ಬೆಂಗಳೂರು: ಕೋವಿಡ್‌ನಿಂದ ಮೃತಪಟ್ಟ ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಒಬ್ಬ ಕಾನೂನುಬದ್ಧ ವಾರಸುದಾರರಿಗೆ 'ಸಂಧ್ಯಾ ಸುರಕ್ಷಾ ಯೋಜನೆ’ ಅಡಿ 1.00 ಲಕ್ಷ ರೂ. ಹಾಗೂ ಕೇಂದ್ರದ ಮಾರ್ಗಸೂಚಿ ಅನ್ವಯ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ 50,000 ರೂ. ಸೇರಿದಂತೆ ಒಟ್ಟು 1.50 ಲಕ್ಷ ರೂ. ಪರಿಹಾರ ಹಣ ನೀಡಲು ಸರ್ಕಾರ ಮುಂದಾಗಿದೆ.
ಅದರಂತೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಕಾನೂನುಬದ್ಧ ವಾರಸುದಾರರಿಗೆ ಪರಿಹಾರ ಧನ ನೀಡುವ ಸಂಬಂಧ ಆದೇಶ ಹೊರಡಿಸಲಾಗಿದೆ. ಅದರಂತೆ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬದ ವಾರಸುದಾರರು ದಾಖಲೆಗಳ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
1. ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 198 ವಾರ್ಡ್ಗಳಲ್ಲಿ ಇರುವ ಕಂದಾಯ ಅಧಿಕಾರಿಗಳ ಕಚೇರಿಗಳಲ್ಲಿ ಕಾನೂನುಬದ್ಧ ವಾರಸುದಾರರು ಅರ್ಜಿಗಳನ್ನು ಸಲ್ಲಿಸುವುದು.2. ಅರ್ಜಿದಾರರು ನಿಗದಿಪಡಿಸಿದ ನಮೂನೆ-1(ಫಾರಂ-1)ರಲ್ಲಿ ಮೃತ ವ್ಯಕ್ತಿ ಮತ್ತು ಅರ್ಜಿದಾರರ ವಿವರಗಳು ಮತ್ತು ಕೆಳಕಂಡ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವುದು.* ಕೋವಿಡ್-19 ಪಾಸಿಟಿವ್ ವರದಿ ಮತ್ತು ಕೋವಿಡ್ ರೋಗಿ ಸಂಖ್ಯೆ- BU Number* ಮರಣ ಪ್ರಮಾಣ ಪತ್ರ ಅಥವಾ ಮರಣ ಕಾರಣ ಪ್ರಮಾಣ ಪತ್ರ(ಫಾರಂ-4/4ಎ)* ಮೃತ ವ್ಯಕ್ತಿಯ ಆಧಾರ ಪ್ರತಿ ಅಥವಾ ಇತರೆ ಗುರುತಿನ ಪತ್ರಗಳು* ಮೃತ ವ್ಯಕ್ತಿಯ ಬಿಪಿಎಲ್ ಪಡಿತರ ಚೀಟಿ(ರಾಜ್ಯ ಸರ್ಕಾರದ ಪರಿಹಾರ ಮೊತ್ತಕ್ಕಾಗಿ)* ಅರ್ಜಿದಾರರ ಆಧಾರ ಕಾರ್ಡ್ ಪ್ರತಿ* ಬ್ಯಾಂಕ್ ಪಾಸ್ ಬುಕ್ ಪ್ರತಿ* ಅರ್ಜಿದಾರರ ಬಿಪಿಎಲ್ ಪಡಿತರ ಚೀಟಿ(ರಾಜ್ಯ ಸರ್ಕಾರದ ಪರಿಹಾರ ಮೊತ್ತಕ್ಕಾಗಿ)* ಅರ್ಜಿದಾರರ ಬ್ಯಾಂಕ್/ಅಂಚೆ ಖಾತೆ ಪುಸ್ತಕ ಪ್ರತಿ* ಅರ್ಜಿದಾರರ ಸ್ವಯಂ ಘೋಷಣಾ ಪತ್ರ(ಫಾರಂ-2)* ಮೃತ ವ್ಯಕ್ತಿಯ ಪತಿ/ಪತ್ನಿಯನ್ನು ಹೊರತುಪಡಿಸಿ ಕುಟುಂಬದ ಇತರೆ ಸದಸ್ಯರು ಅರ್ಜಿ ಸಲ್ಲಿಸಿದ್ದಲ್ಲಿ ಮಾತ್ರ ಕುಟುಂಬದ ಉಳಿದ ಸದಸ್ಯರಿಂದ ನಿರಾಕ್ಷೇಪಣಾ ಪತ್ರ(ಫಾರಂ-3) ಪಡೆದು ಅರ್ಜಿಯೊಂದಿಗೆ ಸಲ್ಲಿಸತಕ್ಕದ್ದು.