ಬೆಂಗಳೂರು : ನಗರದಲ್ಲಿ ಕೋವಿಡ್ ಲಸಿಕೆಗಳ ಅಭಾವ ಮತ್ತೆ ತಲೆದೋರಿದೆ. ಈ ಬಗ್ಗೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದು, ಲಸಿಕಾ ಕೇಂದ್ರಗಳಿಗೆ ಕೋವಿಡ್ ಲಸಿಕೆ ಹಂಚಿಕೆಯಲ್ಲಿ ಏರುಪೇರಾಗುತ್ತಿದೆ.
ಖಾಸಗಿ ಆಸ್ಪತ್ರೆಗಳಿಗೇ ಹೆಚ್ಚು ರೋಗಿಗಳು ಹೋಗುತ್ತಿದ್ದಾರೆ. ಇದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಅಭಾವ ಉಂಟಾಗ್ತಿದೆ. ಮತ್ತೆ ಲಸಿಕೆಯ ಕೋಲ್ಡ್ ಚೈನ್ ವ್ಯವಸ್ಥೆಯಿಂದ ಲಸಿಕೆ ಹಂಚುವಲ್ಲಿ ವಿಳಂಬವಾಗ್ತಿದೆ. ಇದರಿಂದ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆಯಲ್ಲಿ ಇಳಿಮುಖವಾಗ್ತಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ಒಬ್ಬರು ಮಾಹಿತಿ ನೀಡಿದ್ದಾರೆ.
ಇದಲ್ಲದೆ ಈ ಬಗ್ಗೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಒಂದೆಡೆ ಆರೋಗ್ಯ ಸಚಿವರು ರಾಜ್ಯಕ್ಕೆ ಯಾವುದೇ ರೀತಿ ಕೋವಿಡ್ ಲಸಿಕೆ ಅಭಾವ ಇಲ್ಲ ಎನ್ನುತ್ತಿದ್ದಾರೆ. ಆದ್ರೆ, ವಾಸ್ತವವಾಗಿ ನಗರದ 450 ಲಸಿಕೆ ಕೇಂದ್ರಗಳ ಪೈಕಿ ಹಲವೆಡೆ ಅಗತ್ಯಕ್ಕೆ ತಕ್ಕಷ್ಟು ಲಸಿಕೆ ಪೂರೈಕೆ ಆಗುತ್ತಿಲ್ಲ.
ಅನುಷ ರವಿ ಸೂದ್ ಎಂಬುವರು ಲಸಿಕೆ ಅಭಾವದ ಬಗ್ಗೆ ಟ್ವೀಟ್ ಮಾಡಿದ್ದು, ಜೆಪಿ ನಗರದ ಖಾಸಗಿ ಆಸ್ಪತ್ರೆಯ ವ್ಯಾಕ್ಸಿನ್ ಸೆಂಟರ್‌ನಲ್ಲಿ ಕಳೆದ ಮೂರು ದಿನದಿಂದ ವ್ಯಾಕ್ಸಿನ್ ಸಿಗುತ್ತಿಲ್ಲ. ಅಲ್ಲದೆ ಮಾರ್ಚ್ 31ರವರೆಗೆ ವ್ಯಾಕ್ಸಿನ್ ಲಭ್ಯವಿಲ್ಲ ಎಂದು ನೋಟಿಸ್ ಬೋರ್ಡ್ ಹಾಕಲಾಗಿದೆ. ಸರ್ಕಾರ, ಆರೋಗ್ಯ ಸಚಿವರು ತಕ್ಷಣ ಈ ಸಮಸ್ಯೆ ಬಗೆಹರಿಸಬೇಕೆಂದು ಬರೆದಿದ್ದಾರೆ.
-
Have been seeing this notice posted on the door of a private hospital's #COVID19 vaccination block in JP Nagar of Bengaluru for three days now @mla_sudhakar @DHFWKA @CMofKarnataka @BSYBJP. Is this the case in other places too? It has to be addressed ASAP. pic.twitter.com/Xz5N4zk9dq
— Anusha Ravi Sood (@anusharavi10) March 29, 2021 " class="align-text-top noRightClick twitterSection" data="
">Have been seeing this notice posted on the door of a private hospital's #COVID19 vaccination block in JP Nagar of Bengaluru for three days now @mla_sudhakar @DHFWKA @CMofKarnataka @BSYBJP. Is this the case in other places too? It has to be addressed ASAP. pic.twitter.com/Xz5N4zk9dq
— Anusha Ravi Sood (@anusharavi10) March 29, 2021Have been seeing this notice posted on the door of a private hospital's #COVID19 vaccination block in JP Nagar of Bengaluru for three days now @mla_sudhakar @DHFWKA @CMofKarnataka @BSYBJP. Is this the case in other places too? It has to be addressed ASAP. pic.twitter.com/Xz5N4zk9dq
— Anusha Ravi Sood (@anusharavi10) March 29, 2021
ಇದಲ್ಲದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ನಿತ್ಯ 450 ಸೆಂಟರ್ಗಳಲ್ಲಿ 80 ಸಾವಿರ ಲಸಿಕೆ ನೀಡುವ ಗುರಿ ಹಾಕಲಾಗಿದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿಕೆ ನೀಡಿದ್ದರು. ಆದರೆ, ಲಸಿಕೆ ಅಭಾವದಿಂದ ನಿತ್ಯ 30 ಸಾವಿರ ಜನರಿಗೂ ಲಸಿಕೆ ನೀಡಲಾಗುತ್ತಿಲ್ಲ. ಅಲ್ಲದೆ ದಿನದಿಂದ ದಿನಕ್ಕೆ ಲಸಿಕೆ ಹಾಕಿಸಿಕೊಳ್ಳುತ್ತಿರುವವರ ಸಂಖ್ಯೆಯಲ್ಲೂ ಇಳಿಕೆಯಾಗುತ್ತಿರುವುದು ಸ್ಪಷ್ಟವಾಗಿದೆ.
ಮಾರ್ಚ್ ತಿಂಗಳ ಲಸಿಕೆ ಹಂಚಿಕೆ ಮಾಹಿತಿ
- ಮಾರ್ಚ್ 19- 28,286
- ಮಾರ್ಚ್ 20- 28,136
- ಮಾರ್ಚ್ 21- 5,410
- ಮಾರ್ಚ್ 22- 30121
- ಮಾರ್ಚ್ 23- 13831
- ಮಾರ್ಚ್ 24- 25,893
- ಮಾರ್ಚ್ 25- 12,345
- ಮಾರ್ಚ್ 26- 22,347
- ಮಾರ್ಚ್ 27- 20,233
ದಿನದಿಂದ ದಿನಕ್ಕೆ ಮೂರನೇ ಹಂತದ ಲಸಿಕೆ ಹಾಕಿಸಿಕೊಳ್ಳುತ್ತಿರುವವರ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟವರಿಗೂ ಕೋವಿಡ್ ಲಸಿಕೆ ನೀಡಲಾಗುತ್ತದೆ ಎಂದು ಸರ್ಕಾರ ಹೇಳುತ್ತಿದ್ದರೂ, ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳದೇ ಇದ್ದಲ್ಲಿ ಆಸ್ಪತ್ರೆಗಳ ಮುಂದೆ ಸಾರ್ವಜನಿಕರು ಪರಿತಪಿಸೋದಂತೂ ಗ್ಯಾರಂಟಿ.