ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ರಾಸಲೀಲೆ ವಿಡಿಯೋ ಪ್ರಕರಣದ ಹಿಂದೆ ಕನಕಪುರ ಮತ್ತು ಬೆಳಗಾವಿ ಕಡೆಯವರಿದ್ದಾರೆ ಎಂದು ಅರಣ್ಯ ಸಚಿವ ಸಿ.ಪಿ ಯೋಗೇಶ್ವರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಅರಣ್ಯ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ವಿಚಾರದಲ್ಲಿ ಕನಕಪುರ ಮತ್ತು ಬೆಳಗಾವಿಯವರ ರಾಜಕೀಯ ಷಡ್ಯಂತ್ರ ಇದೆ. ಮುಂದಿನ ದಿನಗಳಲ್ಲಿ ಅವರು ಅದಕ್ಕೆ ಪ್ರತಿಫಲ ಅನುಭವಿಸುತ್ತಾರೆ. ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ರಾಜಕೀಯ ಪಿತೂರಿ ನಡೆದಿದೆ ಎಂದರು.
ಇನ್ನು, ಆರು ಜನ ಸಚಿವರು ಕೋರ್ಟ್ಗೆ ಹೋಗಿರುವುದು ಯಾಕೆ ಅಂತ ಗೊತ್ತಿಲ್ಲ. ಅವರ ವೈಯಕ್ತಿಕ ರಕ್ಷಣೆಗೆ ಕೋರ್ಟ್ ಮೊರೆ ಹೊಗಿದ್ದಾರೆ. ಯಾರು ಕೋರ್ಟ್ ಮೊರೆ ಹೋಗಿದ್ದಾರೋ ಅವರನ್ನೇ ಕೇಳಿ. ಈ ವಿವಾದದಲ್ಲಿ ನನ್ನನ್ನೂ ಎಳೆಯಬೇಡಿ ಎಂದು ಇತರೆ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡದೇ ನಿರ್ಗಮಿಸಿದರು.