ETV Bharat / city

ಕಾಂಗ್ರೆಸ್​​ನಲ್ಲಿ ಟಿಕೆಟ್ ಪಡೆಯುವುದು ಹಿಂದಿನಷ್ಟು ಸುಲಭವಲ್ಲ.. ಸ್ಪಷ್ಟ ಸಂದೇಶ ನೀಡಿದ ರಾಹುಲ್!

ಮುಂದಿನ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷ ಸಂಘಟನೆ ಹಾಗೂ ಜನರ ನಡುವೆ ಸಾಧನೆ ಮಾಡುತ್ತಿರುವ ನಾಯಕರನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದ ಹಿರಿಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ಜೊತೆ ಸಮಾಲೋಚಿಸಿ ಶಾಸಕ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡುವಂತೆ ರಾಹುಲ್ ಗಾಂಧಿ ಖಡಕ್ಕಾಗಿ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

Congress leader rahul gandhi karnataka visit
ಕಾಂಗ್ರೆಸ್​​ನಲ್ಲಿ ಟಿಕೆಟ್ ಪಡೆಯುವುದು ಹಿಂದಿನಷ್ಟು ಸುಲಭವಲ್ಲ.. ಸ್ಪಷ್ಟ ಸಂದೇಶ ನೀಡಿದ ರಾಹುಲ್
author img

By

Published : Apr 2, 2022, 2:37 PM IST

ಬೆಂಗಳೂರು: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮುಂಬರುವ ವಿಧಾನಸಭೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಯುಗಾದಿ ಮುನ್ನಾದಿನವೇ ಬೇವು - ಬೆಲ್ಲ ನೀಡಿ ತೆರಳಿದ್ದಾರೆ. ಹೇಗಾದರೂ ಟಿಕೆಟ್ ಗಿಟ್ಟಿಸಬಹುದು, ನಮ್ಮ ಹಿರಿತನಕ್ಕೆ ಪಕ್ಷ ಟಿಕೆಟ್ ನೀಡಲಿದೆ, ಇಂದಿನ ರಾಜಕೀಯ ಸಾಧನೆ ಉತ್ತಮವಾಗಿದ್ದು ಈ ಬಾರಿ ಟಿಕೆಟ್ ತಪ್ಪುವುದಿಲ್ಲ ಎಂದುಕೊಂಡಿದ್ದವರಿಗೆ ರಾಹುಲ್ ಗಾಂಧಿ ಟಿಕೆಟ್ ಗಿಟ್ಟಿಸುವುದು ಅಷ್ಟು ಸುಲಭವಲ್ಲ ಎಂಬ ಸೂಕ್ಷ್ಮ ಸಂದೇಶವನ್ನೂ ನೀಡಿದ್ದಾರೆ.

ಶುಕ್ರವಾರ ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರ ವಿವಿಧ ವಿಭಾಗಗಳ ಜೊತೆ ಚರ್ಚೆ ನಡೆಸಿರುವ ರಾಹುಲ್ ಗಾಂಧಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಹಾಗೂ ಟಿಕೆಟ್ ಆಕಾಂಕ್ಷಿಗಳಿಗೆ ಸೂಕ್ಷ್ಮವಾಗಿ ಸಂದೇಶ ನೀಡಿದ್ದಾರೆ. ಹಿಂದಿನ ಸಾಧನೆ ಹಾಗೂ ಶ್ರಮ ಮುಂದೆ ಟಿಕೆಟ್ ಪಡೆಯಲು ಮಾನದಂಡವಲ್ಲ. ಪ್ರಸ್ತುತ ಪಕ್ಷದ ಕಾರ್ಯಕರ್ತರು ಹಾಗೂ ಜನರ ಮನಸ್ಸಿನಲ್ಲಿ ನಡೆಸುವಂತಹ ಸಾಧನೆ ಮಾಡುತ್ತಿರಬೇಕು.

ಪಕ್ಷದ ಸದಸ್ಯತ್ವ ಅಭಿಯಾನ ಸೇರಿದಂತೆ ವಿವಿಧ ರೀತಿ ತಲುಪಿದ್ದಾರೆ, ಗಮನಿಸುವಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸೂಚಿಸಿ ತೆರಳಿದ್ದಾರೆ. ಹೇಗೋ ಈ ಸಾರಿ ಟಿಕೆಟ್ ಗಿಟ್ಟಿಸಬಹುದು ಎಂದುಕೊಂಡಿದ್ದ ಅನೇಕ ನಾಯಕರಿಗೆ ನಿರಾಸೆ ಉಂಟಾಗಿದೆ. ಆದರೆ, ತೆರೆಮರೆಯಲ್ಲಿ ಸಾಧಕರಾಗಿ ಕಾರ್ಯನಿರ್ವಹಿಸುತ್ತ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ನಿರೀಕ್ಷೆ ಗರಿಗೆದರಿದೆ.

ಗೆಲ್ಲುವ ಅಭ್ಯರ್ಥಿಗೆ ಆದ್ಯತೆ: ಪಕ್ಷ ಸಂಘಟನೆ ಹಾಗೂ ಜನರ ನಡುವೆ ಸಾಧನೆ ಮಾಡುತ್ತಿರುವ ನಾಯಕರನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದ ಹಿರಿಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ಜೊತೆ ಸಮಾಲೋಚಿಸಿ ಶಾಸಕ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡುವಂತೆ ಖಡಕ್ಕಾಗಿ ಸೂಚನೆ ನೀಡಿದ್ದಾರೆ. ಗೆಲ್ಲುವ ಅಭ್ಯರ್ಥಿಗೆ ಆದ್ಯತೆ ನೀಡಿ ಎಂಬ ಸ್ಪಷ್ಟನೆ ಸಹ ಕೊಟ್ಟಿದ್ದಾರೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಮುಂದಿನ ದಿನಗಳಲ್ಲಿ ತಿಂಗಳಲ್ಲಿ 15 ದಿನ ರಾಜ್ಯದಲ್ಲಿರಲಿದ್ದು, ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕುಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಳೀಯ ನಾಯಕರ ಜೊತೆ ಚರ್ಚಿಸಿ ಸೂಕ್ತ ಅಭ್ಯರ್ಥಿಯ ಆಯ್ಕೆ ಪ್ರಯತ್ನ ನಡೆಸಲಿದ್ದಾರೆ. ಆಯ್ಕೆ ಜವಾಬ್ದಾರಿ ರಾಜ್ಯ ಕಾಂಗ್ರೆಸ್ ನಾಯಕರ ವಿಶ್ವಾಸದೊಂದಿಗೆ ಹೈಕಮಾಂಡ್ ನಡೆಸಲಿದೆ.

ಆರು ತಿಂಗಳ ಮೊದಲೇ ಟಿಕೆಟ್​​​: ಯಾವುದೇ ಪ್ರಭಾವ ಹಾಗೂ ಒತ್ತಡಕ್ಕೆ ಮಣಿದು ಟಿಕೆಟ್ ನೀಡುವ ಕಾರ್ಯ ಮಾಡುವುದು ಬೇಡ. ಚುನಾವಣೆಗೆ 6 ತಿಂಗಳು ಮುನ್ನವೇ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲು ಪಕ್ಷದ ಹೈಕಮಾಂಡ್ ಪ್ರಯತ್ನಿಸಲಿದೆ. ಮುಂಚಿತವಾಗಿಯೇ ಅಭ್ಯರ್ಥಿಯ ಹೆಸರು ಘೋಷಣೆಯಾದರೆ ಅವರಿಗೆ ಜನರ ಬಳಿ ತೆರಳಿ ಇನ್ನಷ್ಟು ಅನುಕೂಲವಾಗಿ ಬರಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮೇಲೆ ನಿರೀಕ್ಷೆ: ಒಟ್ಟಾರೆ ಕರ್ನಾಟಕದ ಪ್ರಜ್ಞಾವಂತ ಮತದಾರರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂಬ ಆತ್ಮವಿಶ್ವಾಸ ರಾಹುಲ್ ಗಾಂಧಿ ಮಾತಿನಲ್ಲಿ ಕಂಡು ಬಂದಿದ್ದು, ಪಕ್ಷದ ರಾಜ್ಯ ನಾಯಕರ ಸಹಕಾರ ಹಾಗೂ ಮುಂಚಿತವಾಗಿಯೇ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕಾಂಗ್ರೆಸ್ ನಿರ್ಧಾರ ಎಷ್ಟು ಬಲವಾಗಿರಲಿದೆ ಎಂಬುದರ ಮೇಲೆ ಮುಂದಿನ ಫಲಿತಾಂಶ ನಿರ್ಧಾರವಾಗಲಿದೆ. 2013ರಿಂದ 18ರವರೆಗೆ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡಿದ ಆಡಳಿತ ಹಾಗೂ ಆ ಸಂದರ್ಭದಲ್ಲಿ ಜನರಿಗೆ ನೀಡಿದ ಕೊಡುಗೆಗಳನ್ನು ತಿಳಿಸುವ ಕಾರ್ಯ ಮಾಡಿ. ಸಾಧ್ಯವಾದಷ್ಟು ಯುವಕರಿಗೆ ಟಿಕೆಟ್ ನೀಡಲು ಆದ್ಯತೆ ನೀಡಿ ಎಂದು ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ.

ಒಟ್ಟಾರೆ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಒಂದಿಷ್ಟು ನಿರೀಕ್ಷೆ ಹಾಗೂ ಸದಾಶಯ ಮೂಡಿಸಿ ತೆರಳಿರುವ ರಾಹುಲ್ ಗಾಂಧಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಹಿಡಿಯುವಂತೆ ಮಾಡುವ ಗುರಿ ನೀಡಿದ್ದಾರೆ. ಅಲ್ಲದೇ ಕನಿಷ್ಠ 150 ಸ್ಥಾನವನ್ನು ಗೆಲ್ಲಲೇಬೇಕು ಎಂಬ ಸಂದೇಶ ನೀಡಿದ್ದಾರೆ. ಆಡಳಿತ ಪಕ್ಷ ಬಿಜೆಪಿಯ ಪ್ರಭಾವವನ್ನು ಬೀರಿ ಪ್ರತಿಪಕ್ಷ ಕಾಂಗ್ರೆಸ್ ಅಧಿಕಾರ ಹಿಡಿಯುವ ಪ್ರಯತ್ನ ನಡೆಸಬೇಕಿದೆ. ಇದು ಅಷ್ಟು ಸುಲಭವಲ್ಲ ಎಂಬ ಅರಿವು ರಾಹುಲ್ ಗಾಂಧಿಗೆ ಇದೆ. ಇದರ ಜೊತೆ ಪಂಚರಾಜ್ಯ ಚುನಾವಣೆ ಹಿನ್ನಡೆಯೂ ಅವರ ಗಮನದಲ್ಲಿದೆ.

ಈ ಎಲ್ಲ ಅಂಶವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕಾಂಗ್ರೆಸ್ ನಾಯಕರ ಆತ್ಮವಿಶ್ವಾಸ ಹೆಚ್ಚಿಸುವ ಹಾಗೂ ಕಾರ್ಯಕರ್ತರಲ್ಲಿ ಒಂದಿಷ್ಟು ಉತ್ಸಾಹ ತುಂಬುವ ಕಾರ್ಯವನ್ನು ರಾಹುಲ್ ಗಾಂಧಿ ಮಾಡಿದ್ದಾರೆ. ಈ ನಡುವೆಯೇ ಹಿಂದಿನ ಸಾಧನೆಯೇ ಮುಂದೆ ಟಿಕೆಟ್ ಗಿಟ್ಟಿಸಿಕೊಳ್ಳಲು ಮಾನದಂಡವಾಗಿದೆ ಎಂಬ ಕೆಲ ಹಿರಿಯ ಕಾಂಗ್ರೆಸ್ ನಾಯಕರಿಗೆ ನಿರಾಸೆ ಉಂಟಾಗುವಂತೆ ಮಾಡಿದ್ದಾರೆ. ಇದರ ಜೊತೆಯಲ್ಲೇ ಪಕ್ಷ ಸಂಘಟನೆ ಹಾಗೂ ಬಲವರ್ಧನೆಯಲ್ಲಿ ತಳಮಟ್ಟದಿಂದ ತೊಡಗಿಕೊಂಡಿರುವವರಲ್ಲಿ ನಿರೀಕ್ಷೆ ಗರಿಗೆದರುವಂತೆಯೂ ಮಾಡಿ ತೆರಳಿದ್ದಾರೆ.

ಇದನ್ನೂ ಓದಿ: ಅವರವರ ಧರ್ಮ, ಹಬ್ಬಗಳನ್ನು ಆಚರಿಸಿಕೊಳ್ಳಲು ಎಲ್ಲರಿಗೂ ಸ್ವಾತಂತ್ರ್ಯವಿದೆ: ಸಿಎಂ ಬೊಮ್ಮಾಯಿ

ರಾಹುಲ್ ಭೇಟಿಯಿಂದ ಮೂಡಿದ ಸಂಚಲನ: ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳುವ ಪ್ರಕಾರ, ರಾಹುಲ್ ಗಾಂಧಿ ರಾಜ್ಯ ಭೇಟಿಯೇ ನಾಯಕರಲ್ಲಿ ಸಂಚಲನ ತರಿಸಿದೆ. ಪಕ್ಷಕ್ಕಾಗಿ ದುಡಿಯುತ್ತಿರುವ ಅವರಿಗೆ ಅವಕಾಶ ನೀಡಬೇಕೆಂಬ ಆಶಯ ಅವರದ್ದು. ಅಲ್ಲದೇ ಯುವ ನಾಯಕತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ, ದೀರ್ಘಾವಧಿ ಕಾಂಗ್ರೆಸ್ ತನ್ನ ಬಲವನ್ನು ಉಳಿಸಿಕೊಳ್ಳಲು ಸಾಧ್ಯ ಎಂಬುದು ಅವರ ಆಶಯ.

ಸಾಕಷ್ಟು ಬುದ್ಧಿವಂತಿಕೆಯ ನಡೆಯನ್ನ ರಾಹುಲ್ ಗಾಂಧಿ ವ್ಯಕ್ತಪಡಿಸಿದ್ದು, ಪಕ್ಷ ಕಟ್ಟುವಲ್ಲಿ ಹಿಂದೆ ಕೊಡುಗೆ ನೀಡಿದವರನ್ನು ಕಡೆಗಣಿಸದೇ, ಅವರ ಮೂಲಕವೇ ಹೊಸ ತಂಡವನ್ನು ಕಟ್ಟುವ ಪ್ರಯತ್ನ ನಡೆಸಿದ್ದಾರೆ. ಇದೆಲ್ಲಕ್ಕೂ ಮುಂದಿನ ದಿನಗಳಲ್ಲಿ ಫಲ ಸಿಗುವ ನಿರೀಕ್ಷೆಯಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.