ಬೆಂಗಳೂರು: ದಿನದಿಂದ ದಿನಕ್ಕೆ ಮಾದಕದ್ರವ್ಯ ಜಾಲ ರಾಜಧಾನಿಯಲ್ಲಿ ತನ್ನ ಕಬಂದಬಾಹುಗಳನ್ನ ವಿಸ್ತರಿಸಿಕೊಳ್ಳುತ್ತಿದೆ. ಪೊಲೀಸರು ಚಾಪೆ ಕೆಳೆಗೆ ತೂರಿದರೆ ರಂಗೋಲಿ ಕೆಳಗೆ ಡ್ರಗ್ ಪೆಡ್ಲರ್ಸ್ ತೂರುತ್ತಿದ್ದಾರೆ. ಹೀಗಾಗಿ ಡ್ರಗ್ಸ್ ಜಾಲಕ್ಕೆ ಕಡಿವಾಣ ಹಾಕಲು ಖಾಕಿ ಮಾಸ್ಟರ್ ಪ್ಲಾನ್ ಮಾಡಿದೆ.
ಡ್ರಗ್ ಪೆಡ್ಲರ್ಗಳಿಗೆ ಬಿಸಿ ಮುಟ್ಟಿಸಲು ಪೂರ್ವ ವಿಭಾಗದಿಂದ ಸ್ಪೆಷಲ್ ಟಾಸ್ಕ್ ಜಾರಿಮಾಡಲಾಗಿದೆ. ನಿರ್ಜನ ಪ್ರದೇಶ, ಶಾಲಾ ಕಾಲೇಜುಗಳು, ಐಟಿ ಕಂಪನಿಗಳ ಬಳಿಯ ಡ್ರಗ್ಸ್ ಮಾರಾಟಕ್ಕೆ ಬ್ರೇಕ್ ಹಾಕಲು ಸ್ಟಾಟರ್ಜಿ ಮಾಡಲಾಗಿದೆ. ಡಿಸಿಪಿ ಶರಣಪ್ಪರಿಂದ ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ಟಾರ್ಗೆಟ್ ಫಿಕ್ಸ್ ಮಾಡಲಾಗಿದೆ.
'ಕನ್ಸೂಮರ್ ಟು ಫೆಡ್ಲರ್ ಆಪರೇಷನ್' ಸ್ಟಾರ್ಟ್ ಮಾಡಿದ ಖಾಕಿ ಪಡೆ ಕಾರ್ಯಾಚರಣೆಗಿಳಿದಿದೆ. ಪೂರ್ವ ವಿಭಾಗ ಪೊಲೀಸರಿಂದ ಏರಿಯಾ ಡಾಮಿನೇಷನ್ ಮತ್ತು ಕನ್ಸುಮರ್ ಟೂ ಪೆಡ್ಲರ್ ಸ್ಟಾಟರ್ಜಿ ಮಾಡಲಾಗುತ್ತಿದೆ. ಹಳೇ ಡ್ರಗ್ಸ್ ಕೇಸ್ಗಳನ್ನು ರೀ ಓಪನ್ ಮಾಡಲು ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಸೂಚಿಸಿದ್ದಾರೆ. ಕೇಸ್ಗಳಲ್ಲಿ ಒಬ್ಬ ಕನ್ಸುಮರ್ ಸಿಕ್ಕರೆ ಆತನ ವಿಚಾರಣೆ ಮಾಡಿ ಡ್ರಗ್ಸ್ ಮೂಲಕ್ಕೆ ಕೈ ಹಾಕಲು ಖಾಕಿ ಪಡೆ ಮುಂದಾಗಿದೆ.
ಕನ್ಸೂಮರ್ ಟು ಕಿಂಗ್ ಪಿನ್: ಕಿಂಗ್ ಪಿನ್, ಡ್ರಗ್ ಪೆಡ್ಲರ್, ಸಬ್ ಪೆಡ್ಲರ್, ಮಧ್ಯವರ್ತಿ, ಕನ್ಸ್ಯೂಮರ್ ಹೀಗೆ ಡ್ರಗ್ಸ್ ಸಪ್ಲೈ ಆಗುತ್ತಿದೆ. ಈ ಹಿಂದೆ ಕೇಸ್ಗಳಲ್ಲಿ ಯಾರೋ ಒಬ್ಬಿಬ್ಬರು ಮಾತ್ರ ಅರೆಸ್ಟ್ ಆಗುತ್ತಿದ್ದರು. ಆದರೆ, ಈಗ ಒಂದು ಕೇಸ್ ಮಾಡಿದರೆ ಕನ್ಸೂಮರ್ ನಿಂದ ಹಿಡಿದು ಸಪ್ಲೈ ಮಾಡುವ ಕಿಂಗ್ ಪಿನ್ ಕೂಡಾ ಬಂಧನ ಮಾಡುವ ಮಾಸ್ಟರ್ ಪ್ಲಾನ್ ಮಾಡಲಾಗಿದೆ. ಎಲ್ಲ ಪೊಲೀಸ್ ಠಾಣೆಗಳಲ್ಲಿ ಕನ್ಸೂಮರ್ಗಳನ್ನ ಹಿಡಿದು ಕೇಸ್ ಹಾಕಿ ಪೆಡ್ಲರ್ಸ್ಗಳ ಬೆನ್ನು ಬಿದ್ದಿದೆ. ಸ್ಥಳೀಯರೇ ಹೆಚ್ಚು ಸಬ್ ಪೆಡ್ಲರ್ಗಳಾಗಿದ್ದು, ಪೆಡ್ಲರ್ ಮತ್ತು ಕಿಂಗ್ ಫಿನ್ ಆಫ್ರಿಕನ್ ಪ್ರಜೆಗಳಾಗಿದ್ದಾರೆ.
10 ದಿನಗಳಲ್ಲಿ 77 ಕೇಸ್: ಕೇವಲ ಹತ್ತೇ ದಿನದಗಳಲ್ಲಿ ಕನ್ಸೂಮರ್ ಮತ್ತು ಪೆಡ್ಲರ್ಸ್ ಮೇಲೆ ಬರೋಬ್ಬರಿ 77 ಕೇಸ್ ದಾಖಲಾಗಿದೆ. ಇನ್ನು ಕನ್ಸೂಮರ್ ಟು ಫೆಡ್ಲರ್ ಜೊತೆಗೆ ಏರಿಯಾ ಡಾಮಿನೇಷನ್ ಟಾಸ್ಕ್ ನೀಡಲಾಗಿದೆ. ನಿತ್ಯ ಸಂಜೆ 6 ರಿಂದ 8 ಗಂಟೆವರೆಗೆ ಆಯಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಾರ್ಯಾಚರಣೆ ಮಾಡಲಾಗ್ತಿದೆ. ಯಾವುದೇ ಪೂರ್ವ ವ್ಯವಸ್ಥೆ ಇಲ್ಲದೇ ಸಾರ್ವಜನಿಕರ ಭೇಟಿ ಮಾಡಿ ವಿಚಾರಣೆ ಮಾಡುವುದು ಇದರ ವಿಶೇಷತೆ ಆಗಿದೆ.
ಮಫ್ತಿಯಲ್ಲಿ ಕಾರ್ಯ: ಗಾಂಜಾ, ಡ್ರಗ್ಸ್ ಸಪ್ಲೈ ಸೇರಿ ದುಚ್ಚಟಗಳ ಬಗ್ಗೆ ಮಾಹಿತಿ ಕಲೆ ಹಾಕಿ, ಪಾರ್ಕ್, ಬಸ್ ನಿಲ್ದಾಣ, ಕಾಲೇಜು, ಐಟಿ ಕಂಪನಿ, ಕಮರ್ಷಿಯಲ್ ಸ್ಥಳ, ನಿರ್ಜನ ಪ್ರದೇಶ, ಸೈಟ್ ಗಳಿರುವ ಪ್ರದೇಶ ಎಲ್ಲ ಕಡೆ ರೌಂಡ್ಸ್ ಮಾಡಲಾಗ್ತಿದೆ. ಸ್ಥಳೀಯರನ್ನ ಭೇಟಿ ಮಾಡಿ ಡ್ರಗ್ಸ್ ಹುಡುಗರ ಬಗ್ಗೆ ಮಾಹಿತಿ ಪಡೆದು ಬಲೆ ಬೀಸಲಿದ್ದಾರೆ. ಪೂರ್ತಿ ಮಾಹಿತಿ ಪಡೆದುಕೊಂಡು ಆ ಏರಿಯಾದಲ್ಲೇ ಖಾಕಿ ಮಫ್ತಿಯಲ್ಲೇ ಕಾರ್ಯಾಚರಣೆಗಿಳಿಯಲಿದೆ.
ಹೀಗೆ 15 ದಿನಗಳಲ್ಲಿ 98 ಕೇಸ್ಗಳನ್ನ ಪೊಲೀಸರು ಹಾಕಿದ್ದಾರೆ. ಪ್ರತಿ ಪೊಲೀಸ್ ಠಾಣೆಯಲ್ಲಿ ಡ್ರಗ್ಸ್ ಕೇಸ್ ಗಳ ಬಗ್ಗೆ ಹೆಚ್ಚು ನಿಗಾ ವಹಿಸಲು ಎಚ್ಚರಿಕೆ ನೀಡಲಾಗುತ್ತಿದೆ. ಇನ್ನು ವಿಶೇಷವಾಗಿ ಹೆಣ್ಣೂರು, ಬಾಣಸವಾಡಿ, ಕೆ. ಆರ್. ಪುರಂ, ಕೊತ್ತನೂರು, ಶಿವಾಜಿನಗರದ ಕಡೆ ಹೆಚ್ಚು ನಿಗಾ ವಹಿಸಲು ಸೂಚಿಸಲಾಗಿದೆ. ಈ ಮೂಲಕ ಡ್ರಗ್ ಕಂಟ್ರೋಲ್ಗೆ ಪೂರ್ವ ವಿಭಾಗ ಪೊಲೀಸರು ಟೊಂಕ ಕಟ್ಟಿ ನಿಂತಿದ್ದಾರೆ.