ETV Bharat / city

ಕೋವಿಡ್ ರೋಗಿಗಳಿಗೆ ನವಚೈತನ್ಯ ನೀಡಲಿರುವ 2-ಡಿಜಿ ಔಷಧ: ಮಾಹಿತಿ ಪಡೆದ ಸಚಿವ ಸುಧಾಕರ್ - Minister Dr. K. Sudhakar

ರೋಗಿಗಳಿಗೆ ನೀಡುವ ಆಕ್ಸಿಜನ್ ಅನ್ನು ನಿಯಂತ್ರಿಸಲು ಡಿಆರ್ ಡಿಒದಿಂದ ಆಕ್ಸಿಕೇರ್ ಸಿಸ್ಟಮ್ ಅಭಿವೃದ್ಧಿಪಡಿಸಲಾಗಿದೆ. ಇದರಿಂದಾಗಿ ರೋಗಿಗಳಿಗೆ ನಿರ್ದಿಷ್ಟವಾಗಿ ಎಷ್ಟು ಆಕ್ಸಿಜನ್ ನೀಡಬೇಕೆಂದು ನಿರ್ಧರಿಸಬಹುದಾಗಿದೆ. ಇದನ್ನು ಆಸ್ಪತ್ರೆ ಮಾತ್ರವಲ್ಲದೇ ಮನೆ, ಕೋವಿಡ್ ಕೇರ್ ಸೆಂಟರ್​​​ಗಳಲ್ಲೂ ಬಳಸಬಹುದು.

Covid is a 2-DG drug
ಮಾಹಿತಿ ಪಡೆದ ಸಚಿವ ಸುಧಾಕರ್
author img

By

Published : May 14, 2021, 9:34 PM IST

ಬೆಂಗಳೂರು: ಕೋವಿಡ್ ರೋಗಿಗಳಿಗೆ ವೈದ್ಯಕೀಯ ಆಮ್ಲಜನಕದ ಮೇಲಿನ ಅವಲಂಬನೆ ಕಡಿಮೆ ಮಾಡುವ 2-ಡಿಜಿ ಔಷಧ ಕುರಿತು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಿಜ್ಞಾನಿಗಳಿಂದ ಮಾಹಿತಿ ಪಡೆದರು.

Covid is a 2-DG drug
ಮಾಹಿತಿ ಪಡೆದ ಸಚಿವ ಸುಧಾಕರ್

ಓದಿ: ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ಇಲ್ಲೇ ಹಂಚಿಕೆ ಮಾಡಲು ಕೇಂದ್ರಕ್ಕೆ ಮನವಿ: ಸುಧಾಕರ್​​

ಡಿಆರ್​​ಡಿಒಗೆ ಭೇಟಿ ನೀಡಿದ ಸಚಿವರಿಗೆ ಈ ಕುರಿತು ವಿಜ್ಞಾನಿಗಳು ವಿವರಿಸಿದರು. ಡಿಆರ್​ಡಿಒದ ಇನ್ಸಿಟ್ಯೂಟ್​ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಆ್ಯಡ್ ಅಲೈಡ್ ಸೈನ್ಸಸ್ ಲ್ಯಾಬ್ ಹಾಗೂ ಡಾ.ರೆಡ್ಡೀಸ್ ಲ್ಯಾಬ್ ಸಹಯೋಗದಲ್ಲಿ ತಯಾರಿಸಿದ ಈ ಔಷಧ ರೋಗಿಗಳು ಬೇಗನೆ ಗುಣಮುಖರಾಗಲು ನೆರವಾಗಲಿದೆ. ಈ ಔಷಧದಿಂದ ಕೋವಿಡ್ ರೋಗಿಗಳು ಬೇಗನೆ ಚೇತರಿಸಿಕೊಳ್ಳುತ್ತಿದ್ದಾರೆ ಎಂಬುದು ಸಾಬೀತಾಗಿದೆ. ತುರ್ತು ಬಳಕೆಯ ಆಧಾರದಲ್ಲಿ ಕೋವಿಡ್ ರೋಗಿಗಳಿಗೆ ಈ ಔಷಧ ನೀಡಲು ಅನುಮತಿ ದೊರೆತಿದ್ದು, ಸಕಾರಾತ್ಮಕ ಫಲಿತಾಂಶ ಕಂಡುಬಂದಿದೆ ಎಂದು ವಿಜ್ಞಾನಿಗಳು ವಿವರಿಸಿದರು.

Covid is a 2-DG drug
ಮಾಹಿತಿ ಪಡೆದ ಸಚಿವ ಸುಧಾಕರ್

ಕೋವಿಡ್ ಎರಡನೇ ಅಲೆಯಲ್ಲಿ ಅನೇಕರು ಆಸ್ಪತ್ರೆಗೆ ದಾಖಲಾಗುತ್ತಿದ್ದು, ಹೆಚ್ಚಿನವರಿಗೆ ಆಕ್ಸಿಜನ್ ಬೇಕಾಗಿದೆ. ಈ ಔಷಧ ನೀಡುವುದರಿಂದ ಆಕ್ಸಿಜನ್ ಬಳಕೆ ತಗ್ಗಲಿದೆ. ಜೊತೆಗೆ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಕಡಿಮೆಯಾಗಲಿದೆ ಎಂದು ತಿಳಿಸಿದರು.

ಆಕ್ಸಿಕೇರ್ ಸಿಸ್ಟಮ್:

ರೋಗಿಗಳಿಗೆ ನೀಡುವ ಆಕ್ಸಿಜನ್ ಅನ್ನು ನಿಯಂತ್ರಿಸಲು ಡಿಆರ್ ಡಿಒದಿಂದ ಆಕ್ಸಿಕೇರ್ ಸಿಸ್ಟಮ್ ಅಭಿವೃದ್ಧಿಪಡಿಸಲಾಗಿದೆ. ಇದರಿಂದಾಗಿ ರೋಗಿಗಳಿಗೆ ನಿರ್ದಿಷ್ಟವಾಗಿ ಎಷ್ಟು ಆಕ್ಸಿಜನ್ ನೀಡಬೇಕೆಂದು ನಿರ್ಧರಿಸಬಹುದಾಗಿದೆ. ಇದನ್ನು ಆಸ್ಪತ್ರೆ ಮಾತ್ರವಲ್ಲದೇ ಮನೆ, ಕೋವಿಡ್ ಕೇರ್ ಸೆಂಟರ್​​​ನಲ್ಲೂ ಬಳಸಬಹುದು. ಪಿಎಂ ಕೇರ್ಸ್ ಫಂಡ್ ನಿಂದ 322.5 ಕೋಟಿ ರೂ. ವೆಚ್ಚದಲ್ಲಿ 1.5 ಲಕ್ಷ ಆಕ್ಸಿಕೇರ್ ಸಿಸ್ಟಮ್ ಖರೀದಿಸಲಾಗುತ್ತಿದೆ ಎಂದು ವಿಜ್ಞಾನಿಗಳು ವಿವರಣೆ ನೀಡಿದರು.

Covid is a 2-DG drug
ಮಾಹಿತಿ ಪಡೆದ ಸಚಿವ ಸುಧಾಕರ್

ಇದೇ ವೇಳೆ, ಸಚಿವ ಡಾ.ಕೆ.ಸುಧಾಕರ್ ತಿಪ್ಪಸಂದ್ರದಲ್ಲಿ ಡಿಆರ್ ಡಿಒದಿಂದ ಸ್ಥಾಪಿಸುತ್ತಿರುವ ಆಕ್ಸಿಜನ್ ಘಟಕ ವೀಕ್ಷಿಸಿದರು. ನಂತರ ಮಾತನಾಡಿ, ಬೆಂಗಳೂರು ನಗರವು ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನದ ರಾಜಧಾನಿಯಾಗಿದ್ದು, ಅನೇಕ ಪ್ರತಿಷ್ಠಿತ ಸಂಸ್ಥೆಗಳಿಗೆ ನೆಲೆಯಾಗಿದೆ.

ಕೋವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಡುವಲ್ಲಿ ಡಿಆರ್‍ಡಿಒ ಹಾಗೂ ಐಐಎಸ್​​ಸಿ ಪ್ರಯತ್ನಗಳು ಶ್ಲಾಘನೀಯವಾಗಿವೆ. ಐಐಎಸ್ಸಿಯಿಂದ ಅಭಿವೃದ್ಧಿಪಡಿಸುತ್ತಿರುವ ಸಾಮಾನ್ಯ ತಾಪಮಾನದಲ್ಲೂ ಸಂಗ್ರಹಿಸಿಡಬಹುದಾದ ಲಸಿಕೆ ಹಾಗೂ ಡಿಆರ್​​​​ಡಿಒ ಅಭಿವೃದ್ಧಿಪಡಿಸಿ 2-ಡಿಜಿ, ಆಕ್ಸಿಕೇರ್ ಸಿಸ್ಟಮ್ ಕೋವಿಡ್ ವಿರುದ್ಧದ ಹೋರಾಟವನ್ನು ಮತ್ತಷ್ಟು ಬಲಪಡಿಸಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.