ETV Bharat / city

ಕ್ವಾರಂಟೈನ್ ನಿಯಮ ಉಲ್ಲಂಘನೆ: ರಾಜ್ಯದಲ್ಲಿ 1,998 ಜನರ ವಿರುದ್ಧ ಕೇಸ್​ - FIR

ರಾಜ್ಯದಲ್ಲಿ ಒಟ್ಟು 3,78,300 ಮಂದಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದು, ಈ ಪೈಕಿ ಸರಿಯಾದ ಸಾಕ್ಷ್ಯಾಧಾರದ ಮೇರೆಗೆ 1,998 ಜನರ ವಿರುದ್ಧ ಸಾಂಕ್ರಾಮಿಕ ರೋಗ ಕಾಯ್ದೆಯಡಿ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

Covid rules violation
ಕೊರೊನಾ ನಿಯಮ ಉಲ್ಲಂಘನೆ
author img

By

Published : Jul 27, 2020, 10:37 AM IST

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್​ ವ್ಯಾಪಕವಾಗಿ ಹಬ್ಬುತ್ತಿದ್ದು, ಇತ್ತ ಕೋವಿಡ್​ ನಿಯಮ ಉಲ್ಲಂಘನೆ ಪ್ರಕರಣಗಳು ಕೂಡ ಹೆಚ್ಚುತ್ತಿದೆ. ಈವರೆಗೆ ಬರೋಬ್ಬರಿ 3,78,300 ಮಂದಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಸಾರ್ವಜನಿಕ ಸ್ಥಳದಲ್ಲಿ ಓಡಾಡಿ ಆತಂಕ ಸೃಷ್ಟಿಸಿದ್ದಾರೆ.

ಆರೋಗ್ಯ ಇಲಾಖೆ ನಿಯಮದ ಪ್ರಕಾರ ಸೋಂಕಿತರ ಪ್ರಾಥಮಿಕ ಸಂಪರ್ಕಿತರು, ವಿದೇಶದಿಂದ ಹಾಗೂ ಇತರ ರಾಜ್ಯಗಳಿಂದ ಬಂದವರು 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿರಬೇಕು. ಆದರೆ, 3,78,300 ಜನರು ಈ ನಿಯಮ ಉಲ್ಲಂಘಿಸಿದ್ದು, ಈ ಪೈಕಿ ಸರಿಯಾದ ಸಾಕ್ಷ್ಯಾಧಾರದ ಮೇರೆಗೆ 1,998 ಮಂದಿ ಮೇಲೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿದೆ.

ಎಲ್ಲೆಲ್ಲಿ FIR ದಾಖಲಾಗಿದೆ‌?

ಬೆಳಗಾವಿ -131, ಕಲಬುರ್ಗಿ-108, ದಾವಣಗೆರೆ- 98, ಚಿತ್ರದುರ್ಗ- 82, ಬೀದರ್ -75, ರಾಯಚೂರು- 73, ತುಮಕೂರು- 65, ವಿಜಯಪುರ-104, ಬಾಗಲಕೋಟೆ-102, ಬೆಂಗಳೂರು- 200, ಬೆಂಗಳೂರು ಗ್ರಾಮಾಂತರ-154 ಜನರ ವಿರುದ್ಧ ಸಾಂಕ್ರಾಮಿಕ ರೋಗ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.