ETV Bharat / city

ರಾಜಕೀಯ ಬದುಕಿನಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ, 'ಬಂಡೆ'ಯಾಗಲ್ಲ ಕಡಿದ ಕಂಬವಾಗುವೆ: ಡಿಕೆಶಿ - ಡಿಕೆಶಿ ಪದಗ್ರಹಣ ಸುದ್ದಿ

ಕನಕಪುರದ ಬಂಡೆಯಾಗಿ ಉಳಿಯಲು ನಾನು ಇಚ್ಛಿಸುವವನಲ್ಲ. ಬಂಡೆಯಾಗಿ ಉಳಿಯದೆ ಕಡಿದ ಕಂಬವಾಗಲು ಬಯಸುತ್ತೇನೆ. ನಾನು ಶಿಲ್ಪವಾಗಲು ಬಯಸುವುದಿಲ್ಲ ಜನ ನಡೆದಾಡುವ ಚಪ್ಪಡಿ ಕಲ್ಲಾಗಲು ಬಯಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

D K Shivkumar
ಡಿಕೆಶಿ
author img

By

Published : Jul 2, 2020, 1:47 PM IST

Updated : Jul 2, 2020, 2:14 PM IST

ಬೆಂಗಳೂರು: 'ಅವಕಾಶಗಳನ್ನು ಇಲ್ಲಿ ಯಾರೂ ಸೃಷ್ಟಿಸಿ ಕೊಡುವುದಿಲ್ಲ ನೀನೇ ಸೃಷ್ಟಿಸಿಕೊಳ್ಳಬೇಕು' ಎಂದು ಇಂದಿರಾಗಾಂಧಿ ಹೇಳಿದ ಮಾತನ್ನ ನನ್ನ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದಿದ್ದೇನೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಸಾಕಷ್ಟು ನಾಯಕರ ಕೈಕೆಳಗೆ ದುಡಿದ ಅನುಭವ ನನಗಿದೆ. ಅತ್ಯಂತ ತಳಮಟ್ಟದಿಂದ ಕಾರ್ಯ ನಿರ್ವಹಿಸಿಕೊಂಡು ಬಂದಿದ್ದೇನೆ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ನಾನು ಮೊದಲಿಗೆ ಪಕ್ಷದ ಕಾರ್ಯಕರ್ತ, ನಂತರ ನನ್ನ ಅಧ್ಯಕ್ಷ ಸ್ಥಾನ. ನಡೆದಂತೆ ನುಡಿದಿದ್ದೇನೆ ಹಾಗೂ ನುಡಿದಂತೆ ನಡೆದಿದ್ದೇನೆ. ಯಾರಿಗೂ ಅನ್ಯಾಯ ಮಾಡಿಲ್ಲ. ಇದನ್ನು ಪ್ರಾಮಾಣಿಕವಾಗಿ ಹೇಳಿಕೊಳ್ಳುತ್ತೇನೆ ಎಂದರು.

ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಿಕೆಶಿ

ಗಾಂಧಿ ಕುಟುಂಬ ನನಗೆ ಶಕ್ತಿ ನೀಡಿದೆ :

ಅನೇಕ ಮುಖ್ಯಮಂತ್ರಿಗಳ ಕೈಕೆಳಗೆ ಕೆಲಸ ಮಾಡಿದ್ದೇನೆ. ಬಂಗಾರಪ್ಪ, ಎಸ್ಎಂ ಕೃಷ್ಣ, ಧರ್ಮಸಿಂಗ್ ಹಾಗೂ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕಾರ್ಯ ನಿರ್ವಹಿಸಿದ್ದೇನೆ. ಪಕ್ಷದ ಹೈಕಮಾಂಡ್ ನೀಡಿದ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ವಿವಿಧ ರಾಜ್ಯಗಳಿಗೆ ತೆರಳಿ ನನ್ನ ಸಾಮರ್ಥ್ಯ ಮೀರಿ ಕೆಲಸ ಮಾಡಿದ್ದೇನೆ. ಗಾಂಧಿ ಕುಟುಂಬ ನನಗೆ ಶಕ್ತಿ ನೀಡಿದೆ. ರಕ್ತದ ಕೊನೆಯ ಕಣ ಇರುವವರೆಗೂ ಅವರ ಕೊಡುಗೆ ಮರೆಯಲು ಸಾಧ್ಯವಿಲ್ಲ. ಪಕ್ಷಕ್ಕಾಗಿ ದುಡಿಯುತ್ತೇನೆ ಎಂದರು.

ಹೊಸ ಅಧ್ಯಾಯ ಆರಂಭವಾಗಬೇಕು :

ಅಂದು ಪಕ್ಷಕ್ಕೆ ಶಕ್ತಿ ತುಂಬಿದ್ದು ಇಂದಿರಾಗಾಂಧಿ. ಪಕ್ಷದ ಸೇವಾದಳ, ವಿದ್ಯಾರ್ಥಿ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್​​ಗಳಿಗೆ ಸ್ಫೂರ್ತಿ ತುಂಬಿದ್ದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು. ಇವು ಪಕ್ಷದ ಯಶಸ್ಸಿನ ಆಧಾರಸ್ತಂಭಗಳು. ನಾವೆಲ್ಲ ಸೇರಿ ಪಕ್ಷವನ್ನು ಬಲಪಡಿಸುವ ಕಾರ್ಯ ಮಾಡಬೇಕು. ಪಕ್ಷ ಒಗ್ಗಟ್ಟಾಗಿದ್ದರೆ ಮಾತ್ರ ಸಾಧನೆ ಸಾಧ್ಯ ಎನ್ನುವುದನ್ನು ನಾವು ಅರಿಯಬೇಕು. ಪಕ್ಷದ ಹೊಸ ಅಧ್ಯಾಯ ಆರಂಭವಾಗಬೇಕಿದೆ. ಇಂದು ಬೆಳಗಿದ ಜ್ಯೋತಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಶಕ್ತಿ ತುಂಬುವ ಕಾರ್ಯ ಆಗಬೇಕಿದೆ. ಶಕ್ತಿ ತುಂಬದಿದ್ದರೆ ಪಕ್ಷದ ಪ್ರಗತಿ ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷವನ್ನು ನಾನು ಮಾಸ್ ಬೇಸ್ ಪಾರ್ಟಿಯಿಂದ ಕೇಡರ್ ಬೇಸ್ ಪಾರ್ಟಿಯಾಗಿ ಪರಿವರ್ತಿಸುತ್ತೇನೆ. ಪಕ್ಷಕ್ಕೆ ಈ ನಿಟ್ಟಿನಲ್ಲಿ ಬಲ ತುಂಬಲು ನಾನು ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇನೆ ಎಂದು ಡಿಕೆಶಿ ಹೇಳಿದರು.

ನಾನೊಬ್ಬ ಕಾಂಗ್ರೆಸ್ಸಿಗ :

ವೈಯಕ್ತಿಕವಾಗಿ ನಾನು ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ನನಗೆ ಯಾವುದೇ ಜಾತಿ ಗುಂಪುಗಳ ಮೇಲೆ ವಿಶ್ವಾಸವಿಲ್ಲ. ಕಾಂಗ್ರೆಸ್ ಜಾತಿ, ಕಾಂಗ್ರೆಸ್ ಗುಂಪು, ಕಾಂಗ್ರೆಸ್ ಮತದ ಮೇಲೆ ನನಗೆ ನಂಬಿಕೆ ಇದೆ. ನಾನೊಬ್ಬ ಕಾಂಗ್ರೆಸ್ಸಿಗ ಎನ್ನುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಪಕ್ಷದ ಸದಸ್ಯರು ತ್ಯಾಗದ ಸಂಕೇತದ ಸದಸ್ಯರಾಗಿದ್ದಾರೆ. ಪಕ್ಷದ ಶಾಲಿಗೆ ಇರುವ ಗೌರವ ಬೇರೆ ಯಾವ ಪಕ್ಷಕ್ಕೂ ಇಲ್ಲ. ಇದನ್ನು ಧರಿಸುವ ಪ್ರತಿಯೊಬ್ಬ ಕಾರ್ಯಕರ್ತನ ಮನೆಗೆ ತೆರಳಿ ಗೌರವಿಸುವ ಕಾರ್ಯವನ್ನು ನಾವು ಮಾಡಬೇಕಿದೆ. ಎಷ್ಟು ಜನರನ್ನು ಬೇಕಾದರೂ ಬೆಳೆಸುವ ಸಾಮರ್ಥ್ಯ ನಮ್ಮಲ್ಲಿದೆ. ನಮಗೆ ಎಲ್ಲರೂ ಒಂದೇ. ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೂ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಪ್ರತಿಯೊಬ್ಬರು ಒಟ್ಟಾಗಿ ಶ್ರಮಿಸಬೇಕು ಎಂದರು.

ಬಂಡೆಯಾಗಲ್ಲ ಕಡಿದ ಕಂಬವಾಗುವೆ :

ಪಕ್ಷಕ್ಕೆ ರಾಜೀವ್ ಗಾಂಧಿ ಅವರು ನೀಡಿದ ಯುವಶಕ್ತಿಯ ಬೆಂಬಲ ಇದೆ. ಇಂದಿನ ಮಾಹಿತಿ ತಂತ್ರಜ್ಞಾನಕ್ಕೆ ತಳಪಾಯ ಹಾಕಿದ್ದೆ ಅವರು. ಇದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಯಾರು ಎಷ್ಟೇ ತೊಂದರೆ ಕೊಡಲಿ ಏನೇ ಮಾಡಲಿ ಪಕ್ಷ ಕಟ್ಟುವ ಕಾರ್ಯವನ್ನು ನಾವು ಮುಂದುವರಿಸಬೇಕು. ನನ್ನ ಮೇಲೆ ಮೇಲಿಂದ ಮೇಲೆ ದಾಳಿಗಳು ನಡೆದವು. ಆದರೆ ಈ ಡಿ ಕೆ ಶಿವಕುಮಾರ್ ಯಾರಿಗೂ ಜಗ್ಗುವವನು ಅಲ್ಲ. ಕನಕಪುರದ ಬಂಡೆಯಾಗಿ ಉಳಿಯಲು ನಾನು ಇಚ್ಚಿಸುವವನಲ್ಲ. ಬಂಡೆಯಾಗಿ ಉಳಿಯದೆ ಕಡಿದ ಕಂಬವಾಗಲು ಬಯಸುತ್ತೇನೆ. ನಾನು ಶಿಲ್ಪವಾಗಲು ಬಯಸುವುದಿಲ್ಲ, ಜನ ನಡೆದಾಡುವ ಚಪ್ಪಡಿ ಕಲ್ಲಾಗಲು ಬಯಸುತ್ತೇನೆ. ಪಕ್ಷ ಕಟ್ಟುವ ಕಾರ್ಯದಲ್ಲಿ ಬೇಧ ಮರೆತು ನಾವೆಲ್ಲ ಒಂದಾಗಿ ಶ್ರಮಿಸೋಣ ಎಂದು ಕಾರ್ಯಕರ್ತರಿಗೆ ಡಿಕೆಶಿ ಕರೆ ಕೊಟ್ಟರು.

ಬಿಜೆಪಿ ಮುಕ್ತ ರಾಜ್ಯ ಮಾಡೋಣ

ನಾವು ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ 100 ಕೋಟಿ ರೂ. ಮೌಲ್ಯದ ತರಕಾರಿಗಳನ್ನು ಖರೀದಿಸಿ ಜನರಿಗೆ ಹಂಚುವ ಕಾರ್ಯ ಮಾಡಿದ್ದೇವೆ. ರೈತರು ಹಾಗೂ ಶ್ರಮಿಕರ ಪರವಾಗಿ ನಿಲ್ಲುವ ಕೆಲಸ ಮಾಡಿ ನಾವು ಇಡೀ ದೇಶದಲ್ಲಿ ಬಿಜೆಪಿಗೆ ಒಂದು ಸಂದೇಶ ನೀಡುವ ಕಾರ್ಯ ಮಾಡಿದ್ದೇವೆ. ಕಾರ್ಮಿಕರು ದೇಶ ಕಟ್ಟುವಲ್ಲಿ ಶ್ರಮಿಸಿದ ಸಮುದಾಯದವರು. ಆದರೆ ಇವರಿಗೆ ಹಣ ಹಾಗೂ ಆಹಾರದ ಕಿಟ್ ನೀಡುವ ಕಾರ್ಯವನ್ನು ಸರ್ಕಾರ ಮಾಡಲಿಲ್ಲ. ನೋವು ಹಾಗೂ ಸಂಕಟದಲ್ಲಿ ಇದ್ದವರಿಗೆ ಸ್ಪಂದಿಸುವ ಕಾರ್ಯವನ್ನು ನಾವು ಮಾಡಿದ್ದೇವೆ. ಇದನ್ನ ಮುಂದುವರಿಸುವ ಕಾರ್ಯ ಮಾಡೋಣ. ಜನ ಸತ್ತ ಮೇಲೆ ನೀವು ಹಣ ಕೊಡುತ್ತೀರಾ? ಜನರ ಪರವಾಗಿ ದನಿ ಎತ್ತುವುದಕ್ಕೆ ನಮ್ಮ ಪಕ್ಷ ಇರುವುದು. ಮುಂದಿನ ದಿನಗಳಲ್ಲಿ ಜನ ಪರ ಹೋರಾಟವನ್ನು ಮುಂದುವರಿಸಬೇಕಾಗಿದೆ. ಕೇಂದ್ರ ಸರ್ಕಾರ ನೀಡಿದ ಹಣ ಯಾರಿಗೂ ತಲುಪಿಲ್ಲ. ಜನ ದಿನದಿಂದ ದಿನಕ್ಕೆ ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ. ಇದರಿಂದ ನಾವು ಬಿಜೆಪಿ ಮುಕ್ತ ರಾಜ್ಯವನ್ನು ನಿರ್ಮಾಣ ಮಾಡುವ ಪ್ರತಿಜ್ಞೆ ಕೈಗೊಳ್ಳಬೇಕಾಗಿದೆ ಎಂದರು.

ಸರ್ವರಿಗೂ ಸಮಬಾಳು ಸಮಪಾಲು ನೀತಿ ನಮ್ಮದಾಗಲಿ. ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಶಕ್ತಿ ಹಾಗೂ ಸಾಮರ್ಥ್ಯ ನಮ್ಮಲ್ಲಿ ಹಾಗೂ ನಮ್ಮ ಪಕ್ಷದ ಕಾರ್ಯಕರ್ತರಿಗೆ ಇದೆ. ನನ್ನನ್ನು ನಿಮ್ಮ ಮಗ ಎಂದು ಪರಿಗಣಿಸಿ. ಧರ್ಮಕ್ಕೆ ಯಾವತ್ತೂ ಬಲವಿದೆ, ಗೆಲುವಿದೆ. ಪಕ್ಷದ ಮೇಲೆ ಬೇಸರಗೊಂಡವರನ್ನ ಮತ್ತೊಮ್ಮೆ ಒಗ್ಗೂಡಿಸಿಕೊಂಡು ಕಾಂಗ್ರೆಸ್​ನ ಶಕ್ತಿ ಹಾಗೂ ಇತಿಹಾಸವನ್ನು ಪರಿಚಯಿಸುವ ಕಾರ್ಯ ಮಾಡುತ್ತೇನೆ. ಪಕ್ಷದ ತತ್ವ ಸಿದ್ಧಾಂತವನ್ನು ಉಳಿಸಿಕೊಂಡು ಇನ್ನೊಮ್ಮೆ ಪಕ್ಷ ಕಟ್ಟುವ ಕಾರ್ಯ ಮಾಡೋಣ. ನಿಮ್ಮ ಸಹಕಾರ ಇರಲಿ. ಪ್ರತಿಯೊಬ್ಬ ಕಾಂಗ್ರೆಸ್ಸಿಗರು ಇಂದು ಪಕ್ಷಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿಮ್ಮ ಇತಿಹಾಸ ನನ್ನ ಇತಿಹಾಸ, ನಿಮ್ಮ ಶಕ್ತಿ ನನ್ನ ಶಕ್ತಿ. ನಾವು ಗೆದ್ದರೆ ಕಾಂಗ್ರೆಸ್ ಗೆದ್ದಂತೆ. ಬೀಳುತ್ತೇವೆ, ಏಳುತ್ತೇವೆ. ಆದರೆ ಸವಾಲುಗಳನ್ನ ಎದುರಿಸುವ ಶಕ್ತಿ ಈ ಪಕ್ಷಕ್ಕೆ ಇದೆ. ಎಂತೆಂಥ ಸಂದರ್ಭದಲ್ಲಿ ಏನೇನೋ ಆಗಿದೆ. ಪಕ್ಷ ಮತ್ತೆ ಪ್ರಗತಿ ಸಾಧಿಸಲಿದೆ ಎಂಬ ವಿಶ್ವಾಸ ನಿಮಗೆ ನೀಡುತ್ತೇನೆ ಎಂದು ಡಿಕೆಶಿ ಭರವಸೆ ನೀಡಿದರು.

Last Updated : Jul 2, 2020, 2:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.