ಬೆಂಗಳೂರು: ದರೋಡೆಗೆ ಸಂಚು ರೂಪಿಸಿದ್ದ ಸೈಕಲ್ ರವಿ ಸಹಚರರನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಲುಂಬಿಣಿ ಗಾರ್ಡನ್ ಬಳಿಯ ಸರ್ವೀಸ್ ರಸ್ತೆಯಲ್ಲಿ ಸಾರ್ವಜನಿಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ನಗದು ಚಿನ್ನ ಎಗರಿಸಲು ಆರೋಪಿಗಳು ಸ್ಕೆಚ್ ಆಗಿದ್ದರು.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ತಂಡ, ಗಂಗಾಧರ ಅಲಿಯಾಸ್ ಕರಿ ಗಂಗಾಧರ್, ಶಿವಕುಮಾರ್, ಅರ್ಜುನ್, ಮಂಜುನಾಥ್ ಹಾಗೂ ನರೇಶ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಬಂಧಿತರಿಂದ ಕೃತ್ಯ ಎಸಗಲು ಇಟ್ಟುಕೊಂಡಿದ್ದ ಲೋಗಾನ್ ಕಾರು, ಎರಡು ಲಾಂಗ್, ಎರಡು ದೊಣ್ಣೆ ಹಾಗೂ ಎರಡು ಕತ್ತಿಯನ್ನು ವಶಪಡಿಸಿದ್ದಾರೆ.
ಇನ್ನು ಸಿಸಿಬಿ ಪೊಲೀಸರು ಆರೋಪಿಗಳನ್ನ ವಿಚಾರಣೆಗೆ ಒಳಪಡಿದಾಗ, ಆರೋಪಿಗಳು ಕುಖ್ಯಾತ ರೌಡಿ ಸೈಕಲ್ ರವಿಯ ಸಹಚರರಾಗಿರುವ ವಿಚಾರ ಬೆಳಕಿಗೆ ಬಂದಿದ್ದು, ತನಿಖೆ ಮುಂದುವರೆದಿದೆ.