ETV Bharat / city

ಇಬ್ಬರು ಸಿಬ್ಬಂದಿಗೆ ಕೊರೊನಾ.. ಠಾಣೆ ಸೀಲ್​​​ಡೌನ್ ಮಾಡದ ಹಿನ್ನೆಲೆ ಪೊಲೀಸರಲ್ಲಿ ಆತಂಕ - ಪೊಲೀಸರಿಗೆ ಕೊರೊನಾ ಸೋಂಕು

ಬಂದೋಬಸ್ತ್​​​​​ನಲ್ಲಿ ಕೆಲಸ ಮಾಡುತ್ತಿದ್ದ ಶ್ರೀರಾಂಪುರ ಠಾಣೆಯ ಮಹಿಳಾ ‌ಕಾನ್​​​ಸ್ಟೇಬಲ್‌ಗೆ​​ ಸೋಂಕು ತಗುಲಿದೆ. ಠಾಣಾಧಿಕಾರಿಗೆ ಕೊರೊನಾ ಧೃಢವಾದ ಹಿನ್ನೆಲೆ ಕಾಮಾಕ್ಷಿಪಾಳ್ಯ ಠಾಣೆಯನ್ನ ಸೀಲ್​​​​ಡೌನ್ ಮಾಡಲಾಗಿದೆ..

covid-19-infection-confirm-in-two-police-at-bangalore
ಪೊಲೀಸರಿಗೆ ಕೊರೊನಾ ಸೋಂಕು
author img

By

Published : Jul 3, 2020, 2:57 PM IST

ಬೆಂಗಳೂರು : ಕೆ ಪಿ ಅಗ್ರಹಾರ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಮೂರು ಕೋವಿಡ್​​-19 ಪ್ರಕರಣ ದಾಖಲಾದ್ರೂ ಠಾಣೆಯನ್ನು ಸೀಲ್​​​ಡೌನ್ ಮಾಡದ ಕಾರಣ, ಉಳಿದ ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ಹಿಂದೇಟು‌ ಹಾಕುವ ಸ್ಥಿತಿ ನಿರ್ಮಾಣವಾಗಿದೆ.

ಇದೇ ಠಾಣೆಯ ಅಪರಾಧ ವಿಭಾಗದ ಕಾನ್​​ಸ್ಟೇಬಲ್​​ ಒಬ್ಬರಿಗೆ ಸೋಂಕು ತಗುಲಿತ್ತು. ಈತನ ಸಂಪರ್ಕದಿಂದ ಇಬ್ಬರಿಗೆ ಕೊರೊನಾ ಬಂದಿದೆ. ಇಷ್ಟಾದ್ರೂ ಸೀಲ್​​ಡೌನ್​ ಮಾಡಲಿಲ್ಲ ಏಕೆ ಎಂಬ ಪ್ರಶ್ನೆ ಕಾಡುತ್ತಿದೆ. ದಿನೇದಿನೆ ಪೊಲೀಸರಲ್ಲಿ ಸೋಂಕು ಕಾಣಿಸುತ್ತಿರುವ ಪರಿಣಾಮ ಆತಂಕ ಹೆಚ್ಚಿದೆ.

ಬಂದೋಬಸ್ತ್​​​​​ನಲ್ಲಿ ಕೆಲಸ ಮಾಡುತ್ತಿದ್ದ ಶ್ರೀರಾಂಪುರ ಠಾಣೆಯ ಮಹಿಳಾ ‌ಕಾನ್​​​ಸ್ಟೇಬಲ್‌ಗೆ​​ ಸೋಂಕು ತಗುಲಿದೆ. ಠಾಣಾಧಿಕಾರಿಗೆ ಕೊರೊನಾ ಧೃಢವಾದ ಹಿನ್ನೆಲೆ ಕಾಮಾಕ್ಷಿಪಾಳ್ಯ ಠಾಣೆಯನ್ನ ಸೀಲ್​​​​ಡೌನ್ ಮಾಡಲಾಗಿದೆ. ಆತನ ಸಂಪರ್ಕದಲ್ಲಿದ್ದ ಸಿಬ್ಬಂದಿಯನ್ನು ಹೋಮ್​​ ಕ್ವಾರಂಟೈನ್ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.