ETV Bharat / city

14‌ ದಿನ‌ ಕ್ವಾರಂಟೈನ್ ನಂತರವೂ ಕೊರೊನಾ‌ ವೈರಸ್ ಪತ್ತೆ.. ಅದ್ಹೇಗೆ ಎಂಬುದು ಯಕ್ಷಪ್ರಶ್ನೆ! - ಬೆಂಗಳೂರು ಕೋವಿಡ್​-19 ಪ್ರಕರಣಗಳು

P-218 ವರದಿಯಿಂದಾಗಿ ಇಂತಹ ಪ್ರಕರಣ ರಾಜ್ಯದಲ್ಲಿ ಸಾಕಷ್ಟಿರುವ ಸಾಧ್ಯತೆಯೂ ಇದೆ. 14 ದಿನದ ನಂತರದಲ್ಲೂ ಕೊರೊನಾ ಕಾಣಿಸಿಕೊಂಡಿದ್ಯಾ ಅಥವಾ ರೋಗಿ -218 ಸೋಂಕಿತರ ಸಂಪರ್ಕ ಮಾಡಿದ್ದರಾ? ಸರಿಯಾಗಿ ಕ್ವಾರಂಟೈನ್ ಮಾಡಿರಲಿಲ್ಲವಾ ಎಂಬ ಪ್ರಶ್ನೆಗಳು ಮಾತ್ರ ಕಾಡುತ್ತಿವೆ.‌

corona-virus-found-after-home-quarantine-in-karnataka
ಕೊರೋನಾ‌ ವೈರಸ್
author img

By

Published : Apr 13, 2020, 2:06 PM IST

ಬೆಂಗಳೂರು : 14 ದಿನಗಳ ಕ್ವಾರಂಟೈನ್​ ಮುಗಿಸಿದ ವ್ಯಕ್ತಿಯಲ್ಲಿ ಕೊರೊನಾ ವೈರಸ್​ ಪತ್ತೆಯಾಗದ ಕಾರಣ ಬಿಡುಗಡೆ ಮಾಡಲಾಗಿತ್ತು. ಆದರೆ, ಸದ್ಯ ಅದೇ ವ್ಯಕ್ತಿಯಲ್ಲಿ ಕೋವಿಡ್​-19 ಸೋಂಕು ಕಂಡು ಬಂದಿರೋದು ಆತಂಕ ಹೆಚ್ಚಿಸಿದೆ.

ರೋಗಿ-218 ವಿದೇಶದಿಂದ ರಾಜ್ಯಕ್ಕೆ ಬಂದಿದ್ದರು. 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿಡಲಾಗಿತ್ತು. ನಂತರ ವ್ಯಕ್ತಿಯ ದೇಹದಲ್ಲಿ ವೈರಸ್​ ಪತ್ತೆಯಾಗದ ಕಾರಣ ಬಿಡುಗಡೆ ಮಾಡಲಾಗಿತ್ತು. ಆದರೆ, ಇದೀಗ ಅದೇ ವ್ಯಕ್ತಿಯಲ್ಲಿ 22 ದಿನಗಳ ನಂತರ ಕೋವಿಡ್-19​ ವೈರಸ್​ ಪತ್ತೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತನ್ನ ಹೆಲ್ತ್​ ಬುಲೆಟಿನ್​ನಲ್ಲಿ ಮಾಹಿತಿ ನೀಡಿದೆ.

corona-virus-found-after-home-quarantine-in-karnataka
ಕಿಲ್ಲರ್​ ಕೊರೊನಾ‌ ವೈರಸ್

ಸದ್ಯ ಈ ಪ್ರಕರಣದಿಂದ ರಾಜ್ಯದಲ್ಲಿ ಆತಂಕ ಮನೆ ಮಾಡಿದೆ. ಕಾರಣ ವಿದೇಶದಿಂದ ಮರಳಿದವರನ್ನು 14 ದಿನಗಳ ಕಾಲ ಕ್ವಾರಂಟೈನ್​ ಮಾಡಿ ಸರ್ಕಾರ ಸುಮ್ಮನಾಗಿದೆ. ಆದರೆ, P-218 ವರದಿಯಿಂದಾಗಿ ಇಂತಹ ಪ್ರಕರಣ ರಾಜ್ಯದಲ್ಲಿ ಸಾಕಷ್ಟಿರುವ ಸಾಧ್ಯತೆಯೂ ಇದೆ. 14 ದಿನದ ನಂತರದಲ್ಲೂ ಕೊರೊನಾ ಕಾಣಿಸಿಕೊಂಡಿದ್ಯಾ ಅಥವಾ ರೋಗಿ -218 ಸೋಂಕಿತರ ಸಂಪರ್ಕ ಮಾಡಿದ್ದರಾ? ಸರಿಯಾಗಿ ಕ್ವಾರಂಟೈನ್ ಮಾಡಿರಲಿಲ್ಲವಾ ಎಂಬ ಪ್ರಶ್ನೆಗಳು ಮಾತ್ರ ಕಾಡುತ್ತಿವೆ.‌

ಸದ್ಯ ಇದಕ್ಕೆಲ್ಲ ಉತ್ತರ ಆರೋಗ್ಯ ಇಲಾಖೆಯ ತನಿಖೆಯಲ್ಲಿ ತಿಳಿಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.