ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಸಿಮ್ ಸ್ವ್ಯಾಪಿಂಗ್ ಪ್ರಕರಣವನ್ನ ಸೈಬರ್ ಕ್ರೈಂ ಪೊಲೀಸರು ಬಯಲಿಗೆ ಎಳೆದು, ದಾಖಲೆ ಸಮೇತ ಪತ್ತೆ ಮಾಡಿ ವಂಚಕರ ಬೆನ್ನತ್ತಿದ್ದಾರೆ. ಏರ್ಟೆಲ್ ಕಂಪನಿಯ ಹೆಸರಿನಲ್ಲಿ ರೀಟೇಲರ್ಸ್ ಕೈ ಜೋಡಿಸಿ, ಸಾವಿರಾರು ನಂಬರ್ಗಳಿಗೆ ಆಧಾರ್ ಕಾರ್ಡ್ ಹಾಗೂ ಫೇಕ್ ದಾಖಲೆಗಳನ್ನು ತೆಗೆದುಕೊಂಡು ಮೋಸ ಮಾಡಿದ್ದಾರೆ.
ಈ ವಿಚಾರ ಭಾರತಿ ಏರ್ಟೆಲ್ಗೆ ಸಿಕ್ಕಿದ್ದು, ತಕ್ಷಣ ಸೈಬರ್ ಕ್ರೈಂಗೆ 8888,12345, 3333 ಹೀಗೆ ಹಲವಾರು ಫ್ಯಾನ್ಸಿ ನಂಬರ್ಗಳಿಂದ ದೋಖಾ ಆಗಿರುವ ಮಾಹಿತಿ ನೀಡಿದ್ದಾರೆ. ಸೈಬರ್ ಪೊಲೀಸರು ತನಿಖೆ ನಡೆಸಿದಾಗ ರೀಟೆಲರ್ ಹಾಗೂ ಗ್ರಾಹಕರ ನಡುವೆ ಈ ಹಗರಣ ನಡೆದಿರುವ ವಿಚಾರ ಬಯಲಾಗಿದೆ. ಸದ್ಯ ಪ್ರಕರಣದಲ್ಲಿ 5 ಜನರನ್ನ ಬಂಧಿಸಿರುವ ಸೈಬರ್ ಕ್ರೈಂ ಪೊಲೀಸರು, ಒಟ್ಟು 18 ಫ್ಯಾನ್ಸಿ ನಂಬರ್ಗಳನ್ನ ಪತ್ತೆ ಹಚ್ಚಿದ್ದು, ಅತಿ ಹೆಚ್ಚು ಚಿಕ್ಕಬಳ್ಳಾಪುರದಿಂದ ಸಿಮ್ ಸ್ವ್ಯಾಪಿಂಗ್ ಆಗಿರುವ ವಿಚಾರ ತಿಳಿದು ಬಂದಿದೆ. ಇದರ ಜಾಲ ಹಿಡಿದು ಸೈಬರ್ ಕ್ರೈಂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಏನಿದು ಸಿಮ್ ಸ್ವ್ಯಾಪಿಂಗ್?
ಸಿಮ್ ಕಾರ್ಡ್ ವರ್ಕ್ ಆಗದಿದ್ದಲ್ಲಿ ಸರ್ವೀಸ್ ಪ್ರೊವೈಡರ್ಗಳು ಅದೇ ನಂಬರ್ನಲ್ಲಿ ಬೇರೊಂದು ಸಿಮ್ ನೀಡುತ್ತಾರೆ. ಆದ್ರೆ ಹಳೆ ಸಿಮ್ನಲ್ಲಿ ಎಲ್ಲಾ ದಾಖಲೆಗಳು ಹಾಗೆ ಇರುತ್ತವೆ. ಕೆಲ ಗಂಟೆಯಲ್ಲಿ ಹಳೆ ಸಿಮ್ ಕಾರ್ಡ್ ಡಿಆ್ಯಕ್ಟಿವೇಟ್ ಆಗಿ ಹೊಸ ನಂಬರ್ ಆ್ಯಕ್ಟಿವೇಟ್ ಆಗುತ್ತೆ. ಈ ಮೂಲಕ ವಂಚನೆ ಮಾಡುವವರು ಇದನ್ನೇ ಬಳಸಿಕೊಂಡು ಎಲ್ಲಾ ದಾಖಲೆಗಳನ್ನು ಉಪಯೋಗಿಸುತ್ತಾರೆ. ಬ್ಯಾಂಕ್ ಖಾತೆ, ಒಟಿಪಿ ಹೀಗೆ ನಾನಾ ಬಗೆಯಿಂದ ಆನ್ಲೈನ್ ವಂಚನೆ ನಡೆಯುತ್ತದೆ. ಐದು ಸಾವಿರ, ಹತ್ತು ಸಾವಿರ ಲಾಭ ಮಾಡಿಕೊಂಡು ವಂಚನೆ ಮಾಡಲು ಮುಂದಾಗ್ತಾರೆ.
ಪ್ರಕರಣ ಬಯಲಾಗಿದ್ದು ಹೇಗೆ?
ಇತ್ತೀಚೆಗೆ ಸಾಕಷ್ಟು ಜನರ ನಂಬರ್ಗಳು ವರ್ಕ್ ಆಗುತ್ತಿರಲಿಲ್ಲ. ಹೀಗಾಗಿ ಏರ್ಟೆಲ್ ಸಂಸ್ಥೆಯ ಕಸ್ಟಮರ್ ಕೇರ್ಗಳಿಗೆ ಹೆಚ್ಚು ಕರೆ ಬರುತ್ತಿದ್ದವು. ಇದರಿಂದ ಎಚ್ಚೆತ್ತ ಸಂಸ್ಥೆ, ಈ ಕುರಿತು ಆಂತರಿಕವಾಗಿ ತನಿಖೆ ಶುರು ಮಾಡಿತ್ತು. ಈ ಮೂಲಕ ಕೆಲ ಫ್ಯಾನ್ಸಿ ನಂಬರ್ಗಳನ್ನು ಹೊರಗೆಳೆದಿತ್ತು. ಈ ಪಟ್ಟಿಯನ್ನು ಸೈಬರ್ ಕ್ರೈಂ ಪೊಲೀಸರಿಗೆ ನೀಡಿತ್ತು. ಹೀಗಾಗಿ ಆರೋಪಿಗಳ ಜಾಲ ಬೆನ್ನತ್ತಿದ ಸೈಬರ್ ಕ್ರೈಂ ಪೊಲೀಸರು, ಸದ್ಯ ಐದು ಜನರನ್ನ ಬಂಧಿಸಿ ತನಿಖೆ ತೀವ್ರಗೊಳಿಸಿದ್ದಾರೆ.