ETV Bharat / city

ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿಗೆ ಕುಂಠಿತ ತೆರಿಗೆ ಸಂಗ್ರಹದ ಮಧ್ಯೆ ಕೇಂದ್ರದ ಸಹಾಯಾನುದಾನ ಕಡಿತದ ಬರೆ - ಬೆಂಗಳೂರು

ರಾಜ್ಯದಲ್ಲಿನ ತೆರಿಗೆ ಸಂಗ್ರಹ ಚೇತರಿಕೆ ಕಾಣುತ್ತಿದೆ. ಆದರೆ, ನಿರೀಕ್ಷಿತ ಗುರಿ ಮುಟ್ಟುವುದು ಕಷ್ಟ ಸಾಧ್ಯ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ವಾಣಿಜ್ಯ ತೆರಿಗೆ ಮೂಲಕ ರಾಜ್ಯ ಸರ್ಕಾರ ಸುಮಾರು 26,253 ಕೋಟಿ ರೂ. ಸಂಗ್ರಹಿಸಿದೆ. ಈ ಪೈಕಿ 17,723 ಕೋಟಿ ರೂ. ಜಿಎಸ್‌ಟಿ ತೆರಿಗೆ ಸೇರಿದೆ. ಇನ್ನು, ಅಬಕಾರಿ ಮೂಲಕ 10,225 ಕೋಟಿ ರೂ. ಸಂಗ್ರಹಿಸಲಾಗಿದೆ..

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
author img

By

Published : Oct 23, 2021, 4:36 PM IST

ಬೆಂಗಳೂರು : ಕೋವಿಡ್ ಲಾಕ್‌ಡೌನ್‌ನಿಂದ ಉಂಟಾದ ಆರ್ಥಿಕ ಸಂಕಷ್ಟ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಈವರೆಗೆ ವಿವಿಧ ತೆರಿಗೆ ಮೂಲಗಳಿಂದ ನಿರೀಕ್ಷಿತ ಆದಾಯ ಸಂಗ್ರಹವಾಗುತ್ತಿಲ್ಲ. ಈ ಮಧ್ಯೆ ಕೇಂದ್ರದ ಸಹಾಯಾನುದಾನಕ್ಕೂ ಕತ್ತರಿ ಬಿದ್ದಿದೆ.

ಲಾಕ್‌ಡೌನ್​​ನಿಂದ ಸೊರಗಿದ ರಾಜ್ಯದ ಬೊಕ್ಕಸ ಇನ್ನೂ ಚೇತರಿಕೆಯ ಹಾದಿಯಲ್ಲೇ ಇದೆ. ಆರ್ಥಿಕ ಚಟುವಟಿಕೆ ಪುನಾರಂಭವಾದರೂ, ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಸಂಗ್ರಹ ಸಾಧ್ಯವಾಗಿಲ್ಲ. ಹೀಗಾಗಿ, ನಾನಾ ತೆರಿಗೆ ಮೂಲಗಳಿಂದ ರಾಜ್ಯದ ಬೊಕ್ಕಸ ಸೇರುವ ಆದಾಯವೂ ಕುಂಠಿತವಾಗಿದೆ.

ಚೇತರಿಕೆಯ ಹಾದಿ ಕಾಣುತ್ತಿದ್ದರೂ, ಈ ವರ್ಷವೂ ರಾಜ್ಯ ಸುಮಾರು 20,000 ಕೋಟಿಯ ಆದಾಯ ಕೊರತೆ ಎದುರಿಸುವ ಸಾಧ್ಯತೆ ಇದೆ. ಇದನ್ನು ಸರಿದೂಗಿಸಲು ಸರ್ಕಾರ ಸಾಲ, ವೆಚ್ಚ ಕಡಿತದ ಮೊರೆ ಹೋಗಿದೆ. ಆದರೆ, ಈ ಮಧ್ಯೆ ಕೇಂದ್ರದ ತೆರಿಗೆ ಹಂಚಿಕೆ ಹಾಗೂ ಸಹಾಯಾನುದಾನವೂ ಕಡಿತವಾಗಿದೆ.

ಕೇಂದ್ರದ ಸಹಾಯನುದಾನದ ಸ್ಥಿತಿಗತಿ ಹೀಗಿದೆ : ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಅನುದಾನ, ತೆರಿಗೆ ರೂಪದಲ್ಲಿ ಆರ್ಥಿಕ ನೆರವು ನೀಡುತ್ತದೆ. ಆದರೆ, 15ನೇ ಹಣಕಾಸು ಆಯೋಗ ಕರ್ನಾಟಕದ ಪಾಲನ್ನು ಈಗಾಗಲೇ ಕಡಿತಗೊಳಿಸಿದೆ. ಇದರಿಂದ ಪ್ರತಿವರ್ಷ ಕೇಂದ್ರದಿಂದ ರಾಜ್ಯಕ್ಕೆ ಬರುವ ಸಹಾಯಾನುದಾನ ಕಡಿತವಾಗುತ್ತಲೇ ಇದೆ.

ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯಕ್ಕೆ ಇದು ಬಿಸಿ ತುಪ್ಪವಾಗಿ ಪರಿಣಮಿಸಿದೆ. ರಾಜ್ಯ ಸರ್ಕಾರ ಬಹುಪಾಲು ಕೇಂದ್ರದ ಸಹಾಯಾನುದಾನವನ್ನೇ ನೆಚ್ಚಿದೆ. ಕಳೆದ ಬಾರಿಯಂತೆ ಈ ಬಾರಿಯೂ ಕೇಂದ್ರದ ಸಹಾಯಾನುದಾನಕ್ಕೆ ಮತ್ತಷ್ಟು ಕತ್ತರಿ ಬಿದ್ದಿದೆ. ಈವರೆಗೆ ಬಿಡುಗಡೆ ಮಾಡಲಾದ ಕೇಂದ್ರ ಸಹಾಯಾನುದಾನ, ತೆರಿಗೆ ಹಂಚಿಕೆಯಲ್ಲಿ ಕಡಿತವಾಗಿದೆ.

  • ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆಯಲ್ಲಿ ಆಗಸ್ಟ್‌ವರೆಗೆ ರಾಜ್ಯಕ್ಕೆ 7,754 ಕೋಟಿ ರೂ. ಬಿಡುಗಡೆ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 2.44%ದಷ್ಟು ಕಡಿತವಾಗಿದೆ.
  • ಈ ವರ್ಷ ರಾಜ್ಯಕ್ಕೆ ಒಟ್ಟು 24,276 ಕೋಟಿ ರೂ. ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆಯಾಗಿದೆ. ಕಳೆದ ವರ್ಷ ರಾಜ್ಯಕ್ಕೆ 28,591 ಕೋಟಿ ರೂ. ತೆರಿಗೆ ಹಂಚಿಕೆಯಾಗಿತ್ತು.

ಇತ್ತ ಕೇಂದ್ರ ಸರ್ಕಾರದ ಸಹಾಯಾನುದಾನ ಬಿಡುಗಡೆಯಲ್ಲೂ ಕಡಿತವಾಗಿದೆ. 11,360 ಕೋಟಿ ರೂ. ಸಹಾಯಾನುದಾನ ಆಗಸ್ಟ್‌ವರೆಗೆ ಬಿಡುಗಡೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.18.11ರಷ್ಟು ಕಡಿತವಾಗಿದೆ. ಕಳೆದ ವರ್ಷ ಈ ಅವಧಿಗೆ ಸುಮಾರು 13,872 ಕೋಟಿ ರೂ. ಸಹಾಯಾನುದಾನ ಬಿಡುಗಡೆ ಆಗಿತ್ತು. ಈ ಆರ್ಥಿಕ ವರ್ಷದಲ್ಲಿ ರಾಜ್ಯಕ್ಕೆ 28,246 ಕೋಟಿ ರೂ. ಸಹಾಯಾನುದಾನ ಹಂಚಿಕೆಯಾಗಿದೆ. ಕೇಂದ್ರದ ತೆರಿಗೆ ಹಂಚಿಕೆ ಹಾಗೂ ಕೇಂದ್ರದ ಸಹಾಯಾನುದಾನ ಬಿಡುಗಡೆಯಲ್ಲಿ ಕಡಿತವಾಗಿರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ಈವರೆಗಿನ ತೆರಿಗೆ ಸಂಗ್ರಹ ಏಷ್ಟಿದೆ? : ರಾಜ್ಯದಲ್ಲಿನ ತೆರಿಗೆ ಸಂಗ್ರಹ ಚೇತರಿಕೆ ಕಾಣುತ್ತಿದೆ. ಆದರೆ, ನಿರೀಕ್ಷಿತ ಗುರಿ ಮುಟ್ಟುವುದು ಕಷ್ಟ ಸಾಧ್ಯ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ವಾಣಿಜ್ಯ ತೆರಿಗೆ ಮೂಲಕ ರಾಜ್ಯ ಸರ್ಕಾರ ಸುಮಾರು 26,253 ಕೋಟಿ ರೂ. ಸಂಗ್ರಹಿಸಿದೆ. ಈ ಪೈಕಿ 17,723 ಕೋಟಿ ರೂ. ಜಿಎಸ್‌ಟಿ ತೆರಿಗೆ ಸೇರಿದೆ. ಇನ್ನು, ಅಬಕಾರಿ ಮೂಲಕ 10,225 ಕೋಟಿ ರೂ. ಸಂಗ್ರಹಿಸಲಾಗಿದೆ.

ಮೋಟಾರು ವಾಹನ ತೆರಿಗೆ ರೂಪದಲ್ಲಿ 2,180 ಕೋಟಿ ರೂ. ಸಂಗ್ರಹ ಮಾಡಲಾಗಿದೆ. ಇನ್ನು, ಮುದ್ರಾಂಕ ಹಾಗೂ ನೋಂದಣಿ ಶುಲ್ಕದ ರೂಪದಲ್ಲಿ 4,578 ಕೋಟಿ ರೂ. ಸಂಗ್ರಹ ಮಾಡಲಾಗಿದೆ. 2021-22ರ ಆಗಸ್ಟ್ ಅಂತ್ಯದವರೆಗೆ ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ 1,524ಕೋಟಿ ರೂ.ಗಳ ರಾಜಸ್ವ ಹೆಚ್ಚಳವಿದೆ. 9,536 ಕೋಟಿ ರೂ.ಗಳ ವಿತ್ತೀಯ ಕೊರತೆ ಇದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ವಾಹನ ಸವಾರರ ಜೇಬಿಗೆ ಮತ್ತೆ ಕತ್ತರಿ; ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.