ETV Bharat / city

ಕೋವಿಡ್ ಹೆಚ್ಚಳ, ವಿಕ್ಟೋರಿಯಾದಲ್ಲಿ 900ಕ್ಕೂ ಅಧಿಕ ಹಾಸಿಗೆ ವ್ಯವಸ್ಥೆ: ಸಚಿವ ಸುಧಾಕರ್ - ವಿಕ್ಟೋರಿಯಾದಲ್ಲಿ 900ಕ್ಕೂ ಅಧಿಕ ಹಾಸಿಗೆ

ಇಲ್ಲಿಯವರೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 400 ಹಾಸಿಗೆ ಕೊಟ್ಟಿದ್ದರು, ಮುಖ್ಯಮಂತ್ರಿಗಳ ನಿರ್ದೇಶನದ ಪ್ರಕಾರ ಇಂದು ಆಸ್ಪತ್ರೆಗೆ ಭೇಟಿ ಕೊಟ್ಟು ಒಟ್ಟಾರೆ 750 ಹಾಸಿಗೆಗಳನ್ನ ಮೀಸಲಿಡಲು ನಿರ್ದೇಶನ ನೀಡಲಾಗಿದೆ. ರೋಗ ಲಕ್ಷಣ ಇಲ್ಲದೇ ಇರುವವರಿಗೆ 200 ಹಾಸಿಗೆ ಮೀಸಲಿಡಲಾಗುವುದು, ಈ ಮೂಲಕ 950 ಹಾಸಿಗೆ ವ್ಯವಸ್ಥೆಯನ್ನ ಬಿಎಂಸಿಆರ್​ಐ ನೋಡಿಕೊಳ್ಳಲಿದೆ ಎಂದರು.

ಸುಧಾಕರ್
ಸುಧಾಕರ್
author img

By

Published : Apr 16, 2021, 7:12 PM IST

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆ ಬಿಎಂಸಿಆರ್​ಐ, ವಿಕ್ಟೋರಿಯಾ, ಕಿಮ್ಸ್ ಹಾಗೂ ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜ್ ಆಸ್ಪತ್ರೆಗಳಿಗೆ ಸಚಿವ ಸುಧಾಕರ್ ಭೇಟಿ ನೀಡಿ, ಕೋವಿಡ್ ಚಿಕಿತ್ಸೆ ಹಾಗೂ ಇತರ ವಿಷಯಗಳ ಬಗ್ಗೆ ಪರಿಶೀಲನೆ ನಡೆಸಿದರು.

ಬಳಿಕ ಮಾತಾನಾಡಿದ ಅವರು, ಇಲ್ಲಿಯವರೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 400 ಹಾಸಿಗೆ ಕೊಟ್ಟಿದ್ದರು, ಮುಖ್ಯಮಂತ್ರಿಗಳ ನಿರ್ದೇಶನದ ಪ್ರಕಾರ ಇಂದು ಆಸ್ಪತ್ರೆಗೆ ಭೇಟಿ ಕೊಟ್ಟು ಒಟ್ಟಾರೆ, 750 ಹಾಸಿಗೆಗಳನ್ನ ಮೀಸಲಿಡಲು ನಿರ್ದೇಶನ ನೀಡಲಾಗಿದೆ. ಹಾಗೇ ಹತ್ತಿರದ ಎರಡು ಹೋಟೆಲ್​ಗಳನ್ನ ಪರ್ಯಾಯ ಆಸ್ಪತ್ರೆಯಾಗಿ ಮಾಡಲು ಸೂಚನೆ ನೀಡಲಾಗಿದೆ. ಅಲ್ಲಿ ರೋಗ ಲಕ್ಷಣ ಇಲ್ಲದೇ ಇರುವವರಿಗೆ 200 ಹಾಸಿಗೆ ಮೀಸಲಿಡಲಾಗುವುದು, ಈ ಮೂಲಕ 950 ಹಾಸಿಗೆ ವ್ಯವಸ್ಥೆಯನ್ನು ಬಿಎಂಸಿಆರ್​ಐ ನೋಡಿಕೊಳ್ಳಲಿದೆ. ಹಾಗೇ ಐಸಿಯು ಬೆಡ್​ಗಳು 70 ಇದ್ದು ಇದನ್ನ ಹೆಚ್ಚು ಮಾಡಲು ಮುಂದಿನ 15 ದಿನಗಳಲ್ಲಿ ಪ್ರಯತ್ನ ಮಾಡಲಾಗುವುದು ಎಂದರು.

ಸಿಎಂಗೆ ಕೊರೊನಾ
ಬೆಳಗ್ಗೆ ನಮ್ಮೊಟ್ಟಿಗೆ ಸಭೆ ನಡೆಸಿದಾಗ ಸಿಎಂ ಚೆನ್ನಾಗಿಯೇ ಇದ್ದರು. ಪಾಲಿಕೆ ಆಯುಕ್ತರು, ಪೊಲೀಸ್ ಆಯುಕ್ತರು, ಆರೋಗ್ಯ ಇಲಾಖೆಯ ಎಸಿಎಸ್, ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಸಭೆಯಲ್ಲಿ ಭಾಗಿಯಾಗಿ ಚರ್ಚೆ ಮಾಡಿದ್ದವು. ಆಂತರಿಕ ಅಂತರ ಕಾಪಾಡಿಕೊಂಡು ಬಂದಿದ್ದೇವೆ. ಎರಡನೇ ಬಾರಿ ಮುಖ್ಯಮಂತ್ರಿಗಳಿಗೆ ಕೊರೊನಾ ಪಾಸಿಟಿವ್ ಆ​ಗಿದ್ದು, ಚುನಾವಣಾ ಪ್ರಚಾರಕ್ಕೆ ಹೋದಂತ ಸಂದರ್ಭದಲ್ಲಿ ಸೋಂಕು ಬಂದಿರಬಹುದು. ನಾನು ಅವ್ರು ಜೊತೆಯಲ್ಲೇ ಕೊರೊನಾ ‌ಲಸಿಕೆ ಹಾಕಿಸಿಕೊಂಡಿದ್ದೆವು. ಇಂದು ಮುಂಜಾನೆಯು ಕೇಳಿದ್ದರೂ, ಎರಡನೇ ಡೋಸ್ ಯಾವಾಗ ಅಂತ, ಆಗ ಎರಡು ದಿನದಲ್ಲಿ ಹಾಕಿಸಿಕೊಳ್ಳೋಣಾ ಎಂದು ಹೇಳಿದ್ದೆ. ಅಷ್ಟರಲ್ಲಿ ಪಾಸಿಟಿವ್ ದೃಢಪಟ್ಟಿದೆ, ಆದಷ್ಟು ಬೇಗ ಗುಣಮುಖರಾಗಲಿ ಎಂದರು.

ಕೋವಿಡ್ ಸಮಯದಲ್ಲಿ ಸಿಎಂ ನೇತೃತ್ವ ಬಹಳ ಮುಖ್ಯ. ಅವರ ಸೂಚನೆಯಂತೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಿರ್ದೇಶನ ಕೊಡಲಿದ್ದಾರೆ.‌

ನಾನು ಕೊರೊನಾ ಯೋಧ
ಮುಖ್ಯಮಂತ್ರಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆ ಇಂದು ಬೆಳಗ್ಗೆ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ನಾನು ಕ್ವಾರಂಟೈನ್ ಆಗಬೇಕೇ ಎಂಬ ಪ್ರಶ್ನೆ ವ್ಯಕ್ತವಾಗಿದೆ. ಇಂದು ನಡೆದ ಸಭೆ ಹೊರಾಂಗಣದಲ್ಲಿ ನಡೆದಿದ್ದು, ಭೌತಿಕ ಅಂತರ, ಮಾಸ್ಕ್ ಧರಿಸುವ ಮುನ್ನೆಚ್ಚರಿಕೆಗಳನ್ನ ಪಾಲಿಸಲಾಗಿತ್ತು ಎಂದು ಸುಧಾಕರ್ ಟೀಟ್ವ್ ಮಾಡಿದ್ದಾರೆ.

  • ಮುಖ್ಯಮಂತ್ರಿಗಳಿಗೆ ಕೊರೊನಾ ಸೋಂಕು ಧೃಢಪಟ್ಟಿರುವ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ನಾನು ಕ್ವಾರಂಟೈನ್ ಆಗಬೇಕೇ ಎಂಬ ಪ್ರಶ್ನೆ ವ್ಯಕ್ತವಾಗಿದೆ.

    ಇಂದು ನಡೆದ ಸಭೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸದ ಹೊರಾಂಗಣದಲ್ಲಿ ನಡೆದಿದ್ದು, ಭೌತಿಕ ಅಂತರ, ಮಾಸ್ಕ್ ಧರಿಸುವ ಮುನ್ನೆಚ್ಚರಿಕೆಗಳನ್ನು ಪಾಲಿಸಲಾಗಿತ್ತು.

    1/3

    — Dr Sudhakar K (@mla_sudhakar) April 16, 2021 " class="align-text-top noRightClick twitterSection" data=" ">

ಕೋವಿಡ್ ಎರಡನೇ ಅಲೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವನ ಸ್ಥಾನದಲ್ಲಿ ಸ್ವತಃ ಮುಂಚೂಣಿ ಕಾರ್ಯಕರ್ತನಾಗಿ ಕಾರ್ಯ ನಿರ್ವಹಿಸುತ್ತಿರುವ ನಾನು ನನ್ನ ಕರ್ತವ್ಯವನ್ನು ಎಂದಿನಂತೆ ಮುಂದುವರೆಸುವುದು ಅನಿರ್ವಾಯವಾಗಿದೆ. ಆದ್ದರಿಂದ ಸಾಮಾಜಿಕ ಅಂತರ, ಮಾಸ್ಕ್ ಮುಂತಾದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುತ್ತ ಕನಿಷ್ಟ ಜನಸಂಪರ್ಕದೊಂದಿಗೆ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೇನೆ. ನಾಲ್ಕು ದಿನಗಳ ನಂತರ ಕೊರೊನಾ ಪರೀಕ್ಷೆಗೆ ಒಳಪಡುತ್ತೇನೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.