ETV Bharat / city

'ಅಧಿಕಾರಿಯೊಬ್ಬರು ಸರ್ಕಾರಕ್ಕೆ ಮುಚ್ಚಿಟ್ಟು ನಡೆಸಿದ ವ್ಯವಹಾರ ಬೆಳಕಿಗೆ ತಂದ ಸಾರ್ಥಕ ಭಾವನೆಯಿದೆ' - ಡಿ.ರೂಪಾ ಮತ್ತು ಹೇಮಂತ್ ನಿಂಬಾಳ್ಕರ್​

ಎಲ್ಲಾ ಹುದ್ದೆಗಳಲ್ಲಿಯೂ ಕೆಲಸ ಮಾಡಲು ಅವಕಾಶ ಇದೆ. ಎಲ್ಲಾ ಕಡೆ ಅಭಿವೃದ್ಧಿ ಮಾಡಬಹುದು. ಸಾರ್ಥಕತೆ ಮೂಡಿಸಬಹುದು. ಪಾರದರ್ಶಕತೆ ತರಬಹುದು ಎಂದು ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ ಅಭಿಪ್ರಾಯಪಟ್ಟಿದ್ದಾರೆ..

d.roopa
ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ
author img

By

Published : Jan 2, 2021, 1:30 AM IST

Updated : Jan 2, 2021, 12:55 PM IST

ಬೆಂಗಳೂರು : ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಹಾಗೂ ಗೃಹ ಕಾರ್ಯದರ್ಶಿಯಾಗಿದ್ದ ಡಿ ರೂಪ ನಡುವಿನ ಸಮರ ಸದ್ಯಕ್ಕೆ ನಿಲ್ಲೋವಂತೆ ಕಾಣಿಸುತ್ತಿಲ್ಲ.

ಕರಕುಶಲ ಅಭಿವೃದ್ಧಿ ನಿಮಗದ ವ್ಯವಸ್ಥಾಪಕ ನಿರ್ದೇಶಕಿಯಾಗಿ ಡಿ.ರೂಪಾ ನೇಮಕ

ಹಿರಿಯ ಐಪಿಎಸ್‌ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್ ಮತ್ತು ಡಿ. ರೂಪಾ ಮಧ್ಯೆ ದೊಡ್ಡ ಕಾಳಗವೇ ಏರ್ಪಟ್ಟಿದ್ದರಿಂದಾಗಿ ರಾಜ್ಯ ಸರ್ಕಾರ ಮುಜುಗರ ಅನುಭವಿಸಿತ್ತು. ಈ ಹಿನ್ನೆಲೆಯಲ್ಲಿ ಗೃಹ ಇಲಾಖೆ ಕಾರ್ಯದರ್ಶಿಯಾಗಿದ್ದ ಡಿ.ರೂಪ ಈಗ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅಧಿಕಾರ ಸ್ವೀಕರಿಸಿ ಮೊದಲ ಬಾರಿಗೆ ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ಇಡೀ ಪ್ರಕರಣ ಹಾಗೂ ಮುಂದಿನ ನಡೆಗಳ ಬಗ್ಗೆ ವಿಸ್ತಾರವಾಗಿ ಮನದಾಳ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: 'ಈಗಷ್ಟೇ ಸೂರ್ಯ ಉದಯಿಸಿದೆ' ಪ್ರಧಾನಿ ಕವನ ಲೇವಡಿ ಮಾಡಿದ ಮಹದೇವಪ್ಪ

ಕರಕುಶಲ ಅಭಿವೃದ್ಧಿ ನಿಗಮದ ಅಧಿಕಾರ ಸ್ವೀಕರಿಸಿದ್ದೇನೆ. ಸಂಸ್ಥೆಯ ಬಗ್ಗೆ ಅಧಿಕಾರಿಗಳಿಂದ, ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದೇನೆ. ಬಹಳ ಜನರಿಗೆ ಅನ್ನಿಸುತ್ತಿರಬಹುದು, ಪೊಲೀಸ್ ಅಧಿಕಾರಿಗೆ ಕರಕುಶಲ ನಿಗಮಕ್ಕೆ ವರ್ಗಾವಣೆ ಮಾಡಿರುವುದು ಶಿಕ್ಷೆ ಅಂತಾ ಭಾವಿಸಿರಬಹು. ಆದರೆ, ನಾನು ಕರ್ನಾಟಕದ ಮಗಳು, ಕರ್ನಾಟಕದ ಕರಕುಶಲ ಕಲೆಗಳನ್ನು ನೋಡುತ್ತಾ ಬೆಳೆದವಳು ಎಂದರು.

ಡಿ.ರೂಪಾ ಸಂದರ್ಶನ

ಕರ್ನಾಟಕ ಕರಕುಶಲ ಕಲೆಗಳ ಮೇಲೆ ಹೆಮ್ಮೆ ಇದೆ. ನಮ್ಮ ರಾಜ್ಯದ ಕುಶಲಕರ್ಮಿಗಳ ಜೊತೆ ಒಡನಾಟ ಬೆಳೆಸಿಕೊಳ್ಳುವ, ಅವರ ಕಷ್ಟ ಸುಖಗಳನ್ನು ತಿಳಿದುಕೊಳ್ಳುವ ಅವಕಾಶ ಸಿಕ್ಕಿದೆ. ಸಂಸ್ಥೆ ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ಇದೆ ಎಂದು ಅನ್ನಿಸುತ್ತಿದೆ. ನಾನು ಯಾವತ್ತೂ ಸರ್ಕಾರದ ವಿರುದ್ಧ ಹೋಗಿಲ್ಲ. ವರ್ಗಾವಣೆ ಆದೇಶದ ವಿರುದ್ಧ ಕೋರ್ಟ್, ಆಡಳಿತಾತ್ಮಕ ನ್ಯಾಯ ಮಂಡಳಿ ಮೆಟ್ಟಿಲು ಏರಿಲ್ಲ. ಸರ್ಕಾರದ ವರ್ಗಾವಣೆ ಆದೇಶ ಪಾಲಿಸಿದ್ದೇನೆ ಎಂದು ಸ್ಪಷ್ಟ ಪಡಿಸಿದರು.

ಎಲ್ಲಾ ಹುದ್ದೆಗಳಲ್ಲಿಯೂ ಕೆಲಸ ಮಾಡಲು ಅವಕಾಶ ಇದೆ. ಎಲ್ಲಾ ಕಡೆ ಅಭಿವೃದ್ಧಿ ಮಾಡಬಹುದು. ಸಾರ್ಥಕತೆ ಮೂಡಿಸಬಹುದು. ಪಾರದರ್ಶಕತೆ ತರಬಹುದು. ಈ ನಿಟ್ಟಿನಲ್ಲಿ ನಾನು ಪ್ರಶ್ನಿಸೋಕೆ ಹೋಗಿಲ್ಲ ಎಂದರು. ನನಗೆ ಒಂದು ಸಂತೋಷ ಇದೆ. ಒಬ್ಬ ಅಧಿಕಾರಿ ಸರ್ಕಾರದಿಂದ ಮುಚ್ಚಿಟ್ಟು ಮಾಡಿದ ಹಗರಣ ಬೆಳಕಿಗೆ ಬಂದಿತು.

ನನಗೆ ಅದಕ್ಕೆ ವರ್ಗಾವಣೆ ಆಗಿರಬಹುದು. ಆದರೆ, ಸರ್ಕಾರದ ಹಾಗೂ ಜನರ ಮುಂದೆ ಅವ್ಯವಹಾರ ಬೆಳಕಿಗೆ ತಂದ ಸಾರ್ಥಕ ಭಾವ ನನಗಿದೆ. ಆ ಅಧಿಕಾರಿಯ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆಯಿದೆ ಎಂದು ನಿಂಬಾಳ್ಕರ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದರು. ನಿಗಮದಲ್ಲಿ ಮರದ ಕರಕುಶಲ ವಸ್ತುಗಳು ಮಾತ್ರ ಮಾರಾಟವಾಗುತ್ತಿತ್ತು. ಕಲ್ಲಿನ ಕೆತ್ತನೆಗಳಿಗೆ ಒತ್ತು ಕೊಡುತ್ತೇವೆ. ಶಿಲ್ಪಕಲೆಗಳನ್ನು ದೇವಸ್ಥಾನಗಳಿಗೆ ನೀಡಲು ಕ್ರಮ ಕೈಗೊಳ್ಳುತ್ತೇನೆ ಎಂದರು.

ಇಲ್ಲಿಯೂ ಭ್ರಷ್ಟಾಚಾರ ನಡೆದರೆ ಧ್ವನಿಯೆತ್ತುವುದನ್ನು ನಿಲ್ಲಿಸುವುದಿಲ್ಲ ಎಂದ ರೂಪ ಹೇಳಿದ್ದಾರೆ. ಕೋವಿಡ್ ಕಾರಣ ಜನ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಕಾವೇರಿ ಎಂಪೋರಿಯಂ ವ್ಯಾಪಾರ, ವಹಿವಾಟು ಕಡಿಮೆ ಇದೆ. ನಾನು ಈ ವಿಷಯಗಳ ಬಗ್ಗೆ ಸಮಗ್ರ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುತ್ತೇನೆ ಎಂದರು.

ನಿರ್ಭಯ ನಿಧಿ ಅವ್ಯವಹಾರದ ಟೆಂಡರ್ ಪ್ರಕರಣ ಬೆಳಕಿಗೆ ತಂದಿದ್ದ ಡಿ.ರೂಪ ರಾಷ್ಟ್ರ ಮಟ್ಟದ ಸುದ್ದಿಯಾಗಿದ್ದರು. ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ದ ಈ ಪ್ರಕರಣ ಇಬ್ಬರು ಹಿರಿಯ ಐಪಿಎಸ್‌ ಅಧಿಕಾರಿಗಳ ನಡುವೆ ಭಾರಿ ಕೆಸರೆರಚಾಟಕ್ಕೆ ಕಾರಣವಾಗಿತ್ತು. ಈ ನಿಟ್ಟಿನಲ್ಲಿ ಏಕಾಏಕಿ ರಾಜ್ಯ ಸರ್ಕಾರ ಇಬ್ಬರೂ ಅಧಿಕಾರಿಗಳನ್ನು ವರ್ಗಾಣೆ ಮಾಡಿ ಆದೇಶ ಹೊರಡಿಸಿತ್ತು.

Last Updated : Jan 2, 2021, 12:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.