ETV Bharat / city

ಭೂ ಕಬಳಿಕ ಆರೋಪ ಪ್ರಕರಣ ; ಸಚಿವ ಭೈರತಿ ಬಸವರಾಜ್ ಪರ ನಿಂತ ಜಮೀನು ನೀಡಿದ ಕುಟುಂಬ

ಪ್ರತಿಭಟನೆಯಿಂದ ಒಂದು ಕಿ.ಮೀ ದೂರ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್ ನಡುವೆ ಆ್ಯಂಬುಲೆನ್ಸ್ ಸಿಕ್ಕಿ ಪರದಾಡುವ ಪರಿಸ್ಥಿತಿ ಕಂಡು ಬಂತು. ಒಂದು ಗಂಟೆ ಕಾಲಕ್ಕೂ ಹೆಚ್ಚು ಪ್ರತಿಭಟನೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತರನ್ನು ಕೊನೆಗೆ ಪೊಲೀಸರು ವಶಕ್ಕೆ ಪಡೆದರು. ಬಿಎಂಟಿಸಿ ಬಸ್‌ನಲ್ಲಿ ಎಲ್ಲರನ್ನು ವಶಕ್ಕೆ ಪಡೆದು ಮಹದೇವಪುರ ಠಾಣೆಗೆ ಕಳುಹಿಸಿದರು..

Congress Protest against Byrathi Basavaraj in k.r.puram, bangalore
ಭೂ ಕಬಳಿಕ ಆರೋಪ ಪ್ರಕರಣ; ಸಚಿವ ಬೈರತಿ ಬಸವರಾಜ್ ವಿರುದ್ಧ ಕಾಂಗ್ರೆಸ್ ಮುಖಂಡರ ಪ್ರತಿಭಟನೆ
author img

By

Published : Dec 19, 2021, 6:57 PM IST

ಕೆ.ಆರ್.ಪುರ(ಬೆಂಗಳೂರು): ಸಚಿವ ಭೈರತಿ ಬಸವರಾಜ್‌ ಅವರು ಎನ್‌ಆರ್‌ಐ ಲೇಔಟ್‌ನಲ್ಲಿ ನಕಲಿ ದಾಖಲೆಗಳನ್ನ ಸೃಷ್ಟಿಸಿ 22 ಎಕರೆ ಜಮೀನು ಕಬಳಿಕೆ ಮಾಡಿರುವ ಆರೋಪ ಕೇಳಿ ಬಂದಿದೆ.

ಭೂ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆ ಎದುರಿಸುತ್ತಿರುವ ಭೈರತಿ ಬಸವರಾಜು ಅವರು, ನೈತಿಕ ಹೊಣೆ ಹೊತ್ತು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್‌ ಕಾರ್ಯಕರ್ತರು ಬೆಂಗಳೂರಿನಲ್ಲಿಂದು ಪ್ರತಿಭಟನೆ ನಡೆಸಿದ್ದಾರೆ.

ಕೆ‌.ಆರ್.ಪುರನ 4ನೇ ಬ್ಲಾಕ್ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಕೆ‌.ಆರ್.ಪುರದ ಬಿಬಿಎಂಪಿ ಕಚೇರಿ ಮುಂದೆ ನೂರಾರು ಕಾರ್ಯಕರ್ತರು ಭೈರತಿ ಬಸವರಾಜ್ ವಿರುದ್ಧ ಘೋಷಣೆ ಕೂಗಿದರು. ಸಚಿವ ಸ್ಥಾನದಿಂದ ಕೆಳಗಿಳಿಸುವಂತೆ ಒತ್ತಾಯಿಸಿದರದಲ್ಲದೆ, ಸದನದಲ್ಲಿ ಈ ವಿಚಾರದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದರು.

ಕೋವಿಡ್‌ ಕಾರಣದಿಂದ ಪೊಲೀಸರು ಅವಕಾಶ ನೀಡದಿದ್ದರು ಪ್ರತಿಭಟನೆ ನಡೆಸಲಾಯಿತು. ನೂರಾರು ಪೊಲೀಸರನ್ನು ಬಂದೋಬಸ್ತ್‌ಗೆ ನೇಮಿಸಲಾಗಿತ್ತು. ಡಿಸಿಪಿ ದೇವರಾಜ್‌ ಸ್ಥಳದಲ್ಲೇ ನಿಂತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದರು.

ಪ್ರತಿಭಟನೆಯಿಂದ ಒಂದು ಕಿ.ಮೀ ದೂರ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್ ನಡುವೆ ಆ್ಯಂಬುಲೆನ್ಸ್ ಸಿಕ್ಕಿ ಪರದಾಡುವ ಪರಿಸ್ಥಿತಿ ಕಂಡು ಬಂತು. ಒಂದು ಗಂಟೆ ಕಾಲಕ್ಕೂ ಹೆಚ್ಚು ಪ್ರತಿಭಟನೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತರನ್ನು ಕೊನೆಗೆ ಪೊಲೀಸರು ವಶಕ್ಕೆ ಪಡೆದರು. ಬಿಎಂಟಿಸಿ ಬಸ್‌ನಲ್ಲಿ ಎಲ್ಲರನ್ನು ವಶಕ್ಕೆ ಪಡೆದು ಮಹದೇವಪುರ ಠಾಣೆಗೆ ಕಳುಹಿಸಿದರು.

ಸಚಿವ ಭೈರತಿ ಬಸವರಾಜ್‌ ಪರ ನಿಂತ ಕುಟುಂಬಸ್ಥರು

ನಂತರ ಪ್ರತಿಭಟನಾ ಸ್ಥಳಕ್ಕೆ ಅಣ್ಣಯ್ಯಪ್ಪ ಕುಟುಂಬದವರು ಬಂದು ನಾವು ಐದು ಕುಟುಂಬದವರು 2002-03ರಲ್ಲಿ ಕಲ್ಕೆರೆಯ ಜಮೀನನ್ನು ಭೈರತಿ ಬಸವರಾಜ್ ಅವರಿಗೆ ಮಾರಾಟ ಮಾಡಿದ್ದೇವೆ. ಸಚಿವ ಭೈರತಿ ಬಸವರಾಜ ಅನ್ಯಾಯ ಮಾಡಿಲ್ಲ. ನಮ್ಮ ಕುಟುಂಬವನ್ನ ರಸ್ತೆಗಿಳಿಸುವ ಕೆಲಸ ಕಾಂಗ್ರೆಸ್‌ನಿಂದ ಆಗುತ್ತಿದೆ. ನ್ಯಾಯಯುತವಾಗಿ ಹಣಕೊಟ್ಟು ಜಮೀನು‌ ಖರೀದಿ ಮಾಡಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಬಳಿ ಈ ಬಗ್ಗೆ ಚರ್ಚೆ ನಡೆಸಲು ಸಿದ್ಧ ಎಂದು ಕುಟುಂಬಸ್ಥರು ಹೇಳಿದರು. ಅನಾವಶ್ಯಕವಾಗಿ ಸಚಿವ ಭೈರತಿ ಹೆಸರನ್ನು ತರಬೇಡಿ, ಬೆಳಗಾವಿ ಅಧಿವೇಶನಕ್ಕೇ ಬಂದು ಬೇಕಿದರೆ ಹೇಳ್ತೇವೆ ಎಂದರು.

ಇದನ್ನೂ ಓದಿ: ಬಿಎಸ್​ವೈ-ಬೊಮ್ಮಾಯಿ‌ ಆಪ್ತ ಸಮಾಲೋಚನೆ.. ಸಚಿವ ಭೈರತಿ ಪರ ನಿಲ್ಲಲು ಹಾಲಿಗೆ ಮಾಜಿ ಸಿಎಂ ಸಲಹೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.