ETV Bharat / city

ರಾಣಿ ಚೆನ್ನಮ್ಮ ವಸತಿ ನಿಲಯ ನಿರ್ಮಾಣಕ್ಕೆ ಜಾಗ ಬಿಟ್ಟುಕೊಟ್ಟ ಗ್ರಾಮ ಪಂಚಾಯಿತಿ - Land issue

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅನುಕೂಲವಾಗುವಂತೆ ವಸತಿ ನಿಲಯ ನಿರ್ಮಿಸಲು ಸರ್ಕಾರ ಮುಂದಾಗಿದೆ.

construction-of-kittur-rani-chennamma-hostel
author img

By

Published : Oct 21, 2019, 6:51 PM IST

ಬೆಂಗಳೂರು: ಬಹಳ ದಿನಗಳಿಂದಲೂ ನಿವೇಶನ ಕೊರತೆಯಿಂದ ನನೆಗುದಿಗೆ ಬಿದ್ದಿದ್ದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯ ನಿರ್ಮಾಣಕ್ಕೆ ಕೊನೆಗೂ ಜಾಗ ಸಿಕ್ಕಿದೆ.

ಜಿಲ್ಲೆಯ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅನುಕೂಲವಾಗಲು ವಸತಿ ನಿಲಯ ನಿರ್ಮಿಸಲು ಸರ್ಕಾರ ಮುಂದಾಗಿತ್ತು. ಅಲ್ಲದೇ ಸಮಾಜ ಕಲ್ಯಾಣ ಇಲಾಖೆಯಿಂದ ₹18 ಕೋಟಿ ಅನುದಾನ ಮಂಜೂರಾಗಿತ್ತು. ಆದರೆ, ಅದಕ್ಕೆ ನಿವೇಶನದ ಕೊರತೆ ಎದುರಾಗಿತ್ತು. ಆರಂಭದಲ್ಲಿ ಚನ್ನರಾಯಪಟ್ಟಣ ಹೋಬಳಿಯ ಸೋಮತ್ತನಹಳ್ಳಿಯಲ್ಲಿ ಜಾಗ ಮಂಜೂರಾಗಿತ್ತು. ಜಾಗದ ವಿಸ್ತೀರ್ಣ ಕಡಿಮೆಯಿದ್ದ ಕಾರಣ ಬೇರೆ ಸ್ಥಳಕ್ಕಾಗಿ ಸರ್ಕಾರ ಹುಡುಕಾಟ ನಡೆಸಿತ್ತು.

ವಸತಿ ನಿಲಯಕ್ಕೆ ಬಿಟ್ಟುಕೊಟ್ಟ ಜಾಗ

ನಲ್ಲೂರು ಗ್ರಾಮ ಪಂಚಾಯಿತಿ ತನ್ನ ವ್ಯಾಪ್ತಿಯ ಬಾಲೇಪುರ ಗ್ರಾಮದ ಸರ್ವೇ ನಂಬರ್ 60ರಲ್ಲಿ 8 ಎಕರೆ ಭೂಮಿಯನ್ನು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಿ ನಿವೇಶನ ಸಮಸ್ಯೆ ನೀಗಿಸಿದೆ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಕಟ್ಟಡ ಕಾಮಗಾರಿ ಸದ್ಯದಲ್ಲೇ ಆರಂಭವಾಗಲಿದ್ದು, ಈ ವಸತಿ‌ ಶಾಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 75 ಹಾಗೂ ಸಾಮಾನ್ಯ ಜನರಿಗೆ 25 ರಷ್ಟು ಅವಕಾಶ ಮಾಡಿಕೊಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Intro:KN_BNG_02_21_Grama Panchayat_Gift_Ambarish_7203301

Slug : ಸಮಾಜ ಕಲ್ಯಾಣ ಇಲಾಖೆಗೆ ಗ್ರಾಮ ಪಂಚಾಯಿತಿಯಿಂದ 20 ಕೋಟಿ ಗಿಫ್ಟ್
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ‌ ನಿರ್ಮಾಣಕ್ಕೆ ಬಾಲೇಪುರದ ಸರ್ಕಾರಿ ಜಮೀನು

ಬೆಂಗಳೂರು: ಬಡವರಿಗಾಗಿ ಸರ್ಕಾರ ಹಲವಾರು ಯೋಜನೆಯನ್ನು ಹಾಕಿಕೊಂಡಿದ್ದು, ಅವರ ಅಭಿವೃದ್ಧಿಗೆ‌ ಶ್ರಮಿಸುತ್ತಿದೆ. ಹಾಗೇ ಬಡ ಮಕ್ಕಳ. ವಿದ್ಯಾಭ್ಯಾಸಕ್ಕಾಗಿ ಉಚಿತ ಶಿಕ್ಷಣದ ಜೊತೆಯಲ್ಲಿ ವಸತಿಯನ್ನು ಇಂದಿರಾಗಾಂಧಿ, ಮೊರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ಮೂಲಕ ನೀಡುತ್ತಿದೆ.. ಇದೀಗ ಮತ್ತೊಂದು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಸ್ಥಾಪನೆಗೆ ಸರ್ಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆ ಮುಂದಾಗಿದ್ದು,‌ ಅದಕ್ಕೆ ಬೇಕಾದ ಜಾಗವನ್ನು ಪಂಚಾಯತಿಯೊಂದು ಉಚಿತವಾಗಿ ನೀಡಿದೆ.. ಅದು ಎಲ್ಲಿ ಅಂತಿರಾ ಹಾಗಾದ್ರೆ ಈ ಸ್ಟೋರಿ ನೋಡಿ..

ಬಯಲು ಸೀಮೆಯಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೆಚ್ಚಾಗಿ ಬಡ ಜನರು ಹಾಗೂ ಹಿಂದೂಳಿದ ಜನರಿದ್ದು, ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಹಲವು ಉಚಿತ ವಸತಿ‌ ಶಾಲೆಗಳನ್ನು ನಿರ್ಮಿಸಿದ್ದಾರೆ.. ಇದೀಗ ಮತ್ತೊಂದು ಉಚಿತ ವಸತಿ ನಿಲಯ ವನ್ನು ನಿರ್ಮಾಣ ಮಾಡಲು‌ ಮುಂದಾಗಿದ್ದು, ಅದಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ನಲ್ಲೂರು ಗ್ರಾಮ ಪಂಚಾಯಿತಿಯು ಸರ್ಕಾರಿ ಜಮೀನನ್ನು ಉಚಿತವಾಗಿ ಬಿಟ್ಟುಕೊಟ್ಟಿದೆ.. ಸಮಾಜ ಕಲ್ಯಾಣ ಇಲಾಖೆಗೆ 20 ಕೋಟಿ ಮೌಲ್ಯವುಳ್ಳ ಆಸ್ತಿಯನ್ನು ನೀಡುತ್ತಿದ್ದು, ನಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಲೇಪುರ ಗ್ರಾಮದ ಸರ್ವೇ ನಂಬರ್ 60 ರಲ್ಲಿ ಸುಮಾರು 8 ಎಕರೆ ಭೂಮಿಯನ್ನು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ.

ಬೈಟ್ : ಲಕ್ಷ್ಮೀನಾರಾಯಣಪ್ಪ, ಜಿ.ಪಂ ಸದಸ್ಯ

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಈಗಾಗಲೇ 18 ಕೋಟಿ ವೆಚ್ಚದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯನ್ನು ನಿರ್ಮಾಣ ಮಾಡಲು ಅನುದಾನ ಮಂಜೂರಾಗಿದ್ದು ಅದಕ್ಕೆ ನಿವೇಶನ ಕೊರತೆ ಇತ್ತು. ಆರಂಭದಲ್ಲಿ ಚನ್ನರಾಯಪಟ್ಟಣ ಹೋಬಳಿಯ ಸೋಮತ್ತನಹಳ್ಳಿಯಲ್ಲಿ ಜಾಗ ಮಂಜೂರಾಗಿತ್ತು.. ಆದರೆ ಅಲ್ಲಿನ ಜಾಗ ಕಡಿಮೆ ಇದ್ದ ಕಾರಣ ಬೇರೆ ಜಾಗ ಹುಡುಕಾಟದಲ್ಲಿ ಇದ್ದಾಗ, ಇದಕ್ಕೆ ನಲ್ಲೂರು ಗ್ರಾಮ ಪಂಚಾಯಿತಿ ಮುಂದಾಗಿ 8 ಎಕರೆ ಗ್ರಾಮ ಪಂಚಾಯಿತಿ ಆಸ್ತಿಯನ್ನು ಪಂಚಾಯತಿಯ ಬಾಲೇಪುರ ಗ್ರಾಮದಲ್ಲಿ ವಸತಿ ಶಾಲೆ ನಿರ್ಮಾಣ ಮಾಡಲು ನೀಡಲಾಗಿದೆ.. ಸುಮಾರು 20 ಕೋಟಿ ಮೌಲ್ಯವುಳ್ಳ ಆಸ್ತಿಯನ್ನು ಬಡ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಅನುಕೂಲ ಮಾಡಿಕೊಟ್ಟ ಗ್ರಾಮ ಪಂಚಾಯಿತಿ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಬೈಟ್ : ಚನ್ನಬಸಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೇವನಹಳ್ಳಿ ತಾಲೂಕು

ಈ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಕಟ್ಟಡ ಕಮಗಾರಿ ಸದ್ಯದಲ್ಲೇ ಆರಂಭವಾಗಲಿದ್ದು, ಈ ವಸತಿ‌ ಶಾಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ೭೫ ಹಾಗೂ ಸಾಮಾನ್ಯ ಜನರಿಗೆ ೨೫ರಷ್ಟು ವಿದ್ಯಾಭ್ಯಾಸ ನೀಡಲಾಗುತ್ತದೆ.. ಇದನ್ನು ಸುತ್ತಮುತ್ತಲಿನ ಬಡ ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು..

ಅಂಬರೀಶ್, ಈಟಿವಿ ಭಾರತ ಬೆಂಗಳೂರು
Body:NoConclusion:No
ETV Bharat Logo

Copyright © 2025 Ushodaya Enterprises Pvt. Ltd., All Rights Reserved.