ETV Bharat / city

ಬೆಂಗಳೂರು; ವ್ಯಾಕ್ಸಿನೇಷನ್‌ ಡ್ರೈವ್ ಪೂರ್ಣ.. ಆರಂಭದಲ್ಲಿ ಕಾಡಿದ ಆ್ಯಪ್​ - ಕೊವ್ಯಾಕ್ಸಿನ್ ವ್ಯಾಕ್ಸಿನೇಷನ್‌ ಡ್ರೈವ್

ಲಸಿಕೆ ಪಡೆದವರ ಬಿಪಿ- ಶುಗರ್ ಸಹ ಪರೀಕ್ಷಿಸಲಾಯಿತು. ನಂತರ ಆಸ್ಪತ್ರೆ ಸಿಬ್ಬಂದಿ, ನೋಡಲ್ ಆಫೀಸರ್ಸ್, ವೈದ್ಯರು ಸೇರಿದಂತೆ ಹಲವು ಕೊರೊನಾ ವಾರಿಯರ್ಸ್​ಗೆ ವ್ಯಾಕ್ಸಿನೇಷನ್ ಮಾಡಲಾಯಿತು. ಕೆ.ಸಿ. ಜನರಲ್ ಆಸ್ಪತ್ರೆ ಸಿಬ್ಬಂದಿ ಬೆಳಗ್ಗೆಯಿಂದಲೆ ಎಲ್ಲಾ ತಯಾರಿ ಮಾಡಿಕೊಂಡಿದ್ದರು. ನೋಂದಣಿ ಮಾಡಿಸಿಕೊಳ್ಳುವ ವೇಳೆ ಕೋವಿಡ್ ಆ್ಯಪ್ ವರ್ಕ್ ಆಗಲಿಲ್ಲ. ಹೀಗಾಗಿ ಮ್ಯಾನುವಲ್ ಎಂಟ್ರಿ ಮಾಡಿಕೊಳ್ಳಲಾಯಿತು.

completed-covid-warriors-vaccination-drive
ವ್ಯಾಕ್ಸಿನೇಷನ್‌ ಡ್ರೈವ್
author img

By

Published : Jan 16, 2021, 9:30 PM IST

ಬೆಂಗಳೂರು : ಕಳೆದ ಹತ್ತು ತಿಂಗಳಿನಿಂದ ಭಾರತವನ್ನು ಕಾಡುತ್ತಿದ್ದ ಕೊರೊನಾ ಮಹಾಮಾರಿ ತಡೆಗಟ್ಟಲು ಇಂದು ಸ್ವದೇಶಿ ನಿರ್ಮಿತ ಕೊವ್ಯಾಕ್ಸಿನ್ ಲಸಿಕೆಯನ್ನು ಮೊದಲಿಗೆ ಕೋವಿಡ್​ ವಾರಿಯರ್ಸ್​​ಗೆ​​​​​ ನೀಡಲಾಯಿತು.

ಇಂದು ಬೆಳಗ್ಗೆ 10:30 ಸುಮಾರಿಗೆ ಪ್ರಧಾನಿ ಮೋದಿ ಲಸಿಕೆ ನೀಡಲು ಚಾಲನೆಕೊಟ್ಟ ಬಳಿಕ, ರಾಜಧಾನಿಯ 8 ಕೇಂದ್ರಗಳಲ್ಲಿ ವ್ಯಾಕ್ಸಿನೇಷನ್‌ ನಡೆಸಲಾಯಿತು. ಮೊಟ್ಟ ಮೊದಲು ಕೆ.ಸಿ. ಜನರಲ್ ಆಸ್ಪತ್ರೆಯ ಡಿ ಗ್ರೂಪ್ ನೌಕರ ಚಂದ್ರಶೇಖರ್ ಅವರಿಗೆ ಲಸಿಕೆ ನೀಡಲಾಯಿತು. ಆ ನಂತರ ಅವರನ್ನ ಅಬ್ಸರ್ವೇಷನ್​​ಗಾಗಿ 30 ನಿಮಿಷಗಳ ಕಾಲ ಕೊಠಡಿಯಲ್ಲಿ ಕೂರಿಸಲಾಗಿತ್ತು.

ಓದಿ-150 ತುರ್ತು ಸ್ಪಂದನಾ ವಾಹನಗಳಿಗೆ ಚಾಲನೆ ನೀಡಿದ ಕೇಂದ್ರ ಗೃಹ ಸಚಿವ

ಕೈ ಕೊಟ್ಟ ಕೊರೊನಾ ನೋಂದಣಿ ಆಪ್

ಲಸಿಕೆ ಪಡೆದವರ ಬಿಪಿ- ಶುಗರ್ ಸಹ ಪರೀಕ್ಷಿಸಲಾಯಿತು. ನಂತರ ಆಸ್ಪತ್ರೆ ಸಿಬ್ಬಂದಿ, ನೋಡಲ್ ಆಫೀಸರ್ಸ್, ವೈದ್ಯರು ಸೇರಿದಂತೆ ಹಲವು ಕೊರೊನಾ ವಾರಿಯರ್ಸ್​ಗೆ ವ್ಯಾಕ್ಸಿನೇಷನ್ ಮಾಡಲಾಯಿತು. ಕೆ.ಸಿ. ಜನರಲ್ ಆಸ್ಪತ್ರೆ ಸಿಬ್ಬಂದಿ ಬೆಳಗ್ಗೆಯಿಂದಲೇ ಎಲ್ಲಾ ತಯಾರಿ ಮಾಡಿಕೊಂಡಿದ್ದರು. ಆದರೆ ನೋಂದಣಿ ಮಾಡಿಸಿಕೊಳ್ಳುವ ವೇಳೆ ಕೋವಿಡ್ ಆ್ಯಪ್ ವರ್ಕ್ ಆಗಲಿಲ್ಲ. ಹೀಗಾಗಿ ಮ್ಯಾನುವಲ್ ಎಂಟ್ರಿ ಮಾಡಿಕೊಳ್ಳಲಾಯಿತು.

100ರಲ್ಲಿ 65 ಮಂದಿಗೆ ಲಸಿಕೆ

ಇಂದು 100 ಕೋವಿಡ್ ವಾರಿಯರ್ಸ್​ಗೆ ಲಸಿಕೆ ನೀಡಲು ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ ಕೆಲವರು ಬೆಂಗಳೂರಲ್ಲೆ ಇರಲಿಲ್ಲ. ಇನ್ನು ಕೆಲವರಿಗೆ ಆರೋಗ್ಯ ಸಮಸ್ಯೆ ಇತ್ತು. ಅಂತವರನ್ನ ವ್ಯಾಕ್ಸಿನ್ ಪಡೆದುಕೊಳ್ಳಿ ಎಂದು ಬಲವಂತ ಮಾಡಲಾಗುವುದಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದರು. ಜೊತೆಗೆ ವ್ಯಾಕ್ಸಿನ್ ಬಗ್ಗೆ ಭಯ ಬೇಡ, ಲಸಿಕೆ ಸಂಜೀವಿನಿಯಾಗಿ ದೊರಕಿದೆ ಎಲ್ಲರೂ ವ್ಯಾಕ್ಸಿನ್ ಪಡೆದುಕೊಳ್ಳಿ ಎಂದು ಮನವಿ‌ ಮಾಡಿದರು.

ಸದ್ಯ, 65 ಕೊರೊನಾ ವಾರಿಯರ್ಸ್​ಗೆ ಲಸಿಕೆ ನೀಡಲಾಗಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ. ಕೋವಿಡ್ ಲಸಿಕಾ ಕೇಂದ್ರಕ್ಕೆ ಆರೋಗ್ಯ ಇಲಾಖೆ ಕಾರ್ಯದರ್ಶಿ ಜಾವೇದ್ ಅಖ್ತರ್, ಆಯುಕ್ತರಾದ ಪಂಕಜ್ ಕುಮಾರ್ ಪಾಂಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.