ಬೆಂಗಳೂರು : ನಗರದಲ್ಲಿ ಎರಡನೇ ಅಲೆಯ ಕೊರೊನಾ ಸೋಂಕು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆಯ ಕೇಂದ್ರ ಕಚೇರಿಗೆ ಪಾಲಿಕೆ ಸಿಬ್ಬಂದಿ, ಅಧಿಕಾರಿಗಳು ಹಾಗೂ ಮಾಧ್ಯಮದವರನ್ನು ಹೊರತುಪಡಿಸಿ ಇನ್ನುಳಿದ ಸಾರ್ವಜನಿಕರಿಗೆ ಅನೌಪಚಾರಿಕ ನಿರ್ಬಂಧ ಹೇರಲಾಗಿದೆ.
ಈ ಮೊದಲು ಸಾರ್ವಜನಿಕರು ಯಾವುದೇ ಸಂದರ್ಭದಲ್ಲಾದರೂ ಪಾಲಿಕೆ ಪ್ರವೇಶಿಸಬಹುದಿತ್ತು. ಆದರೆ, ಮುನ್ನೆಚ್ಚರಿಕಾ ಕ್ರಮವಾಗಿ ಇದೀಗ ನಿಗದಿತ ಸಮಯದಲ್ಲಿ ಅಂದರೆ ಮಧ್ಯಾಹ್ನ 3 ರಿಂದ ಸಂಜೆ 5ರವರೆಗೆ ಮಾತ್ರ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿದೆ. ಈ ಅವಧಿಯಲ್ಲಿ ಸಾರ್ವಜನಿಕರು ಎಲ್ಲಾ ಸುರಕ್ಷತಾ ಕ್ರಮಗಳನ್ನ ಪಾಲಿಸಲೇಬೇಕು. ಇನ್ನು, ಈ ನಿರ್ಬಂಧದ ಕುರಿತು ಪಾಲಿಕೆ ಯಾವುದೇ ರೀತಿಯ ಅಧಿಕೃತ ಆದೇಶ ಅಥವಾ ಪ್ರಕಟಣೆ ಹೊರಡಿಸಿಲ್ಲ. ಕೊರೊನಾ ಹೆಚ್ಚಳದ ಬೆನ್ನಲ್ಲೇ ಸಾರ್ವಜನಿಕರ ಪ್ರವೇಶ ತಡೆಗೆ ನಾನಾ ಕಸರತ್ತುಗಳನ್ನು ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾಡುತ್ತಿದ್ದು, ಬಾಗಿಲಿಗೆ ಟೇಪ್ ಹಾಕುವುದು ಹಾಗೂ ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಮಾತ್ರ ಪ್ರವೇಶ ಎಂಬ ಸಂದೇಶದ ಪ್ರತಿಗಳನ್ನು ಎಲ್ಲೆಡೆ ಅಂಟಿಸಲಾಗಿದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ 62 ಸಾವಿರ, ದೆಹಲಿ 28 ಸಾವಿರಕ್ಕೂ ಅಧಿಕ.. ದೇಶದಲ್ಲಿ ಮೀತಿಮೀರಿದ ಕೊರೊನಾ ವೈರಸ್!
ವಸತಿ ಸಮುಚ್ಛಯಕ್ಕೆ ನೋಡಲ್ ಅಧಿಕಾರಿಗಳ ನೇಮಕ
ಬೆಂಗಳೂರಿನ ವಸತಿ ಸಮುಚ್ಛಯಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚು ಪತ್ತೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕೊರೊನಾ ಸೋಂಕು ಪರೀಕ್ಷೆಗೆ ಪಾಲಿಕೆ ವಲಯದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದೆ. ವಸತಿ ಸಮುಚ್ಛಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿದ್ದು, ಬೇರೆ ಕಡೆಯೂ ಸೋಂಕು ವ್ಯಾಪಿಸುತ್ತಿದೆ. ವಸತಿ ಸಮುಚ್ಛಯ ಕ್ಷೇಮಾಭಿವೃದ್ಧಿ ಸಂಘಟನೆಗಳು ಈಗಾಗಲೇ ಪಟ್ಟಿ ನೀಡಿದ್ದು, ಆದ್ಯತೆಯ ಮೇರೆಗೆ ವಸತಿ ಸಮುಚ್ಛಯಗಳಲ್ಲಿ ಸೋಂಕು ಪರೀಕ್ಷೆ ಮಾಡುವಂತೆ ಹಾಗೂ ಇದೇ ಮಾದರಿಯಲ್ಲಿ ಆಯಾ ವಲಯದ ಇತರ ವಸತಿ ಸಮುಚ್ಛಯಗಳಲ್ಲಿ ಇರುವವರಿಗೂ ಕೊರೊನಾ ಸೋಂಕು ಪರೀಕ್ಷೆ ಮಾಡುವಂತೆ ಬಿಬಿಎಂಪಿ ಆರೋಗ್ಯಾಧಿಕಾರಿ ಡಾ.ವಿಜಯೇಂದ್ರ ನಿರ್ದೇಶನ ನೀಡಿದ್ದಾರೆ.
ಕೊರೊನಾ ಸೋಂಕು ಪರೀಕ್ಷೆಗೆ ನೋಡಲ್ ಅಧಿಕಾರಿ ವಲಯ, ಆರೋಗ್ಯಾಧಿಕಾರಿ ಮತ್ತು ವಲಯ ಸಹಾಯಕರ ಮಾಹಿತಿ ಈ ಕೆಳಗಿನಂತಿದೆ.
ಪೂರ್ವ ವಲಯ - ಡಾ. ಸಿದ್ದಪ್ಪಾಜಿ (9480684214), ದಿವಾ(8123568721), ಪಶ್ಚಿಮ ವಲ - ಡಾ. ಮನೋರಂಜನ್ ಹೆಗ್ಡೆ (9480683928), ತಾಜ್ ಸುಲ್ತಾನ (7829492142)
ದಕ್ಷಿಣ ವಲಯ - ಡಾ. ಶಿವಕುಮಾರ್ (9480973395), ಜಯಾನಾಯಕ್ (9035991991), ಬೊಮ್ಮನಹಳ್ಳಿ - ಡಾ. ಸವಿತಾ (9480684570), ಲಕ್ಷ್ಮೀಪತಿ (9742062251),
ಮಹದೇವಪುರ - ಡಾ. ಸುರೇಂದ್ರ (9480683673), ಪ್ರಜ್ವಲ್ (9611831146), ರಾಜರಾಜೇಶ್ವರಿನಗರ - ಡಾ.ಬಾಲಸುಂದರ್ (9480685435), ಸುಷ್ಮಾ (8310518474), ಯಲಹಂಕ - ಡಾ.ಭಾಗ್ಯಲಕ್ಷ್ಮೀ (9036637839), ಶ್ವೇತ (9036437371), ದಾಸರಹಳ್ಳಿ - ಡಾ. ಲೋಕೇಶ್ (9480683515), ಶಿಲ್ಪಿಕಲಾ (9972832686)