ಬೆಂಗಳೂರು : ಹೊಸ ವರ್ಷದ ಸಂಭ್ರಮದಲ್ಲಿ ರಾಜಧಾನಿಯಲ್ಲಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿರುವುದು ಬೆಳಕಿಗೆ ಬಂದಿದೆ. ನಗರದ ಪ್ರತಿಷ್ಠಿತ ಇಂದಿರಾನಗರದ 100 ಅಡಿ ರಸ್ತೆಯ ಪಬ್‌ಗಳ ಮುಂದೆ ಜನಸಂದಣಿ ಕಂಡು ಬರುತ್ತಿದೆ.
ಬಿಬಿಎಂಪಿ ಅಧಿಕಾರಿಗಳು, ನಗರ ಪೊಲೀಸರು ಇತ್ತ ತಿರುಗಿಯೂ ನೋಡಿಲ್ಲ ಎನ್ನುವಂತಿದೆ. ಸರ್ಕಾರ ಶೇ.50ರಷ್ಟು ಮಿತಿಯಲ್ಲಿ ಕುಳಿತುಕೊಳ್ಳಲು ಮಾತ್ರ ಅವಕಾಶ ನೀಡಿದೆ. ಆದರೂ ಜನರಿಂದ ಬಹುತೇಕ ಪಬ್‌ಗಳು ತುಂಬಿ ತುಳುಕುತ್ತಿವೆ.
ಯಾವುದೇ ಪಬ್ ಒಳಗಡೆ ಯಾರು ಹೋಗಿ ಪರಿಶೀಲನೆ ಮಾಡುತ್ತಿಲ್ಲ ಎನ್ನಲಾಗುತ್ತಿದೆ. ನಿಯಮಿತ ಸ್ಥಳಗಳಲ್ಲಿ ಪೊಲೀಸರು ಕುಳಿತಿರುವುದು ಕಾಣಿಸುತ್ತಿದೆ. ಯಾವುದೇ ಚೆಕಿಂಗ್ ಇಲ್ಲದೆ ಪಬ್‌ಗಳಿಂದ ಭರ್ಜರಿ ಬ್ಯುಸಿನೆಸ್ ನಡೆಯುತ್ತಿದೆ.
ಜನಸಂದಣಿ ನಿರ್ವಹಣೆ ಬಿಬಿಎಂಪಿ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಸಮಯದ ಪರಿಪಾಲನೆ ಪೊಲೀಸ್ ಇಲಾಖೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ನಡೆದ ಪೊಲೀಸ್ ಕಮಿಷನರ್ ಹಾಗೂ ಬಿಬಿಎಂಪಿ ಕಮಿಷನರ್ ಸಭೆಯಲ್ಲಿ ಕೆಲವು ಕಠಿಣ ನಿರ್ಧಾರ ಕೈಗೊಳ್ಳಲಾಗಿತ್ತು.
ಆದರೆ, ಪಾಲಿಕೆ ಅಧಿಕಾರಿಗಳಿಂದ ಹಾಗೂ ಪೊಲೀಸರಿಂದ ಯಾವುದೇ ಪರೀಶಿಲನೆ ಇಲ್ಲದೆ ಪಬ್‌ಗಳಲ್ಲಿ ಬಿಂದಾಸ್ ಬ್ಯುಸಿನೆಸ್ ನಡೆಯುತ್ತಿರುವುದು ವಿಪರ್ಯಾಸವಾಗಿದೆ.
ಇದನ್ನೂ ಓದಿ: Video: ಅದ್ಧೂರಿಯಾಗಿ 2022 ವೆಲ್ಕಮ್ ಮಾಡಿಕೊಂಡ ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ