ETV Bharat / city

ಪಿಎಸ್ಐ ಭ್ರಷ್ಟಾಚಾರ ಕೇಸ್​ ನ್ಯಾಯಾಂಗ ತನಿಖೆಗೆ ನೀಡಿ: ರಾಮಲಿಂಗಾರೆಡ್ಡಿ

ಪಿಎಸ್​ಐ ನೇಮಕಾತಿಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕು ಎಂದು ಕಾಂಗ್ರೆಸ್​ ಮುಖಂಡ ರಾಮಲಿಂಗಾರೆಡ್ಡಿ ಆಗ್ರಹಿಸಿದ್ದಾರೆ.

ramalingareddy
ರಾಮಲಿಂಗಾರೆಡ್ಡಿ
author img

By

Published : Apr 26, 2022, 4:50 PM IST

ಬೆಂಗಳೂರು: ಪಿಎಸ್ಐ ನೇಮಕದಲ್ಲಿ ನಡೆದಿರುವ ಅಕ್ರಮದ ಬಗ್ಗೆ ನ್ಯಾಯಾಂಗ ತನಿಖೆ ನಡೆಯಲಿ. ರಾಜ್ಯದ ತನಿಖಾ ಸಂಸ್ಥೆಗಳಿಂದ ಸತ್ಯಾಂಶ ಹೊರಬರಲ್ಲ. ಹೈಕೋರ್ಟ್ ನಿವೃತ್ತ ಇಲ್ಲವೇ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಯಾಗಲಿ. ಇಲ್ಲವೇ, ಇವರ ನಿಗಾದಲ್ಲಿ ತನಿಖೆ ನಡೆದರೂ ಉತ್ತಮ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಒತ್ತಾಯಿಸಿದರು.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಗರಣದ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ರಾಜ್ಯ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಸಿಬಿಐ ಕೂಡ ಇವರ ಅಂಡರ್​ನಲ್ಲೇ ಬರುತ್ತೆ. ರಾಜ್ಯದ ತನಿಖಾ ಸಂಸ್ಥೆಗಳಿಂದ ಸತ್ಯಾಂಶ ಹೊರಬರಲ್ಲ. ಹೈಕೋರ್ಟ್ ನಿವೃತ್ತ ಇಲ್ಲವೇ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಯಾಗಲಿ. ಆದರೆ ಇವರ ನಿಗಾದಲ್ಲಿ ತನಿಖೆ ನಡೆದರೂ ಉತ್ತಮ ಎಂದರು.

'ಖರ್ಗೆಗೆ ಗೊತ್ತಿದ್ದು, ಪೊಲೀಸ್​ಗೆ ಗೊತ್ತಿಲ್ವಾ?': ತನಿಖೆಯ ಸಂಬಂಧ ಪ್ರಿಯಾಂಕ್​ ಖರ್ಗೆಗೆ ನೋಟಿಸ್ ಕೊಟ್ಟಿದ್ದಾರೆ. ಪ್ರಿಯಾಂಕ್​ ಖರ್ಗೆ ಅವರಿಗೆ ಗೊತ್ತಿರುವುದು ಪೊಲೀಸ್​ಗೆ ಯಾಕೆ ಗೊತ್ತಿಲ್ಲ. ಪ್ರಭುಚೌಹಾಣ್​ಗೆ ಮಾಹಿತಿ ಇತ್ತು, ಪತ್ರ ಬರೆದಿದ್ರು ಅವರಿಗೆ ಯಾಕೆ ನೋಟೀಸ್ ಕೊಟ್ಟಿಲ್ಲ. ಅವರನ್ನು ಕರೆದು ಮಾಹಿತಿ ತೆಗೆದುಕೊಳ್ಳಿ. 250ಕ್ಕೂ ಹೆಚ್ಚು ಹುದ್ದೆಗಳನ್ನು ಬಿಜೆಪಿ ಕಾರ್ಯಕರ್ತರಿಗೆ ನೀಡಿದ್ದಾರೆ. ವಾಮಮಾರ್ಗದಲ್ಲಿ ಪಿಎಸ್​ಐ ಹುದ್ದೆ ನೀಡಿದ್ದಾರೆ. ಎಡಿಜಿಪಿಯನ್ನು ಸಸ್ಪೆಂಡ್ ಮಾಡಬೇಕು. ಇದೊಂದೇ ಅಲ್ಲ ಬೇರೆ ಎಕ್ಸಾಂಗಳಲ್ಲೂ ಅಕ್ರಮವಾಗಿದೆ ಎಂದು ದೂರಿದರು.

ಸರ್ಕಾರದ ವಿರುದ್ದ ಅನುಮಾನ: ನೇಮಕಾತಿ ಇಲಾಖೆಯ ಪ್ರಭಾವಿ ಅಧಿಕಾರಿ ಮತ್ತು ಗೃಹಮಂತ್ರಿಯ ಕೃಪಾಪೋಷಿತ ಕರ್ಮಕಾಂಡ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ನೇಮಕಾತಿ ಹೊಣೆ ಹೊತ್ತ ಅಧಿಕಾರಿಗಳನ್ನು ಈವರೆಗೆ ಅಮಾನತು ಮಾಡಿಲ್ಲ. ಕನಿಷ್ಠಪಕ್ಷ ನೇಮಕಾತಿ ಇಲಾಖೆಯಿಂದ ಎತ್ತಂಗಡಿಯಾದರೂ ಮಾಡಬಹುದಲ್ಲವೇ?. ಈವರೆಗೆ ಈ ಅಧಿಕಾರಿಗಳನ್ನು ಬದಲಾಯಿಸದೇ ಅದೇ ಜಾಗದಲ್ಲಿ ಮುಂದುವರೆಯಲು ಬಿಟ್ಟಿದ್ದೇಕೆ?. ಈ ಎಲ್ಲಾ ನಡೆಗಳು ಸರ್ಕಾರದ ವಿರುದ್ಧವೇ ಅನುಮಾನ ಬರುವ ಹಾಗಿದೆ ಎಂದರು.

ಇದನ್ನೂ ಓದಿ: ಭ್ರಷ್ಟಾಚಾರ ಆರೋಪ: ನಿವೃತ್ತ ಸಿಎಸ್ ಸೇರಿ 6 ಅಧಿಕಾರಿಗಳ ವಿರುದ್ಧ ತನಿಖೆಗೆ ಕೋರ್ಟ್ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.