img

By

Published : Oct 9, 2021, 11:37 AM IST

ಬೆಂಗಳೂರು: ರಾಜ್ಯದ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಗೆ ನಾಳೆಯಿಂದ ಅಕ್ಟೊಬರ್ 17ರವರೆಗೆ 8 ದಿನಗಳ ಕಾಲ ದಸರಾ ರಜೆ ಘೋಷಣೆ ಮಾಡಲಾಗಿದೆ.

ಕೋವಿಡ್ ಕಾರಣಕ್ಕೆ ಸ್ಥಗಿತಗೊಂಡಿದ್ದ 2021-22ನೇ ಸಾಲಿಗೆ ಪಿಯುಸಿ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಇತ್ತೀಚೆಗಷ್ಟೇ ಆರಂಭಗೊಂಡಿತ್ತು. ಈಗ ದಸರಾ ರಜೆಯನ್ನು ಘೋಷಣೆ ಮಾಡಲಾಗಿದೆ.

ಉಪನ್ಯಾಸಕರ ಸಂಘದ ಕೋರಿಕೆ ಹಿನ್ನೆಲೆಯಲ್ಲಿ ದಸರಾ ರಜಾ ಅವಧಿಯನ್ನು ಮಾರ್ಪಾಡು ಮಾಡಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಕೂಡ ಅಕ್ಟೊಬರ್ 10ರಿಂದ 20ರವರೆಗೆ ರಜೆ ಘೋಷಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಬಿಲ್ಡಿಂಗ್​ಗಳ ಕುಸಿತಕ್ಕೆ ಕಾರಣ ಬಿಚ್ಚಿಟ್ಟ ಕಟ್ಟಡ ವಿನ್ಯಾಸಕ ನರೇಶ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.