ಬೆಂಗಳೂರು: ಕಿತ್ತೂರು ರಾಣಿ ಚೆನ್ನಮ್ಮಜಯಂತಿ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿ ಶುಭಾಶಯವನ್ನು ಕೋರುವ ಮೂಲಕ ವೀರವನಿತೆಗೆ ನಮನ ಸಲ್ಲಿಸುವ ಕಾರ್ಯ ಮಾಡಿದೆ.
ಕಾಂಗ್ರೆಸ್ ಪಕ್ಷ ಟ್ವೀಟ್ನಲ್ಲಿ ರಾಜ್ಯದ ಸ್ವಾತಂತ್ರ್ಯರಕ್ಷಣೆಗಾಗಿ ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಕನ್ನಡ ನಾಡಿನ ವೀರಮಹಿಳೆ. ಸ್ವಾತಂತ್ರ್ಯ-ಸ್ವಾಭಿಮಾನ, ಧೈರ್ಯ, ಸಾಹಸ, ತ್ಯಾಗ ಬಲಿದಾನದಿಂದ ಅಜರಾಮರರಾದ ಕಿತ್ತೂರು ರಾಣಿ ಚನ್ನಮ್ಮ ಜಯಂತಿಯನ್ನು ಗೌರವ ಪೂರ್ವಕವಾಗಿ ನೆನೆಯುತ್ತೇವೆ ಎಂದು ಹೇಳಿದೆ.
ರಾಜ್ಯದ ನೆರೆ ಕುರಿತು ಟ್ವೀಟ್ನಲ್ಲಿ ಆತಂಕ ವ್ಯಕ್ತಪಡಿಸಿರುವ ಕಾಂಗ್ರೆಸ್, ನೆರೆ ಮೇಲೆ ನೆರೆ, ಹೊಲ ಮನೆಗಳೆಲ್ಲ ತೊರೆ, ಸಂತ್ರಸ್ತರಿಗೆ ಮತ್ತೆ ಮತ್ತೆ ಬರೆ. ಹೊರದೆ ಹೊರೆ, ಕೇಂದ್ರ ರಾಜ್ಯ ಸರ್ಕಾರಗಳು ಕಣ್ಮರೆ. ಕನ್ನಡಿಗರಿಗೆ ಕನ್ನಡಿಗರೆ ಆಸರೆ ಎಂದು ಕವನದ ರೂಪದಲ್ಲಿ ವಿವರಣೆ ನೀಡಿದೆ.