ETV Bharat / city

ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ.. ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಡಿಕೆಶಿ

ಮುಖ್ಯಮಂತ್ರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನವಿ ಹೊಸ ಪಠ್ಯ ಪುಸ್ತಕಗಳನ್ನು ಹಿಂಪಡೆದು ಹಳೆಯ ಪಠ್ಯ ಪುಸ್ತಕಗಳನ್ನೇ ಮುಂದುವರಿಸಿ ವಾತಾವರಣವನ್ನು ತಿಳಿಗೊಳಸಿ ಎಂದು ಪತ್ರ ಬರೆದಿದ್ದಾರೆ.

D K Shivakumar writes letter to Bommai about textbook revision
ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಬೊಮ್ಮಾಯಿಗೆ ಪತ್ರ ಬರೆದ ಡಿಕೆಶಿ
author img

By

Published : May 31, 2022, 11:01 PM IST

ಬೆಂಗಳೂರು: ಹೊಸ ಪಠ್ಯ ಪುಸ್ತಕಗಳನ್ನು ಹಿಂಪಡೆದು ಹಳೆಯ ಪಠ್ಯಪುಸ್ತಕಗಳನ್ನು ಮುಂದುವರೆಸಿ ವಾತಾವರಣವನ್ನು ತಿಳಿಗೊಳಿಸಬೇಕು ಎಂದು ಮುಖ್ಯಮಂತ್ರಿಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

ಪಠ್ಯಪುಸ್ತಕ ವಿಚಾರವಾಗಿ ಎದ್ದಿರುವ ಗೊಂದಲಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿರುವ ಡಿಕೆಶಿ, ಕರ್ನಾಟಕದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯು ಪ್ರಮುಖ ದಾರ್ಶನಿಕರು ಮತ್ತು ದೇಶಭಕ್ತರ ಬಗೆಗಿನ ಪಠ್ಯಗಳನ್ನು ಕೈಬಿಟ್ಟಿರುವ/ತಿರುಚಿರುವ, ರಾಜ್ಯದ ಹೆಮ್ಮೆಯ ಸಾಹಿತಿಗಳ ಹಾಗೂ ನಮ್ಮ ಬಹುತ್ವದ ಸಂಸ್ಕೃತಿಗೆ ಪೂರಕವಾದ ಲೇಖನಗಳನ್ನು ಕೈಬಿಟ್ಟು ಸಂಕುಚಿತವಾದವನ್ನು ಬೆಂಬಲಿಸುವ ಹಾಗೂ ಮತೀಯವಾದವನ್ನು ಪ್ರಚೋದಿಸುವ ವ್ಯಕ್ತಿಗಳ ಲೇಖನಗಳನ್ನು ಸೇರಿಸಿರುವ ಕುರಿತಾದಂತೆ ರಾಜ್ಯಾದ್ಯಂತ ವ್ಯಾಪಕವಾದ ಆಕ್ರೋಶವು ಭುಗಿಲೆದ್ದಿದ್ದು, ಕನ್ನಡಿಗರು, ಹೆತ್ತವರು ಮತ್ತು ವಿದ್ಯಾರ್ಥಿಗಳು ಆತಂಕಿತರಾಗಿದ್ದಾರೆ.

ಮುಖ್ಯಮಂತ್ರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನವಿ

ಕನ್ನಡದ ಹೆಮ್ಮೆಯ ಮತ್ತು ಅತ್ಯಂತ ಗೌರವಾನ್ವಿತ ರಾಷ್ಟ್ರಕವಿಗಳಾದ ಕುವೆಂಪು ಅವರ ಬಗ್ಗೆ ಅತ್ಯಂತ ಕೀಳಾಗಿ ಅಪಮಾನ ಮಾಡಿರುವ, ನಾಡಗೀತೆಗೆ ಅವಮಾನ ಮತ್ತು ನಾಡಧ್ವಜವನ್ನು ಅಪಹಾಸ್ಯ ಮಾಡಿರುವ ಸಮಿತಿಯ ಅಧ್ಯಕ್ಷರ ಬಗ್ಗೆ ಜನರು ರೊಚ್ಚಿಗೆದ್ದಿರುತ್ತಾರೆ ಎಂದು ತಿಳಿಸಿದ್ದಾರೆ.

ಸಮಿತಿಯು ಪಠ್ಯ ಪುಸ್ತಕಗಳಲ್ಲಿ: ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಕುರಿತ ಪಾಠವನ್ನು ತಿರುಚಿದ್ದು, ಬುದ್ಧರ ಪಾಠವನ್ನು ಕಿತ್ತು ಹಾಕಲಾಗಿದೆ. ಬಸವಣ್ಣನವರ ವಚನಗಳು ಹಾಗು ಜೀವನಗಾಥೆಗೆ ತಿದ್ದುಪಡಿ ಮಾಡಿದೆ ನಾರಾಯಣ ಗುರುಗಳ ಪಾಠ ಇನ್ನೊಂದೆಡೆ ತಿರುಚಿ ಸೇರಿಸಲಾಗಿದೆ. ಸಾ.ರಾ. ಅಬೂಬಕ್ಕರ್‌ ಅವರ ಮಾನವೀಯ ನೆಲೆಯ ಕಥೆಯನ್ನು ಕೈ ಬಿಟ್ಟಿದೆ. ಇತಿಹಾಸಕ್ಕೆ ಕೋಮು ದ್ವೇಷದ ಲೇಪ ಹಚ್ಚಿದೆ. ಬಿ.ಟಿ. ಲಲಿತಾ ನಾಯಕ್‌ರವರ ಪದ್ಯ ಕಿತ್ತು ಹಾಕಿದೆ. ಕೋಮುವಾದ ಎಂದರೆ ಮುಸ್ಲಿಂ ಕೋಮುವಾದ ಎಂದು ಬಿಂಬಿಸಿದೆ. ಪ್ರಾದೇಶಿಕವಾದ ಎಂದರೆ ದೇಶದ್ರೋಹ ಎಂದು ಬಿಂಬಿಸಿದೆ. ಮಹಿಳೆಯರನ್ನು ಕೀಳಾಗಿ ಚಿತ್ರಿಸಿದ ಪಾಠ ಸೇರಿಸಿದೆ ಎನ್ನುವ ವಿಚಾರದಲ್ಲಿ ಎಲ್ಲೆಲ್ಲೂ ವ್ಯಾಪಕವಾದ ಆಕ್ರೋಶ ವ್ಯಕ್ತವಾಗುತ್ತಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ವಿದ್ಯಾರಂಗದ ಮೇಲೆ ಇತ್ತೀಚೆಗೆ ನಡೆಯುತ್ತಿರುವ ಅಸಂವಿಧಾನಿಕ ದಾಳಿ ಮತ್ತು ದಬ್ಬಾಳಿಕೆ ಹಾಗೂ ಅದರ ಬಗ್ಗೆ ಸರಕಾರದ ನಿರ್ಲಕ್ಷ್ಯ, ಮೌನ ಮತ್ತು ಬಹಿರಂಗವಾಗಿಯೇ ಮತೀಯ ದ್ವೇಶವನ್ನು ಹರಡುವವರನ್ನು ನಿಗ್ರಹಿಸದ ಸರ್ಕಾರದ ನಿಷ್ಕ್ರಿಯತೆಯಿಂದ ಆತಂಕಿತರಾಗಿ ಮತ್ತು ಅದನ್ನು ವಿರೋಧಿಸಿ ಗಣ್ಯ ಸಾಹಿತಿಗಳಾದ ಎಸ್.ಜಿ. ಸಿದ್ದರಾಮಯ್ಯ, ಎಚ್.ಎಸ್. ರಾಘವೇಂದ್ರ ರಾವ್, ನಟರಾಜ ಬುದಾಳು, ಚಂದ್ರಶೇಖರ್ ನಂಗ್ಲಿ ಕೆ.ಎಸ್ ಮಧುಸೂದನ್ ಮುಂತಾದವರು ರಾಜ್ಯ ಸರ್ಕಾರದ ಸಮಿತಿಗಳಿಗೆ ರಾಜೀನಾಮೆಯನ್ನು ಸಲ್ಲಿಸಿರುತ್ತಾರೆ.

ಹಿರಿಯ ಸಾಹಿತಿಗಳಾದ ದೇವನೂರು ಮಹಾದೇವ, ಈರಪ್ಪ ಕಂಬ್ಳೆ, ಚಂದ್ರಶೇಖರ್ ತಾಳ್ಯ ಮುಂತಾದವರು ತಮ್ಮ ಲೇಖನಗಳನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಲು ನೀಡಿರುವ ಸಮ್ಮತಿಯನ್ನು ವಾಪಸ್ಸು ಪಡೆದಿರುತ್ತಾರೆ. ವಿದ್ಯಾರಂಗಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಈ ಆತಂಕದ ವಿದ್ಯಮಾನಗಳನ್ನು ತಾವು ಆದ್ಯತೆಯ ಮೇಲೆ ಪರಿಗಣಿಸಿ, ಈಗಿನ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯನ್ನು ತಕ್ಷಣದಿಂದಲೇ ರದ್ದುಗೊಳಿಸಿ, ಹೊಸ ಪಠ್ಯ ಪುಸ್ತಕಗಳನ್ನು ಹಿಂಪಡೆದು ಹಳೆಯ ಪಠ್ಯ ಪುಸ್ತಕಗಳನ್ನೇ ಮುಂದುವರಿಸಿ, ವಾತಾವರಣವನ್ನು ತಿಳಿಗೊಳಿಸುವಂತೆ ಕೋರುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಕೋಮುವಾದಕ್ಕೆ, ಕೋಮುವಾದವೇ ಉತ್ತರವಲ್ಲ: ಕೆ.ಟಿ. ಜಲೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.