ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಬೆಂಗಳೂರಿನಿಂದ ಕೋಲಾರದವರೆಗೆ 75ಕಿ.ಮೀ ಸೈಕಲ್ ಜಾಥಾಗೆ ಚಾಲನೆ ದೊರೆತಿದೆ.
ವಿಧಾನಸೌಧ ಮುಂಭಾಗದಿಂದ ಸೈಕಲ್ ಜಾಥಾಕ್ಕೆ ಸಂಸದ ತೇಜಸ್ವಿ ಸೂರ್ಯ ಚಾಲನೆ ನೀಡಿದ್ದು ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಪ್ಯಾರಾ ಅಥ್ಲೀಟ್ ಕೆ.ವೈ.ವೆಂಕಟೇಶ್, ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಆನಂದ್, ಇತ್ತೀಚೆಗಷ್ಟೇ ಭಾರತದಾದ್ಯಂತ 25 ಸಾವಿರ ಕಿ.ಮೀ ಸೈಕಲ್ ಯಾನ ಕೈಗೊಂಡಿದ್ದ ಎಂ.ಧನುಷ್ ಹಾಗೂ ವೈ.ಬಿ.ಹೇಮಂತ್ ಭಾಗಿಯಾಗಿದ್ದರು.