ETV Bharat / city

ರಾಜ್ಯದಲ್ಲಿಂದು 227 ಮಂದಿಗೆ ಕೊರೋನಾ ದೃಢ.. ಇಬ್ಬರು ಸೋಂಕಿಗೆ ಬಲಿ - ಕೋವಿಡ್ ಪರೀಕ್ಷೆ

ರಾಜ್ಯದಲ್ಲಿ ಶುಕ್ರವಾರ(Friday report) 1,03,169 ಮಂದಿಗೆ ಕೋವಿಡ್ ಪರೀಕ್ಷೆ(Corona test)ನಡೆಸಲಾಗಿತ್ತು. ಇದರಲ್ಲಿ 227 ಮಂದಿಗೆ ಸೋಂಕು ದೃಢಪಟ್ಟಿದೆ. ಅಲ್ಲದೇ ಇಬ್ಬರು ಸೋಂಕಿಗೆ(2 death reported)ಬಲಿಯಾಗಿದ್ದಾರೆ..

Covid test
ಕೊರೋನಾ ಟೆಸ್ಟ್​
author img

By

Published : Nov 12, 2021, 7:14 PM IST

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ (Friday report) 1,03,169 ಮಂದಿಗೆ ಕೋವಿಡ್ ಪರೀಕ್ಷೆ(Corona test) ನಡೆಸಲಾಗಿತ್ತು. ಇದರಲ್ಲಿ 227 ಮಂದಿಗೆ ಸೋಂಕು ದೃಢಪಟ್ಟಿದೆ. ಅಲ್ಲದೇ ಇಬ್ಬರು ಸೋಂಕಿಗೆ (2 death reported) ಬಲಿಯಾಗಿದ್ದಾರೆ.

ಸೋಂಕಿತರ ಸಂಖ್ಯೆ 29,91,369ಕ್ಕೆ ಏರಿಕೆಯಾಗಿದೆ. ಅಲ್ಲದೇ ರಾಜ್ಯದಲ್ಲಿ ಇಂದು 206 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಒಟ್ಟಾರೆ 29,45,164 ಮಂದಿ ಗುಣಮುಖರಾಗಿದ್ದಾರೆ.

ಶುಕ್ರವಾರ ಇಬ್ಬರು ಸೋಂಕಿತರು ಮೃತರಾಗಿದ್ದಾರೆ. ಸಾವಿನ ಸಂಖ್ಯೆ 38,140ಕ್ಕೆ ಏರಿಕೆ ಆಗಿದೆ. ಸದ್ಯ 8,036 ಸಕ್ರಿಯ ಪ್ರಕರಣಗಳಿವೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.0.22% ರಷ್ಟಿದ್ದರೆ, ಸಾವಿನ ಪ್ರಮಾಣ 0.88% ರಷ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ರಾಜಧಾನಿ ಬೆಂಗಳೂರಿನಲ್ಲಿ 147 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 12,53,669ಕ್ಕೆ ಏರಿಕೆ ಆಗಿದೆ. 62 ಜನರು ಗುಣಮುಖರಾಗಿದ್ದು, 12,30,715 ಡಿಸ್ಜಾರ್ಜ್ ಆಗಿದ್ದಾರೆ. ರಾಜಧಾನಿಯಲ್ಲಿಂದು ಒಬ್ಬರು ಸೋಂಕಿಗೆ ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 16,307 ಇದೆ. ಸದ್ಯ 6646 ಸಕ್ರಿಯ ಪ್ರಕರಣಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.