ETV Bharat / city

ಬಿಎಸ್​ವೈ ಹೇಳಿಕೆ ಖಂಡಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದ ಕಾಂಗ್ರೆಸ್​​ - undefined

ಕಾಂಗ್ರೆಸ್​ಗೆ ಲಿಂಗಾಯತರು ಮತ ನೀಡಿದರೆ ಅಪರಾಧ ಮಾಡಿದಂತೆ ಎಂದು ಹೇಳಿಕೆ ನೀಡಿದ್ದ ಬಿ.ಎಸ್‍.ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಬಿ.ಎಸ್‍. ಯಡಿಯೂರಪ್ಪ
author img

By

Published : May 15, 2019, 9:00 PM IST

ಬೆಂಗಳೂರು: ಕಾಂಗ್ರೆಸ್​ಗೆ ಲಿಂಗಾಯತರು ಮತ ಹಾಕುವುದು ಅಪರಾಧ ಎಂಬ ಮಾಜಿ ಸಿಎಂ ಬಿ.ಎಸ್‍.ಯಡಿಯೂರಪ್ಪ ಹೇಳಿಕೆ ಖಂಡಿಸಿರುವ ಕಾಂಗ್ರೆಸ್, ಇಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಕಾಂಗ್ರೆಸ್​ಗೆ ಲಿಂಗಾಯತರು ಮತ ನೀಡಿದರೆ ಅಪರಾಧ ಮಾಡಿದಂತೆ ಎಂದು ಚಿಂಚೋಳಿ ಪ್ರಚಾರದ ವೇಳೆ ಬಿಎಸ್​ವೈ ಹೇಳಿಕೆ ನೀಡಿದ್ದರು. ಇದನ್ನೆ ಆಧಾರವಾಗಿಟ್ಟುಕೊಂಡು ಕಾಂಗ್ರೆಸ್​ ಇಂದು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

Yadiyurappa
ಬಿ.ಎಸ್‍.ಯಡಿಯೂರಪ್ಪ ವಿರುದ್ಧ ದೂರು

ಒಂದು ಸಮುದಾಯವನ್ನು ಪ್ರಚೋದಿಸುವ ರೀತಿ ಬಿಎಸ್‍ವೈ ಹೇಳಿಕೆ ನೀಡಿದ್ದಾರೆ. ಈ ಮೂಲಕ ಜಾತಿಯಾಧಾರಿತ ಪ್ರಚೋದನೆ ಮಾಡಿದ್ದಾರೆ. ಇದೊಂದು ಸಂವಿಧಾನ ವಿರೋಧಿ ನಿಲುವು. ಬಿಎಸ್​ವೈ ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್​ ದೂರಿನಲ್ಲಿ ಆಗ್ರಹಿಸಿದೆ.

ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 123(3) ಅಡಿ ಯಡಿಯೂರಪ್ಪ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಘಟಕದಿಂದ ದೂರು ಸಲ್ಲಿಕೆಯಾಗಿದೆ.

Intro:NEWSBody:ಬಿ.ಎಸ್ ಯಡಿಯೂರಪ್ಪ ವಿರುದ್ದ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

ಬೆಂಗಳೂರು: ಕಾಂಗ್ರೆಸ್ ಗೆ ಲಿಂಗಾಯತರು ಮತನೀಡಿದರೆ ಅಪರಾಧ ಮಾಡಿದಂತೆ ಎಂಬ ಮಾಜಿ ಸಿಎಂ ಬಿ.ಎಸ್‍. ಯಡಿಯೂರಪ್ಪ ಹೇಳಿಕೆ ಖಂಡಿಸಿ ಕಾಂಗ್ರೆಸ್ ಇಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ ಮಾಡಿದೆ.
ಪ್ರಚಾರದ ವೇಳೆ ಬಿಎಸ್ ವೈ ಈ ಹೇಳಿಕೆ ನೀಡಿದ್ದರು. ಇದನ್ನು ಆಧಾರವಾಗಿಟ್ಟುಕೊಂಡು ಇವರ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದೆ.
ರಾಜ್ಯ ಕಾಂಗ್ರೆಸ್ ನಾಯಕರು ನೀಡಿದ ದೂರಿನಲ್ಲಿ ಸಮುದಾಯವನ್ನ ಪ್ರಚೋದಿಸುವ ಹೇಳಿಕೆಯನ್ನು ಬಿಎಸ್‍ವೈ ನೀಡಿದ್ದಾರೆ. ಜಾತಿಯಾಧಾರಿತ ಪ್ರಚೋದನೆ ಮಾಡಿದ್ದಾರೆ. ಇದೊಂದು ಸಂವಿಧಾನ ವಿರೋಧಿ ನಿಲುವಾಗಿದೆ. ಸುಪ್ರೀಂ ಕೋರ್ಟ್ ತೀರ್ಪನ್ನ ಉಲ್ಲಂಘಿಸಿದಂತಾಗಿದೆ. ಹೀಗಾಗಿ ಬಿಎಸ್ ವೈ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಲಿಂಗಾಯತ ಮತದಾರರ ಕುರಿತಾಗಿ ಹೇಳಿಕೆ ನೀಡಿದ್ದ ಯಡಿಯೂರಪ್ಪ, ಈ ಮೂಲಕ ವಿರೇಂದ್ರ ಪಾಟೀಲರಿಗೆ ಅವಮಾನಿಸಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಲಿಂಗಾಯತರು ಮತನೀಡಿದರೆ ಅಪರಾಧ ಮಾಡಿದಂತೆ ಎಂದಿದ್ದರು. ಚಿಂಚೋಳಿ ಪ್ರಚಾರ ಸಭೆಯಲ್ಲಿ ಬಿ.ಎಸ್.ವೈ ಈ ಹೇಳಿಕೆ ನೀಡಿದ್ದರು.
ಜನಪ್ರತಿನಿಧಿ ಕಾಯಿದೆ 1951 ರ ಸೆಕ್ಷನ್ 123(3) ಅಡಿಯಲ್ಲಿ ಕ್ರಮಕ್ಕೆ ಒತ್ತಾಯಿಸಿ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಘಟಕದಿಂದ ದೂರು ಸಲ್ಲಿಕೆಯಾಗಿದೆ.

Conclusion:NEWS

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.