ಬೆಂಗಳೂರು: ಪಕ್ಷ ಸಂಘಟನೆ ಬಗ್ಗೆ ಇಂದು ಸಭೆ ನಡೆಸಿದ್ದೇವೆ. ಪಕ್ಷದ ಸಿದ್ಧಾಂತಗಳನ್ನು ಜನರಿಗೆ ಮುಟ್ಟಿಸಬೇಕಿದೆ. ಪ್ರತಿಯೊಂದು ಬೂತ್ನಲ್ಲಿ ಕಾರ್ಯಕರ್ತರಿಗೆ ಶಕ್ತಿ ತುಂಬುವಂತ ಪ್ರಯತ್ನ ಮಾಡುತ್ತಿದ್ದೇವೆ. ಪ್ರತಿಯೊಂದು ಕ್ಷೇತ್ರಕ್ಕೂ ಪ್ರತ್ಯೇಕ ಪ್ರಣಾಳಿಕೆ ರೂಪಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ರಾಜ್ಯ ಉಸ್ತುವಾರಿ ಸುರ್ಜೇವಾಲ ಮಾತನಾಡಿ, ಮೋದಿ ಭ್ರಷ್ಟಾಚಾರದ ಬಗ್ಗೆ ಮೊದಲು ಮಾತನಾಡಲಿ. ಪೆಟ್ರೋಲ್ ಮೇಲಿನ ಸೆಸ್ ಯಾವಾಗ ಕಡಿಮೆ ಮಾಡುತ್ತೀರಾ?. ಗ್ಯಾಸ್ ಸಿಲಿಂಡರ್ ಬೆಲೆ 480 ರೂ ಇತ್ತು. ಈಗ ಗ್ಯಾಸ್ ಬೆಲೆ 1000 ರೂಗೆ ಬಂದಿದೆ. ಈ ದರ ಏರಿಕೆ ಸಾಮಾನ್ಯ ಜನರಿಗೆ ಹೊರೆಯಾಗಿದೆ, ಇವುಗಳ ಬಗ್ಗೆ ಚಿಂತಿಸಿ ಎಂದು ಹೇಳಿದರು.
ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಮಾತನಾಡಿ, ಪೆಟ್ರೋಲ್ ಡಿಸೇಲ್ ಮೇಲಿನ ತೆರಿಗೆಯನ್ನು ರಾಜ್ಯ ಸರ್ಕಾರಗಳಷ್ಟೇ ಅಲ್ಲ. ಕೇಂದ್ರ ಸರ್ಕಾರವು ಕಡಿಮೆ ಮಾಡಲಿ. ಪ್ರತಿಯೊಂದಕ್ಕೂ ಬಡವರ ಮೇಲೆ ಬಾರ ಹಾಕುತ್ತಿದ್ದಾರೆ. ನಾವು ಹಿಂದೆ ಎಲ್ಲದರಲ್ಲೂ ಸಬ್ಸಿಡಿ ಕೊಟ್ಟಿದ್ದೆವು. ನಮಗೆ ಸಲಹೆ ಕೊಡುವುದನ್ನ ಬಿಡಿ ಎಂದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಪದಾಧಿಕಾರಿಗಳ ಸಭೆಯನ್ನ ನಡೆಸಿದ್ದೇವೆ. 24/7 ರೀತಿ ಕೆಲಸ ಮಾಡುವಂತೆ ಹೇಳಿದ್ದೇವೆ. ಸರ್ಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಕಂಟ್ರಾಕ್ಟರ್ ಅಸೋಸಿಯೇಶನ್ ಲಂಚದ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಪ್ರಧಾನಿ ಇಲ್ಲಿಯವರೆಗೆ ಯಾವ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಇದನ್ನೂ ಓದಿ: ರಾಜ್ಯದಲ್ಲಿ ಅನಾವಶ್ಯಕ ಕೋವಿಡ್ ನಿರ್ಬಂಧ ಇಲ್ಲ: ಸಿಎಂ ಬೊಮ್ಮಾಯಿ