ಬೆಂಗಳೂರು : ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ ಸಂಬಂಧ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಸುಪ್ರೀಂಕೋರ್ಟ್ನಲ್ಲಿ ಈ ಬಗ್ಗೆ ಬೇಕಾದಷ್ಟು ತೀರ್ಮಾನ ಆಗಿದೆ. ಎಲ್ಲಾ ಧರ್ಮದ ವಿಚಾರ, ಯಾರಾರು ಏನು ಅಂತಾ ಪೊಲ್ಯುಷನ್ ಕಂಟ್ರೋಲ್ ಬೋರ್ಡ್ ತೀರ್ಮಾನ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಮಸೀದಿಗಳಲ್ಲಿ ಮೈಕ್ ತೆರವು ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಾನು ಹೇಳುತ್ತೇನೆ, ಇನ್ನೊಬ್ಬರು ಹೇಳ್ತಾರೆ ಅಂತಾ ಮೈಕ್ ತೆಗೆಯೋಕೆ ಆಗಲ್ಲ. ಈಗಾಗಲೇ ದೇಶದಲ್ಲಿ ಇದರ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಈಗ ಅದನ್ನು ಚರ್ಚೆ ಮಾಡುವ ಅವಶ್ಯಕತೆಯಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಮೈಕ್ ಬ್ಯಾನ್ ಅಭಿಯಾನ : ಮತ್ತೆ ಸಮುದಾಯದ ವಿರುದ್ಧ ಗುಟುರು ಹಾಕಿದ ಕಾಳಿಸ್ವಾಮಿ