ಬೆಂಗಳೂರು : ಉಪ ಚುನಾವಣೆಗೆ ಹಿರಿಯ ನಾಯಕರನ್ನು ಕರೆಸಿ ಚರ್ಚೆ ಮಾಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಹಿರಿಯ ನಾಯಕರ ಸಭೆಯ ನಂತರ ಮಾತನಾಡಿದ ಅವರು, ಎರಡು ಬಹಿರಂಗ ಸಭೆ ಮಾಡಲು ನಿರ್ಧರಿಸಿದ್ದೇವೆ.
3 ಕ್ಷೇತ್ರಗಳ ಉಪ ಚುನಾವಣೆ ಬಗ್ಗೆ ಎಲ್ಲ ನಾಯಕರ ಅಭಿಪ್ರಾಯ ಚರ್ಚೆ ಆಗಿದೆ. ರಾಜ್ಯದ ಹಿರಿಯ ನಾಯಕರು ಚುನಾವಣಾ ಜವಾಬ್ದಾರಿ ತೆಗೆದುಕೊಳ್ಳಲು ತೀರ್ಮಾನ ಮಾಡಲಾಗಿದೆ ಎಂದರು.
ಕೊರೊನಾ ಮಾರ್ಗಸೂಚಿಗಳ ಕುರಿತು ಸರ್ಕಾರದಲ್ಲಿಯೇ ಕನ್ಫ್ಯೂಷನ್ ಇದೆ. ಇನ್ಸೈಡ್ ಇರಲಿ, ಔಟ್ಸೈಡ್ ಇರಲಿ ಶಾಮಿಯಾನ ಹಾಕಿದಾಗ ಅದು ಔಟ್ ಸೈಡ್ ಅನ್ನುವುದಕ್ಕೆ ಆಗುತ್ತಾ?. 500 ಜನ ಅಂತಾ ಹೇಳಿದ್ದಾರೆ, ಬಿಜೆಪಿಯವರು ಇಂದು ಸಭೆ ಮಾಡುತ್ತಿದ್ದಾರೆ, ಅದೇನಂತಾ ತಿಳ್ಕೊಂಡು ನೋಡ್ತೇವೆ ಎಂದರು.
ಮಸ್ಕಿ ಉಪಚುನಾವಣೆಗೆ ದಿನಾಂಕ 29ರಂದು ಹಾಗೂ ಬಸವಕಲ್ಯಾಣ ಉಪಚುನಾವಣೆಗೆ ದಿನಾಂಕ 30ರಂದು ನಾಮಪತ್ರ ಸಲ್ಲಿಕೆ ಮಾಡ್ತೇವೆ. 3 ಸೀಟು ಗೆಲ್ಲುವ ವಿಶ್ವಾಸವಿದೆ. ಮತದಾರರು ಬದಲಾವಣೆ ಬಯಸಿದ್ದಾರೆ ಎಂದರು.
ಬೆಳಗಾವಿ ಬೈ ಎಲೆಕ್ಷನ್ಗೆ ಒಂದೇ ಹೆಸರು ಕಳುಹಿಸಿಕೊಡಲಾಗಿದೆ. ಶೀಘ್ರವೇ ಅಭ್ಯರ್ಥಿ ಹೆಸರು ಪ್ರಕಟಿಸಲಾಗುವುದು ಎಂದು ತಿಳಿಸಿದರು.