ETV Bharat / city

ಕರ್ನಾಟಕದಲ್ಲಿ ಕೋವಿಡ್ ದಿಢೀರ್ ಏರಿಕೆ : ಇಂದು 8 ಸಾವಿರ ಕೊರೊನಾ, 107 ಒಮಿಕ್ರಾನ್ ಕೇಸ್ ಪತ್ತೆ - ಕರ್ನಾಟಕದಲ್ಲಿ ಕೊರೊನಾ ಹೆಚ್ಚಳ

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಡಬಲ್ ಆಗುತ್ತಿವೆ. ನಿನ್ನೆ 5 ಸಾವಿರ ಗಡಿ ದಾಟಿದ್ದ ಕೇಸ್​ಗಳ ಸಂಖ್ಯೆ ಇಂದು 8 ಸಾವಿರ ಗಡಿ ದಾಟಿದೆ..

ಕರ್ನಾಟಕದಲ್ಲಿ ಕೋವಿಡ್
ಕರ್ನಾಟಕದಲ್ಲಿ ಕೋವಿಡ್
author img

By

Published : Jan 7, 2022, 6:51 PM IST

ಬೆಂಗಳೂರು : ರಾಜ್ಯದಲ್ಲಿ ಮೂರನೇ ಅಲೆ ಭಾಗಶಃ ಎಂಟ್ರಿ ಕೊಟ್ಟಿದೆ. ಇಂದು ಒಂದೇ ದಿನ 2 ಲಕ್ಷಕ್ಕೂ ಹೆಚ್ಚು ಜನರನ್ನು ಟೆಸ್ಟ್​ಗೆ ಒಳಪಡಿಸಲಾಗಿದೆ. ಇದರಲ್ಲಿ 8449 ಕೊರೊನಾ ಪಾಸಿಟಿವ್‌ ಹಾಗೂ 107 ಮಂದಿಗೆ ಒಮಿಕ್ರಾನ್ ಪತ್ತೆಯಾಗಿದೆ.

ಇಂದು ಒಟ್ಟು 4 ಸೋಂಕಿತರು ಮೃತಪಟ್ಟಿದ್ದಾರೆ. ಈ ಪೈಕಿ ಬೆಂಗಳೂರಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇಂದು ಒಂದೇ ದಿನ 107 ಜನರಲ್ಲಿ ಒಮಿಕ್ರಾನ್ ಪತ್ತೆಯಾಗಿದೆ. ಒಟ್ಟು ಸೋಂಕಿತರ ಸಂಕ್ಯೆ 333ಕ್ಕೆ ಏರಿದೆ. ರಾಜ್ಯದಲ್ಲಿ ಸದ್ಯ ಪಾಸಿಟಿವಿ ದರ ಶೇ.4.15ರಷ್ಟಿದೆ. ಬೆಂಗಳೂರಲ್ಲಿ 6812 ಕೇಸ್​ ಕಂಡು ಬಂದಿವೆ ಎಂದು ಇಲಾಖೆ ತಿಳಿಸಿದೆ.

ಬೆಂಗಳೂರಲ್ಲಿ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು ಬಂದ್ ಮಾಡಲಾಗಿದೆ. ಜೊತೆಗೆ ವೀಕೆಂಡ್ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ವಿಧಿಸಲಾಗಿದೆ.

(ಇದನ್ನೂ ಓದಿ: ಪತಿಯ ಸಾವಿನ ಬಳಿಕ ಹೆತ್ತವ್ವನ ಹೊರಹಾಕಿದ ಮಕ್ಕಳು: ಕಾನೂನು ಹೋರಾಟದಲ್ಲಿ ಕೊನೆಗೂ ಗೆದ್ದ ವೃದ್ಧೆ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.