ETV Bharat / city

ಖಾಕಿ ಕೈಗೂ ಕ್ವಾರಂಟೈನ್ ಸೀಲ್.. ಕಬ್ಬನ್ ಪಾರ್ಕ್ ಠಾಣೆ 7 ದಿನ ಸೀಲ್​​​​​​​ಡೌನ್ - Cops in Home Quarantine

ಎರಡು ದಿನಗಳ ಹಿಂದೆ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯ ಕಾನ್​​ಸ್ಟೆಬಲ್​​​ಗೆ ಕೊರೊನಾ ಸೋಂಕು ದೃಢವಾಗಿತ್ತು. ಅವರ ಸಂಪರ್ಕದಲ್ಲಿದ್ದ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ..

Cubban park police station seal down
ಕಬ್ಬನ್ ಪಾರ್ಕ್ ಠಾಣೆ ಸೀಲ್​​​​​​​ಡೌನ್
author img

By

Published : Jun 20, 2020, 6:56 PM IST

Updated : Jun 20, 2020, 7:38 PM IST

ಬೆಂಗಳೂರು : ಮುಂಜಾಗ್ರತಾ ಕ್ರಮವಾಗಿ ರಾಜಧಾನಿಯ ಮತ್ತೊಂದು ಪೊಲೀಸ್ ಠಾಣೆಯನ್ನು ಸೀಲ್​​​ಡೌನ್ ಮಾಡಲಾಗಿದೆ. ತಾತ್ಕಾಲಿಕವಾಗಿ ಏಳು ದಿನಗಳ ಕಾಲ ಕಬ್ಬನ್‌ಪಾರ್ಕ್ ಪೊಲೀಸ್​​​​​​ ಠಾಣಾ ಕಾರ್ಯವನ್ನು ವಿಧಾನಸೌಧ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

ಎರಡು ದಿನಗಳ ಹಿಂದೆ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯ ಕಾನ್​​ಸ್ಟೆಬಲ್​​​ಗೆ ಕೊರೊನಾ ಸೋಂಕು ದೃಢವಾಗಿತ್ತು. ಅವರ ಸಂಪರ್ಕದಲ್ಲಿದ್ದ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಇಡೀ ಠಾಣೆಗೆ ಬಿಬಿಎಂಪಿ ಸಿಬ್ಬಂದಿ ಸ್ಯಾನಿಟೈಸರ್ ಸಿಂಪಡಿಸಿದ್ದಾರೆ.

ಕಬ್ಬನ್​​ ಪಾರ್ಕ್​​ ಪೊಲೀಸ್​ ಠಾಣೆ ಸೀಲ್​​ಡೌನ್

ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪೊಲೀಸ್ ಸಿಬ್ಬಂದಿ ಕೈಗಳಿಗೂ ಕ್ವಾರಂಟೈನ್ ಸೀಲ್ ಹಾಕಿ ಏಳು ದಿನಗಳ ಕಾಲ ಹೋಮ್ ಕ್ವಾರಂಟೈನ್​​​​ನಲ್ಲಿರಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದಾರೆ.

Last Updated : Jun 20, 2020, 7:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.