ETV Bharat / city

ಕಾಂಗ್ರೆಸ್ ನಲ್ಲಿ ಸಿದ್ದು-ಡಿಕೆಶಿ ನಡುವೆ ನಿಲ್ಲದ ಶೀತಲ ಸಮರ.. ಇಬ್ಬರಿಂದಲೂ ಪ್ಲಾನ್, ಮಾಸ್ಟರ್ ಪ್ಲಾನ್

author img

By

Published : Jul 14, 2022, 2:00 PM IST

ಕಾಂಗ್ರೆಸ್​ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಮಧ್ಯೆ ಶೀತಲ ಸಮರ ನಿಲ್ಲುವಂತೆ ಕಾಣುತ್ತಿಲ್ಲ. ಈ ಇಬ್ಬರು ನಾಯಕರು ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದು, ಒಂದಿಲ್ಲ ಒಂದು ತಂತ್ರ ರೂಪಿಸುತ್ತಿದ್ದಾರೆ.

Cold war between Siddaramiah and DK Shivakumar, Siddaramayotsava, Amrut Mahotsav, Former CM Siddaramiah news, KPCC president DK Shivakumar news, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಶೀತಲ ಸಮರ, ಸಿದ್ದರಾಮಯ್ಯೋತ್ಸವ, ಅಮೃತ ಮಹೋತ್ಸವ, ಮಾಜಿ ಸಿಎಂ ಸಿದ್ದರಾಮಯ್ಯ ಸುದ್ದಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸುದ್ದಿ,
ಕಾಂಗ್ರೆಸ್ ನಲ್ಲಿ ಸಿದ್ದು-ಡಿಕೆಶಿ ನಡುವೆ ನಿಲ್ಲದ ಶೀತಲ ಸಮರ

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಡುವೆ ಶೀತಲ ಸಮರ ಮುಂದುವರಿಯುತ್ತಲೇ ಇದೆ. ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಉಭಯ ನಾಯಕರು ಪಕ್ಷದಲ್ಲಿ ತಮ್ಮದೇ ಆದ ತಂತ್ರ - ಪ್ರತಿ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಇಮೇಜನ್ನು ಬೆಳೆಸಿಕೊಳ್ಳಲು ಇಬ್ಬರೂ ಮುಖಂಡರು ಮಾಸ್ಟರ್ ಪ್ಲಾನ್ ಮೇಲೆ ಮಾಸ್ಟರ್ ಪ್ಲಾನ್ ಮಾಡುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ.

ಕಾಂಗ್ರೆಸ್ ಪಕ್ಷದಲ್ಲಿ ಈ ಇಬ್ಬರು ಹಿರಿಯ ನಾಯಕರ ನಡುವಿನ ಕೋಲ್ಡ್ ವಾರ್ ಗುಂಪುಗಾರಿಕೆ ಚಟುಬಟಿಕೆಗಳಿಗೂ ಕಾರಣವಾಗಿದೆ. ಕೆಲವು ಮುಖಂಡರು ಸಿದ್ದರಾಮಯ್ಯ ಪರ ವಕಾಲತ್ತು ವಹಿಸಿದರೆ, ಕೆಲವು ಮುಖಂಡರು ಡಿಕೆಶಿ ಪರವಾಗಿಯೂ ನಿಂತಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿಗಾಗಿ ಉಭಯ ನಾಯಕರ ಮಧ್ಯೆ ನಡೆಯುತ್ತಿರುವ ಕಾಳಗ ಹೈಕಮಾಂಡ್ ಗಮನಕ್ಕೂ ಬಂದಿದೆ. ಇವರಿಬ್ಬರ ನಡುವಿನ ಒಳಜಗಳದಿಂದ ಪಕ್ಷಕ್ಕೆ ಆಗುತ್ತಿರುವ ಅಪಾಯ ಅರಿತ ಹೈಕಮಾಂಡ್ ರಾಜಿ ಮಾಡುವ ಪ್ರಯತ್ನ ಮಾಡಿದೆ. ಪಕ್ಷ ಅಧಿಕಾರಕ್ಕೆ ಬರಲು ಇಬ್ಬರೂ ಒಗ್ಗಟ್ಟಿನ ಪ್ರಯತ್ನ ಮಾಡಿ. ಮುಖ್ಯಮಂತ್ರಿ ಯಾರಾಗಬೇಕೆನ್ನುವ ಬಗ್ಗೆ ಚುನಾವಣೆ ಬಳಿಕ ಶಾಸಕರ ಅಭಿಪ್ರಾಯದಂತೆ ತೀರ್ಮಾನ ತೆಗೆದುಕೊಳ್ಳೋಣ ಎಂದು ಸಮಜಾಯಿಷಿ ನೀಡಿದ್ದರೂ ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಇದು ಸಮಾಧಾನ ತಂದಂತಿಲ್ಲ.

ಕಾಂಗ್ರೆಸ್ ಹೈಕಮಾಂಡ್​ಗೆ ಒಂದೆಡೆ ಮತಗಳನ್ನು ಸೆಳೆಯಲು ಹಿಂದುಳಿದ ವರ್ಗಗಳ ನಾಯಕರಾಗಿರುವ ಸಿದ್ದರಾಮಯ್ಯನವರ ಅಗತ್ಯತೆಯೂ ಇದೆ. ಮತ್ತೊಂದೆಡೆ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಮತ್ತು ಸಾಕಷ್ಟು ಆರ್ಥಿಕ ಬಲವನ್ನೂ ಹೊಂದಿರುವ ಡಿ ಕೆ ಶಿವಕುಮಾರ್ ಅವರ ಅಗತ್ಯತೆಯೂ ಇದೆ. ಈ ಪರಿಸ್ಥಿತಿಯಿಂದಾಗಿ ಸಿದ್ದರಾಮಯ್ಯನವರಿಗಾಗಲಿ ಅಥವಾ ಡಿ.ಕೆ ಶಿವಕುಮಾರ ಅವರಿಗಾಲಿ ನಿಷ್ಠುರವಾಗಿ, ಕಠೋರವಾಗಿ, ನೇರವಾಗಿ ಹೇಳುವುದು ಹೈಕಮಾಂಡ್​ಗೂ ಕಷ್ಟವಾಗಿದೆ. ಇವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವ ಧೈರ್ಯ ಮಾಡಲೂ ಹೈಕಮಾಂಡ್​ನಿಂದ ಸಾಧ್ಯವಾಗುತ್ತಿಲ್ಲ.

ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ದೆಹಲಿ ನಾಯಕರಿಂದ ತಮ್ಮ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ ಎನ್ನುವ ಸತ್ಯ ಅರಿತುಕೊಂಡು ರಾಜ್ಯದಲ್ಲಿ ತಾವೇ ಮುಖ್ಯಮಂತ್ರಿಯಾಗಲು ಸೂಕ್ತವೆನ್ನುವ ವರ್ಚಸ್ಸು ಹೆಚ್ಚಿಸಿಕೊಳ್ಳಲು, ಭವಿಷ್ಯದ ಸಿಎಂ ಎನ್ನುವ ಇಮೇಜ್ ಸೃಷ್ಟಿಸಲು, ಪಕ್ಷದಲ್ಲಿ ಮತ್ತು ಮತದಾರರಲ್ಲಿ ಜನಾಭಿಪ್ರಾಯ ಮೂಡಿಸಲು ಹೆಜ್ಜೆ ಇಟ್ಟಿದ್ದಾರೆ ಎನ್ನಲಾಗ್ತಿದೆ. ಇದರ ಪರಿಣಾಮವೇ ಸಿದ್ದರಾಮಯ್ಯನವರ 75 ನೇ ಹುಟ್ಟಟುಹಬ್ಬ ‘ಅ’ ದಾವಣಗೆರೆಯಲ್ಲಿ ಸುಮಾರು 5 ಲಕ್ಷ ಜನರನ್ನು ಸೇರಿಸವುದು. ಈ ಬೃಹತ್ ಕಾರ್ಯಕ್ರಮ ನಡೆಸಿ ಅದಕ್ಕೆ ರಾಹುಲ್ ಗಾಂಧಿಯನ್ನು ಕರೆಸಿ, ಅವರ ಸಮ್ಮುಖದಲ್ಲಿ ಸಿದ್ದರಾಮಯ್ಯನವರ ಜನಪ್ರಿಯತೆ ಅನಾವರಣಗೊಳಿಸುವುದು. ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಎನ್ನುವ ಒತ್ತಡ ಹೈಕಮಾಂಡ್ ಮೇಲೆ ಹಾಕುವುದಾಗಿದೆ. ಅಷ್ಟೆ ಅಲ್ಲ ಪಕ್ಷದಲ್ಲಿನ ಎಲ್ಲ ಶಾಸಕರ ಮತ್ತು ಸಂಸದರ ವಿಶ್ವಾಸ ಗಳಿಸುವುದಾಗಿದೆ.

ಓದಿ: ಸಿದ್ದರಾಮಯ್ಯ ಅಮೃತ ಮಹೋತ್ಸವದ ಪೂರ್ವ ಸಿದ್ಧತಾ ಸಭೆ - ಡಿಕೆಶಿ ಗೈರು!

ದಾವಣೆಗೆರೆ ಸಮಾರಂಭದ ನಂತರ ರಾಜ್ಯದ ದಶ ದಿಕ್ಕುಗಳಲ್ಲಿ ಆಗಸ್ಟ್ ತಿಂಗಳಲ್ಲಿಯೇ ಹತ್ತಾರು ಸಿದ್ದರಾಮಯ್ಯನವರ ಹುಟ್ಟುಹಬ್ಬ ಸಿದ್ದರಾಮಯ್ಯೋತ್ಸವ ನಡೆಸಿ ಮುಖ್ಯಮಂತ್ರಿ ಅಭ್ಯರ್ಥಿಯೆನ್ನುವ ಅಭಿಪ್ರಾಯವನ್ನು ಗಟ್ಟಿಹೊಳಿಸುವುದಾಗಿದೆ. ಆಗಸ್ಟ್ ತಿಂಗಳಿನಾದ್ಯಂತ ಸಿದ್ದರಾಮಯ್ಯನವರ ಹುಟ್ಟುಹಬ್ಬ ಸಿದ್ದರಾಮಯ್ಯೋತ್ಸವ ಆಚರಣೆಯಿಂದ ತಮ್ಮ ಪ್ರತಿಸ್ಪರ್ದಿ ಸಿದ್ದರಾಮಯ್ಯನವರ ವರ್ಚಸ್ಸು ಮತ್ತಷ್ಟು ಹೆಚ್ಚಾಗುತ್ತದೆ. ಮುಖ್ಯಮಂತ್ರಿಯಾಗುವ ತಮ್ಮ ಕನಸು ಭಗ್ನವಾಗುತ್ತದೆ ಎನ್ನುವುದನ್ನು ಅರಿತ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯೋತ್ಸವಕ್ಕೆ ಪ್ರತಿಯಾಗಿ ಆಗಸ್ಟ್ ತಿಂಗಳಲ್ಲೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಇದೆ. ಹೀಗಾಗಿ ಕಾಂಗ್ರೆಸ್ ಪಕ್ಷದಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವ ಪಾದಯಾತ್ರೆ ನಡೆಸುವ ಕಾರ್ಯಕ್ರಮವನ್ನು ಘೋಷಿಸಿದರು.

ಸಿದ್ದರಾಮಯ್ಯನವರ ಕಾರ್ಯಕ್ರಮಕ್ಕೆ ಕೌಂಟರ್ ಕಾರ್ಯಕ್ರಮ ಇದು ಎನ್ನುವುದು ಪಕ್ಷದವರಿಗೆ ಬಹಳ ಬೇಗ ಅರ್ಥವಾಯಿತು. ಪಾದಯಾತ್ರೆ ಕಾರ್ಯಕ್ರಮ ಘೋಷಣೆ ಮಾಡಿದ ಡಿಕೆಶಿ ಅಷ್ಟಕ್ಕೆ ಸುಮ್ಮನಾಗಲಿಲ್ಲ. ಸಿದ್ದರಾಮಯ್ಯನರ ಹುಟ್ಟುಹಬ್ಬದಂದು ನಡೆಯುವ ‘ಸಿದ್ದರಾಮಯ್ಯೋತ್ಸವ’ವು ವ್ಯಕ್ತಿ ಪೂಜೆಯಾಗಿದೆ, ಅಮೃತ ಮಹೋತ್ಸವ ಪಾದಯಾತ್ರೆಯು ಪಕ್ಷವನ್ನು ಪೂಜಿಸುವ ಕಾರ್ಯಕ್ರಮವಾಗಿದೆ ಎನ್ನುವ ಪರೋಕ್ಷ ಸಂದೇಶವನ್ನ ಪಕ್ಷದ ಮುಖಂಡರಿಗೆ ಹಾಗು ರಾಜ್ಯದ ಜನತೆಗೆ ತಲುಪಿಸುವ ತಂತ್ರಗಾರಿಕೆಯನ್ನೂ ರೂಪಿಸಿದ್ದಾರೆ.

ತಮ್ಮ ಕಾರ್ಯಕ್ರಮಕ್ಕೆ ಡಿ.ಕೆ.ಶಿವಕುಮಾರ್ ಪ್ರತಿ ಕಾರ್ಯಕ್ರಮ ರೂಪಿಸಿದ್ದರಿಂದ ಸಿದ್ದರಾಮೋತ್ಸವ ಕಾರ್ಯಕ್ರಮ ಆಶಯಕ್ಕೆ ಸ್ವಲ್ಪ ಪ್ರಮಾಣದಲ್ಲಿ ಪೆಟ್ಟು ಬೀಳುವ ಸಾಧ್ಯತೆಗಳನ್ನು ಮನಗಂಡ ಮಾಜಿ ಸಿಎಂ ಸಿದ್ದರಾಮಯ್ಯನವರು, ಡಿ ಕೆ ಶಿವಕುಮಾರ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಿದ್ದರಾಮೋತ್ಸವ ನಡೆಸಲು ಮುಂದಾದರು. ಮೊನ್ನೆ ಡಿಕೆಶಿಯನ್ನ ತಮ್ಮ ಮನೆಗೆ ಕರಸಿಕೊಂಡ ಸಿದ್ದರಾಮಯ್ಯನವರು ಎರಡೂ ಕಾರ್ಯಕ್ರಮಕ್ಕೆ ಪರಸ್ಪರ ಸಹಕಾರ ನೀಡುವ ಕುರಿತು ಮಾತನಾಡಿಕೊಂಡರು. ಸಿದ್ದರಾಮೋತ್ಸವಕ್ಕೆ ಡಿಕೆಶಿ ಒಲ್ಲದ ಮನಸ್ಸಿನಲ್ಲೇ ಒಪ್ಪಿಗೆ ಸೂಚಿಸಿದ್ದಾರೆ. ಪಕ್ಷದ ಕಾರ್ಯಕ್ರಮವಾಗಿ ಆಚರಿಸುವುದಕ್ಕೆ ಡಿಕೆಶಿ ವಿರೋಧ ವ್ಯಕ್ತಪಡಿಸಿದ್ದರಿಂದ ಪಕ್ಷದ ಮುಖಂಡರು ಸೇರಿ ಸಮಾರಂಭ ಆಯೋಜಿಸುವ ಮತ್ತು ಸಮಾರಂಭದಲ್ಲಿ ಎಲ್ಲ ಕಾಂಗ್ರೆಸ್ ಮುಖಂಡರು ಪಾಲ್ಗೊಳ್ಳುವ ಅಲಿಖಿತ ಒಪ್ಪಂದಕ್ಕೆ ಬಂದಿದ್ದಾರೆ.

ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಸಮನ್ವಯತೆ ಸಾಧಿಸುವ ಸಭೆ ನಡೆದ ಎರಡುಮೂರು ದಿನಗಳ ನಂತರ ಸಿದ್ದರಾಮೋತ್ಸವ ಕಾರ್ಯಕ್ರಮದ ಸಿದ್ಧತೆ ಬಗ್ಗೆ ಬುಧವಾರ ಅರಮನೆ ಮೈದಾನದಲ್ಲಿ ನಡೆದ ಪೂರ್ವಭಾವಿ ಸಭೆಗೆ ಡಿಕೆಶಿ ಗೈರಾಗಿರುವುದು ಇಬ್ಬರ ಮುಖಂಡರ ನಡುವಿನ ಶೀತಲ ಸಮರದ ಗಂಭೀರತೆ ಸಾಬೀತುಪಡಿಸಿದೆ. ಇಬ್ಬರೂ ಮುಖಂಡರು ಸಿಎಂ ಕುರ್ಚಿಗಾಗಿ ಇನ್ನಿಲ್ಲದ ರೀತಿಯಲ್ಲಿ ಪೈಪೋಟಿಗೆ ಇಳಿದಿದ್ದು, ಕಾಂಗ್ರೆಸ್ ಹೈಕಮಾಂಡ್ ಮತ್ತು ಶಾಸಕರ ಬೆಂಬಲ ಪಡೆಯಲು ಮಾಸ್ಟರ್ ಪ್ಲಾನ್ ಮೇಲೆ ಮಾಸ್ಟರ್ ಪ್ಲಾನ್​ನ್ನು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ತಮ್ಮ ಎಲ್ಲಾ ರಾಜಕೀಯ ಚಾಣಾಕ್ಷತೆಗಳನ್ನು ಬಳಸಿ ರೂಪಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.