ETV Bharat / city

ರಾಜ್ಯ ಶಿಕ್ಷಣ ವ್ಯವಸ್ಥೆಯ ಮೇಲೆ ಕೊರೊನಾ ಕರಿನೆರಳು...ವಠಾರ ಶಾಲೆ ಆರಂಭಿಸಿದ ಸರ್ಕಾರ! - Karnataka govt bars online classes

ಖಾಸಗಿ ಶಾಲೆಗಳಲ್ಲಿ ಕೇವಲ ಆನ್​​​ಲೈನ್ ಕ್ಲಾಸ್ ನಡೆಯುತ್ತಿದ್ದರೆ, ಸರ್ಕಾರಿ ಮಕ್ಕಳಿಗೆ ವಿದ್ಯಾಗಮ ಯೋಜನೆ ಮೂಲಕ ವಠಾರ ಶಾಲೆ ಆರಂಭಿಸಿದೆ. ಕೊರೊನಾ ಬಳಿಕ ಸರ್ಕಾರಿ ಶಾಲೆಗಳು ಅಂದರೆ ಮೂಗು ಮುರಿಯುತ್ತಿದ್ದ ಪೋಷಕರ ಮನೋಭಾವ ಬದಲಾಗುತ್ತಿದೆ.

corona effect on state education system
ರಾಜ್ಯ ಶಿಕ್ಷಣ ವ್ಯವಸ್ಥೆಯ ಮೇಲೆ ಕೊರೊನಾ ಕರಿನೆರಳು
author img

By

Published : Sep 4, 2020, 7:05 PM IST

ಬೆಂಗಳೂರು: ರಾಜ್ಯದಲ್ಲಿ ಸೆಪ್ಟೆಂಬರ್​ 1ರಿಂದ ಅನ್​ಲಾಕ್ 4.0 ಪ್ರಕ್ರಿಯೆ​ ಜಾರಿಯಾಗಿದ್ದರೂ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸುವ ಕುರಿತು ಗೊಂದಲ ಮುಂದುವರೆದಿದೆ. ಹೀಗಾಗಿ, ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಆನ್​​ಲೈನ್​ ಶಿಕ್ಷಣಕ್ಕೆ ಒತ್ತು ನೀಡಿದೆ.

ಕೊರೊನಾ ವೈರಸ್​ ಹಾವಳಿ ಶಿಕ್ಷಣ ವ್ಯವಸ್ಥೆ ಮೇಲೆ ಕರಿನೆರಳು ಬಿದ್ದಿದೆ. ಹೀಗಾಗಿ, ಸರ್ಕಾರ ಆನ್​​ಲೈನ್​ ಶಿಕ್ಷಣದತ್ತ ಗಮನಹರಿಸಿದೆ. ಪ್ರಾಥಮಿಕ ಶಾಲಾ-ವಿದ್ಯಾರ್ಥಿಗಳಿಗೆ ಆನ್​​ಲೈನ್ ತರಗತಿಗಳು ನಡೆದರೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚಂದನವಾಹಿನಿ ಮೂಲಕ ಪಾಠ ಪ್ರವಚನ ನಡೆಯುತ್ತಿದೆ. ಆದರೆ, ಇವೆಲ್ಲದರಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್​ ತೊಂದರೆ, ಟಿವಿ, ಮೊಬೈಲ್ ಇಲ್ಲದ ಬಡ ವಿದ್ಯಾರ್ಥಿಗಳು ಪಾಠಗಳಿಂದ ವಂಚಿತರಾಗ್ತಿದ್ದು, ಅವರಿಗೆ ಭವಿಷ್ಯದಲ್ಲಿ ತೊಂದರೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮತ್ತೆ ಕೆಲವೆಡೆ ಉತ್ತಮ ಸ್ಪಂದನೆ ದೊರೆಯುತ್ತಿದೆ.

ಕೊರೊನಾ ಬಳಿಕ ಸರ್ಕಾರಿ ಶಾಲೆಗಳು ಅಂದರೆ ಮೂಗು ಮುರಿಯುತ್ತಿದ್ದ ಪೋಷಕರ ಮನೋಭಾವ ಬದಲಾಗುತ್ತಿದೆ. ಯಾಕಂದರೆ ಖಾಸಗಿ ಶಾಲೆಗಳಲ್ಲಿ ಕೇವಲ ಆನ್​​​ಲೈನ್ ಕ್ಲಾಸ್ ನಡೆಯುತ್ತಿದ್ದರೆ, ಸರ್ಕಾರಿ ಮಕ್ಕಳಿಗೆ ವಿದ್ಯಾಗಮ ಯೋಜನೆ ಮೂಲಕ ವಠಾರ ಶಾಲೆ ಆರಂಭಿಸಿದೆ. ಶಿಕ್ಷಕರೇ ಮಕ್ಕಳ ಬಳಿ ಹೋಗಿ ಪಾಠ ಹೇಳುವುದು ಮತ್ತು ಮಕ್ಕಳು ಶಿಕ್ಷಣದಿಂದ ದೂರವಾಗಬಾರದು ಎಂಬುದೇ ಈ ಕಾರ್ಯಕ್ರಮದ ಉದ್ದೇಶ. ಗ್ರಾಮೀಣ ಪ್ರದೇಶದಲ್ಲಿ ಸಮುದಾಯ ಕೇಂದ್ರ, ಮಸೀದಿ, ಚರ್ಚ್​​, ಮಂದಿರ, ಆಲದ ಮರ ಹೀಗೆ ಬಯಲು ಪ್ರದೇಶದಲ್ಲಿ ಪಾಠ ಮಾಡಲಾಗುತ್ತಿದೆ. ನಗರ ಪ್ರದೇಶದಲ್ಲಿ ಅಂತಹ ವಾತಾವರಣ ಇಲ್ಲದ ಕಾರಣ ಬೇರೆ ಮಾರ್ಗವಿಲ್ಲದೆ ಆನ್​​ಲೈನ್​ನಲ್ಲೇ ಶಿಕ್ಷಣ ಪಡೆಯಬೇಕಾಗಿದೆ.

ಶಿಕ್ಷಣ ವ್ಯವಸ್ಥೆ ಕುರಿತು ವರದಿ

ದಾವಣಗೆರೆಯಲ್ಲಿ ಕಾಲ್ಪನಿಕ ಕೋಣೆಯ ಪರಿಕಲ್ಪನೆಯಡಿ ತರಗತಿಗಳು ನಡೆಯುತ್ತಿದೆ. ಬೀದರ್​​​ನಲ್ಲಿ ಒಟ್ಟು 1 ಲಕ್ಷ 68 ಸಾವಿರ ವಿದ್ಯಾರ್ಥಿಗಳ ಪೈಕಿ 1 ಲಕ್ಷ 13 ಸಾವಿರ ಮಕ್ಕಳು ವಠಾರ ಶಾಲೆಯ ಮೂಲಕ ಶಿಕ್ಷಣ ಪಡೆಯುತ್ತಿದ್ದು, 7,013 ಶಿಕ್ಷಕರು ಬೋಧನೆಯಲ್ಲಿ ತೊಡಗಿದ್ದಾರೆ. ಬೆಳಗಾವಿಯಲ್ಲಿ ನೂರಕ್ಕೆ ಶೇ.20ರಷ್ಟು ಮಕ್ಕಳಿಗೆ ಸ್ಮಾರ್ಟ್‍ಫೋನ್‍ಗಳಿಲ್ಲ. ಇನ್ನುಳಿದ ಶೇ.80ರಷ್ಟು ಮಕ್ಕಳು ಸ್ಮಾರ್ಟ್‍ಫೋನ್ ಹೊಂದಿದ್ದಾರೆ. ಪಾಠ ಪ್ರವಚನದ ಬಳಿಕ ಮಕ್ಕಳಿಗೆ ಹೋಮ್ ವರ್ಕ್ ಕೂಡ ಶಿಕ್ಷಕರು ನೀಡುತ್ತಿದ್ದಾರೆ. ಆದರೆ, ಖಾಸಗಿ ಶಿಕ್ಷಣ ಸಂಸ್ಥೆಗಳು ಆಧುನಿಕ ಸೌಲಭ್ಯಗಳಿಂದ ಶಿಕ್ಷಣ ಒದಗಿಸುತ್ತಿವೆ. ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಶಿಕ್ಷಣಕ್ಕೆ ಬೇಕಾದ ಅಗತ್ಯ ಸೌಲಭ್ಯಗಳು ಇಲ್ಲದಿರುವುದು ಬೇಸರದ ಸಂಗತಿ.

ಸೆಪ್ಟೆಂಬರ್​ 1ರಿಂದ 30ರ ತನಕ ಆನ್​​ಲೈನ್​ ಶಿಕ್ಷಣವನ್ನೇ ಮುಂದುವರೆಸಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿದೆ. ವಠಾರ ಶಾಲೆಗಳಲ್ಲಿ ಮಕ್ಕಳಿಗೆ ಮಾಸ್ಕ್​, ಸ್ಯಾನಿಟೈಸರ್ ಕಡ್ಡಾಯವಾಗಿದೆ. ಇನ್ನು ಎಷ್ಟು ದಿನಗಳ ಕಾಲ ಕೊರೊನಾ ಹಾವಳಿ ಇರುತ್ತೋ ಗೊತ್ತಿಲ್ಲ. ಆದರೆ ಕೊರೊನಾ ಬೇಗ ತೊಲಗಲಿ. ಮತ್ತೆ ಮಕ್ಕಳು ಶಾಲಾ-ಕಾಲೇಜುಗಳತ್ತ ಮುಖ ಮಾಡಿ ಲವಲವಿಕೆಯಿಂದ ಪಾಠ ಕಲಿಯುವಂತಾಗಲಿ ಎಂಬುದು ರಾಜ್ಯದ ಜನರ ಆಶಯವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.