ETV Bharat / city

ಕೊರೊನಾ ಲಾಕ್‌ಡೌನ್‌.. ಹೈಕೋರ್ಟ್​ನಿಂದ ರಾಜ್ಯಸರ್ಕಾರಕ್ಕೆ ಹಲವು ನಿರ್ದೇಶನ.. - bangalore news

ವೈದ್ಯರಿಗೆ ಅಗತ್ಯ ಸುರಕ್ಷತಾ ಉಪಕರಣ ಒದಗಿಸಬೇಕು. ರಾಜ್ಯದಲ್ಲಿರುವ ಕೊರೋನಾ ಪರೀಕ್ಷಾ ಲ್ಯಾಬ್‌ಗಳ ವಿವರವನ್ನು ಮುಂದಿನ ವಿಚಾರಣೆ ವೇಳೆ ನೀಡಬೇಕು. ಈ ಸೂಚನೆಗಳ ಪಾಲನೆಗೆ ಕೈಗೊಂಡ ಕ್ರಮಗಳ ಕುರಿತು ಸರ್ಕಾರ ಏ.3ರಂದು ಮಾಹಿತಿ ನೀಡಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.

author img

By

Published : Mar 30, 2020, 10:27 PM IST

ಬೆಂಗಳೂರು : ರಾಜ್ಯದಲ್ಲಿ ಲಾಕ್‌ಡೌನ್‌ ಮುಂದುವರೆದಿರುವ ಕಾರಣ ಬೀದಿ ನಾಯಿಗಳೂ ಸೇರಿ ಎಲ್ಲಾ ಸಾಕು ಪ್ರಾಣಿಗಳ ಆಹಾರ ಪೂರೈಕೆ ಕಡೆಗೂ ಗಮನ ನೀಡಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಾರ್ಮಿಕರು ಮತ್ತು ನಿರ್ಗತಿಕರಿಗೆ ಸೂಕ್ತ ಪ್ರಮಾಣದಲ್ಲಿ ಆಹಾರ ಪೂರೈಸುವಂತೆ ಮತ್ತು ಆಹಾರ ಭದ್ರತೆ ಒದಗಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ವಿವಿಧ ಸಂಘಟನೆಗಳು ಮತ್ತು ವಕೀಲರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿತು.

ಕೆಲ ಕಾಲ ವಕೀಲರ ವಾದ ಆಲಿಸಿದ ಪೀಠ, ಅಂಗನವಾಡಿಗಳು ಮುಚ್ಚಿರುವ ಕಾರಣ ಮಕ್ಕಳು ಮತ್ತು ಗರ್ಭಿಣಿಯರಿಗೆ ಬಿಸಿಯೂಟ ವಿತರಿಸಲು ಮತ್ತು ಲಸಿಕೆ ಹಾಕುವುದನ್ನು ಮುಂದುವರೆಸಲು ಅಗತ್ಯ ಕ್ರಮ ಜರುಗಿಸಬೇಕು. ನಗರ ಪ್ರದೇಶದಲ್ಲಿ ಬಡವರಿಗೆ ಹಾಗೂ ನಿರ್ಗತಿಕರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಆಹಾರ ಪೂರೈಸಲಾಗಿದೆ. ಜನಸಂದಣಿ ತಗ್ಗಿಸಲು ಪರ್ಯಾಯ ಕ್ರಮಗಳ ಬಗ್ಗೆ ಯೋಜನೆ ರೂಪಿಸಬೇಕು.

ಗ್ರಾಮೀಣ ಭಾಗದಲ್ಲಿ ಬಡವರು, ನಿರ್ಗತಿಕರು ಮತ್ತು ಕೂಲಿ ಕಾರ್ಮಿಕರಿಗೆ ಆಹಾರ ಸರಬರಾಜು ಮಾಡುವ ಕುರಿತು ಗ್ರಾಮ ಪಂಚಾಯತ್‌ ಕ್ರಮವಹಿಸಬೇಕು. ಪಡಿತರ ಚೀಟಿ ಇಲ್ಲದ ವಲಸೆ ಕಾರ್ಮಿಕರಿಗೂ ಆಹಾರ ಒದಗಿಸಬೇಕು. ಆಹಾರ ಧಾನ್ಯ ಕಾಳಸಂತೆ ಸೇರದಂತೆ ಕ್ರಮಕೈಗೊಳ್ಳಬೇಕು. ಬೀದಿ ನಾಯಿಗಳು ಸೇರಿ ಎಲ್ಲಾ ಪ್ರಾಣಿಗಳಿಗೂ ಆಹಾರ ಒದಗಿಸಬೇಕು. ಇದಕ್ಕೆ ಸ್ವಯಂಸೇವಾ ಸಂಘಗಳ ನೆರವನ್ನು ಸರ್ಕಾರ ಪಡೆಯಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.