ETV Bharat / city

ದೇಶದ ಇತಿಹಾಸದಲ್ಲೇ ಇಂತಹ ನಿರುತ್ಸಾಹದ ಬಜೆಟ್ ಕಂಡಿಲ್ಲ: ಡಿಕೆಶಿ - ಕೇಂದ್ರ ಬಜೆಟ್

ಯಾರಿಗೂ ಅನುಕೂಲವಾಗದ ಜನವಿರೋಧಿ ಬಜೆಟ್ ಇದಾಗಿದೆ. ದೇಶದ ಇತಿಹಾಸದಲ್ಲಿ ಇಂತಹ ನಿರುತ್ಸಾಹದ ಬಜೆಟ್ ಇನ್ನೊಂದು ಇಲ್ಲ ಅನ್ನಿಸುತ್ತದೆ ಎಂದು ಕೇಂದ್ರ ಬಜೆಟ್​ ಕುರಿತು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ. ಕೆ. ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

country-has-never-seen-such-a-depressing-budget-in-its-history
ಡಿಕೆಶಿ
author img

By

Published : Feb 1, 2021, 6:25 PM IST

ಬೆಂಗಳೂರು: ಕೇಂದ್ರ ಸರ್ಕಾರ ಮಂಡಿಸಿರುವ ಹೊಸ ಬಜೆಟ್ ಗಮನಿಸಿದಾಗ ದೇಶದ ಇತಿಹಾಸದಲ್ಲಿ ಇಂತಹ ನಿರುತ್ಸಾಹದ ಬಜೆಟ್ ಇನ್ನೊಂದು ಇಲ್ಲ ಅನ್ನಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಯಾವ ವರ್ಗಕ್ಕೆ ಕೂಡ ಈ ಬಜೆಟ್​ನಿಂದ ಸಹಾಯವಾಗಿಲ್ಲ. 35 ಸಾವಿರ ಕೋಟಿ ರೂ. ವ್ಯಾಕ್ಸಿನ್ ವಿಚಾರ ಪ್ರಸ್ತಾಪಿಸಿದ್ದಾರೆ. ಪ್ರಧಾನಿ, ಸಚಿವರು, ಮುಖ್ಯಮಂತ್ರಿಗಳು, ಐಎಎಸ್ ಅಧಿಕಾರಿಗಳು ಮೊದಲು ವ್ಯಾಕ್ಸಿನ್ ತೆಗೆದುಕೊಳ್ಳಬೇಕಿತ್ತು. ಆದರೆ ಆರೋಗ್ಯ ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ಪ್ರಯೋಗ ಮಾಡಲಾಗಿದೆ. ಈ ರೀತಿ ಪ್ರಯೋಗ ನಡೆಸುವ ಅಗತ್ಯ ಏನಿತ್ತು? ಯಾರಿಗೂ ಅನುಕೂಲವಾಗದ ಜನವಿರೋಧಿ ಬಜೆಟ್ ಇದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ದೇಶದ ಇತಿಹಾಸದಲ್ಲೇ ಇಂತಹ ನಿರುತ್ಸಾಹದ ಬಜೆಟ್ ಕಂಡಿಲ್ಲ

ಉದ್ಯೋಗ ಸೃಷ್ಟಿಗೂ ಒತ್ತು ನೀಡಿಲ್ಲ: ವಾರ್ಷಿಕ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ ಸರ್ಕಾರ ಬಜೆಟ್​ನಲ್ಲಿ ಅದಕ್ಕೆ ಯಾವುದೇ ಯೋಜನೆಯನ್ನೂ ರೂಪಿಸಿಲ್ಲ. ರೈತರ ರಕ್ಷಣೆ ಹಾಗೂ ಬೆಂಬಲ ಬೆಲೆ ನೀಡುವ ವಿಚಾರದಲ್ಲಿಯೂ ಕ್ರಮಕೈಗೊಂಡಿಲ್ಲ. ರಕ್ಷಣೆಗೂ ಒತ್ತು‌ಕೊಟ್ಟಿಲ್ಲ. ಸಣ್ಣಪುಟ್ಟ ರಸ್ತೆ ಯೋಜನೆಗಳನ್ನು ಮುಂದುವರಿಸುತ್ತೇವೆ ಎಂದು ಹೇಳಿರುವುದನ್ನು ಬಿಟ್ಟರೆ ಬೇರೆ ಯಾವುದೇ ಅಂಶವೂ ಬಜೆಟ್ನಲ್ಲಿ ಇಲ್ಲ.

ಹೊಸತನ ಇಲ್ಲ: ರೈಲ್ವೆ ಯೋಜನೆಯಲ್ಲಿ ಯಾವುದೇ ಹೊಸತನ ಇಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭ ಸಂರಕ್ಷಿಸಿದ ಕೆಲ ಸರ್ಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ನೀಡಲು ಮುಂದಾಗಿದ್ದಾರೆ. ಪೆಟ್ರೋಲ್-ಡೀಸೆಲ್ ಬೆಲೆಗಳ ನಿಯಂತ್ರಣಕ್ಕೆ ಯಾವುದೇ ಒತ್ತು ನೀಡಿಲ್ಲ. 20 ಲಕ್ಷ ಕೋಟಿ ರೂ. ವಿತರಿಸಲಾಗಿದೆ ಎಂಬ ಮಾಹಿತಿ ನೀಡಿಲ್ಲ ಹಾಗೂ ಈ ವರ್ಷ ಎದುರಾಗಿರುವ ಸಮಸ್ಯೆಗೆ ಯಾವ ರೀತಿ ಪರಿಹಾರ ಕ್ರಮ ಕೈಗೊಳ್ಳಲಿದ್ದೇವೆ ಎಂಬ ಮಾಹಿತಿ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.