ETV Bharat / city

ಕೋವಿಡ್-19: ಎಲ್ಲ ಪಕ್ಷಗಳ ಮುಖಂಡರ ಜೊತೆ ಬಿಬಿಎಂಪಿ ಸಭೆ

ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ಪಾಲಿಕೆ ಈಗಾಗಲೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ. ಅದರ ಜೊತೆಗೆ ಇಂದು ಎಲ್ಲ ಪಕ್ಷದ ಮುಖಂಡರು, ಅಧಿಕಾರಿಗಳ ಸಭೆಯನ್ನು ಮೇಯರ್ ಗೌತಮ್ ಕುಮಾರ್ ನಡೆಸಿದರು.

covid-19 bbmp meeting all party leaders
ಕೋವಿಡ್-19, ಎಲ್ಲಾ ಪಕ್ಷಗಳ ಮುಖಂಡರ ಜೊತೆ ಬಿಬಿಎಂಪಿ ಸಭೆ
author img

By

Published : Apr 9, 2020, 6:38 PM IST

ಬೆಂಗಳೂರು: ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ಪಾಲಿಕೆ ಈಗಾಗಲೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ. ಅದರ ಜೊತೆಗೆ ಇಂದು ಎಲ್ಲ ಪಕ್ಷದ ಮುಖಂಡರು, ಅಧಿಕಾರಿಗಳ ಸಭೆಯನ್ನು ಮೇಯರ್ ಗೌತಮ್ ಕುಮಾರ್ ನಡೆಸಿದರು.

ಸಭೆ ಬಳಿಕ ಮಾತನಾಡಿದ ಮೇಯರ್, ಕೋವಿಡ್-19 ಸಂಬಂಧ ಬಿಬಿಎಂಪಿ ಎಲ್ಲ 198 ವಾರ್ಡ್ ಗಳ ಸದಸ್ಯರುಗಳ ಪಿಒಡಬ್ಯೂ ಅನುದಾನ 2 ಕೋಟಿ ರೂ.ಗಳಲ್ಲಿ ಪ್ರತ್ಯೇಕವಾಗಿ 25 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ. ಇದರಡಿ ಪ್ರತಿ ವಾರ್ಡ್ ನಲ್ಲೂ ಅಂದಾಜು 5,000 ಆಹಾರ ಧಾನ್ಯಗಳ ಕಿಟ್(Food Grains Kit) ಹಾಗೂ ಅಗತ್ಯ ಔಷಧ ಶೇಖರಿಸಿಟ್ಟುಕೊಳ್ಳಲು ನಿರ್ಧರಿಸಲಾಗಿದ್ದು, 2-3 ದಿನಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೂಲಿ ಕಾರ್ಮಿಕರು, ಹೋಟೆಲ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿ, ಆಟೋ ಚಾಲಕರು ಸೇರಿದಂತೆ ಇನ್ನಿತರ ಬಡವರ್ಗದ ಜನರನ್ನು ಗುರುತಿಸಿ ಅವರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಲು ಕ್ರಮ ವಹಿಸಲಾಗುವುದು. ಸದ್ಯ ಕಾರ್ಮಿಕ ಇಲಾಖೆಯಿಂದ ವಿತರಣೆ ಮಾಡುತ್ತಿರುವ ಆಹಾರ ಧಾನ್ಯಗಳ ಕಿಟ್‌ಗಳನ್ನು ಕೇವಲ ವಲಸೆ ಕಾರ್ಮಿಕರಿಗೆ ಮಾತ್ರ ವಿತರಣೆ ಮಾಡಲಾಗುತ್ತಿದೆ.

ಅದರಂತೆ ವಲಯವಾರು ಇದುವರೆಗೆ 885 ಸ್ಥಳಗಳನ್ನು ಗುರುತಿಸಲಾಗಿದ್ದು, ಒಟ್ಟು 72,326 ವಲಸೆ ಕಾರ್ಮಿಕರನ್ನು ಗುರುತಿಸಿ ನಿನ್ನೆಯವೆರೆಗೆ 41,527 ಕಿಟ್‌ಗಳನ್ನು ವಿತರಿಸಿದ್ದು, ಇಂದು 25,208 ಕಿಟ್‌ಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಬಿಬಿಎಂಪಿ ಬಜೆಟ್ ಮಂಡನೆ ಮಾಡಲು ಈಗಾಗಲೇ ಸರ್ಕಾಕರದ ಮುಖ್ಯ ಕಾರ್ಯದರ್ಶಿಗಳಿಗೆ ಸಲಹೆ ನೀಡುವಂತೆ ಪತ್ರ ನೀಡಲಾಗಿದೆ. ಜೊತೆಗೆ ಇಂದು ನಡೆದ ಸಭೆಯಲ್ಲೂ ಹಲವು ಸಲಹೆಗಳನ್ನು ಪಡೆಯಲಾಗಿದ್ದು, ಕಾನೂನಿನ ಚೌಕಟ್ಟಿನಲ್ಲಿ ಯಾವ ರೀತಿ ಮಂಡಿಸಬೇಕು ಎಂಬುದನ್ನು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಆಯುಕ್ತರು ಮಾತನಾಡಿ, ಪಾಲಿಕೆ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ 14 ವೈದ್ಯರು 60 ವರ್ಷಕ್ಕೂ ಮೇಲ್ಪಟ್ಟವರಿದ್ದರು. ಈ ಪೈಕಿ ಸರ್ಕಾರವೂ ಕೂಡ 60 ವರ್ಷ ಮೇಲ್ಪಟ್ಟವರನ್ನು ಸೇವೆಯಲ್ಲಿ ತೊಡಗಿಸಿಕೊಳ್ಳಬಾರದೆಂಬ ಸೂಚನೆಯಿತ್ತು. ಈ ಹಿನ್ನೆಲೆ 14 ಮಂದಿಯನ್ನು ತೆರವುಗೊಳಿಸಿದ್ದು, ಹೊಸದಾಗಿ ಹೊರಗುತ್ತಿಗೆ ಆಧಾರದ ಮೇಲೆ 26 ಮಂದಿ ವೈದ್ಯರನ್ನು ನಿಯೋಜನೆ ಮಾಡಿಕೊಂಡು ಜ್ವರ ತಪಾಸಣಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಕ್ರಮವಹಿಸಲಾಗುತ್ತಿದೆ ಎಂದರು.

ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಥಮಿಕ ಸೋಂಕಿತರನ್ನು ಗುರುತಿಸಿ 14 ದಿನ ಕ್ವಾರಂಟೈನ್‌ಗೆ ಶಿಫ್ಟ್ ಮಾಡಲಾಗುತ್ತಿದೆ. ಇದೀಗ ಹೊಸದಾಗಿ 14 ದಿನ ಕ್ವಾರಂಟೈನ್, 14 ದಿನ ಹೋಮ್ ಕ್ವಾರಂಟೈನ್ ಮತ್ತು 15 ದಿನ ಸೆಲ್ಪ್ ರಿಪೋರ್ಟಿಂಗ್ ಕ್ವಾರಂಟೈನ್ ಸೇರಿ ಒಟ್ಟು 42 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇಡಲು ಸರ್ಕಾರವು ತೀರ್ಮಾನ ಕೈಗೊಂಡಿದೆ. ಅಲ್ಲದೇ ತಬ್ಲಘಿಯಿಂದ ಬಂದವರನ್ನೆಲ್ಲಾ ಹಜ್ ಭವನದಲ್ಲಿರಿಸಿ ಸಂಪೂರ್ಣ ತಪಾಸಣೆ ನಡೆಸಲಾಗಿದೆ.

ಅದರಲ್ಲಿ 14 ದಿನ ಮುಗಿದವರನ್ನು ಮನೆಗೆ ಕಳುಹಿಸಲಾಗಿದ್ದು, ಹೋಮ್ ಕ್ವಾರಂಟೈನ್‌ನಲ್ಲಿ ಇರಲು ಸೂಚನೆ ನೀಡಲಾಗಿದೆ. ಅದರಲ್ಲಿ 4 ಜನರಿಗೆ ಪಾಸಿಟಿವ್ ಕಂಡುಬಂದಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಪ್ರಾಥಮಿಕ ಸೋಂಕಿತರನ್ನು ಕ್ವಾರಂಟೈನ್‌ನಲ್ಲಿ ಇಡಲು ಈಗಾಗಲೇ 17 ಹೋಟೆಲ್‌ಗಳನ್ನು ಗುರುತಿಸಲಾಗಿದ್ದು, 1,400 ಕೊಠಡಿಗಳ ವ್ಯವಸ್ಥೆ ಕಲ್ಪಿಸಿಕೊಳ್ಳಲಾಗಿದೆ. ಅದರಲ್ಲಿ 2 ಹೋಟೆಲ್‌ಗಳಾದ ಶಬರ್‌ವಾರ್ ಹಾಗೂ ಹೋಟೆಲ್ ಸಿಟಿ ಸೆಂಟರ್ ನಲ್ಲಿ ಪಾಥಮಿಕ ಸೋಂಕಿತರನ್ನು ಇರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಉಳಿದ ಹೋಟೆಲ್‌ಗಳನ್ನು ಬಳಕೆ ಮಾಡಿಕೊಳ್ಳಲಾಗವುದು. ಅಗತ್ಯಕ್ಕನುಗುಣವಾಗಿ ಉಳಿದ ಕಲ್ಯಾಣ ಮಂಟಪಗಳನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದು ಆಯಕ್ತರು ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.