ETV Bharat / city

ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಬಜೆಟ್: ಸಿಎಂ ಯಡಿಯೂರಪ್ಪ

ಬಜೆಟ್ ಮಂಡನೆ ದಿನಾಂಕದ ಬಗ್ಗೆ ಸುಳಿವು ಬಿಟ್ಟು ಕೊಡದ ಸಿಎಂ ಬಿಎಸ್​ವೈ, ಈ ಬಗ್ಗೆ ಇನ್ನೂ ಚರ್ಚೆ ಮಾಡುತ್ತಿದ್ದೇನೆ ಎಂದು ಸಿಎಂ ಬಿಎಸ್​ವೈ ಹೇಳಿದರು.

cm-series-of-meetings-with-departmental-officials-and-ministers
ಇಲಾಖಾವಾರು ಅಧಿಕಾರಿಗಳು, ಸಚಿವರ ಜೊತೆ ಸಿಎಂ ಸರಣಿ ಸಭೆ
author img

By

Published : Feb 8, 2021, 6:37 PM IST

Updated : Feb 8, 2021, 7:22 PM IST

ಬೆಂಗಳೂರು: ಇವತ್ತಿನ ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಬಜೆಟ್ ಮಂಡನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಬಜೆಟ್: ಸಿಎಂ ಯಡಿಯೂರಪ್ಪ

ರೇಸ್ ಕೋರ್ಸ್ ರಸ್ತೆಯಲ್ಲಿರುವ ಶಕ್ತಿ ಭವನದಲ್ಲಿ ಇಂದು ಅಧಿಕಾರಿಗಳ ಜೊತೆ ಬಜೆಟ್ ಪೂರ್ವಭಾವಿ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರತಿ ದಿನ ವಿವಿಧ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತಿದ್ದೇನೆ ಎಂದರು.

ರಾಜ್ಯಕ್ಕೆ ಒಳ್ಳೆಯ ಅಭಿವೃದ್ಧಿ ಕೊಡುವ ಸಂಬಂಧ ಚರ್ಚೆ ಮಾಡುತ್ತಿದ್ದು, ಇಂದು ವಿವಿಧ ಇಲಾಖೆಗಳ ಸಚಿವರು, ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಹೀಗೆ ಬಿಡುವು ಮಾಡಿಕೊಂಡು ಇನ್ನೂ ಸಭೆಗಳನ್ನು ಮಾಡುತ್ತೇನೆ. ಈ ಮೂಲಕ ಇವತ್ತಿನ ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಬಜೆಟ್ ರೂಪಿಸುವ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದು ತಿಳಿಸಿದರು.

ಬಜೆಟ್ ಮಂಡನೆ ದಿನಾಂಕದ ಬಗ್ಗೆ ಸುಳಿವು ಬಿಟ್ಟು ಕೊಡದ ಸಿಎಂ ಬಿಎಸ್​ವೈ, ಈ ಬಗ್ಗೆ ಇನ್ನೂ ಚರ್ಚೆ ಮಾಡುತ್ತಿದ್ದೇನೆ ಎಂದಷ್ಟೇ ಹೇಳಿದರು. ವಿಜಯನಗರ ಪ್ರತ್ಯೇಕ ಜಿಲ್ಲೆ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಹೌದು ಇವತ್ತು ಅದು ಕ್ಲಿಯರ್ ಆಗಿದೆ.
ವಿರೋಧದ ಬಗ್ಗೆ ಏನು ಇಲ್ಲ ಎಂದಷ್ಟೇ ಹೇಳಿ ಹೊರಟರು.

ಇಂದಿನಿಂದ ಸಿಎಂ ನೇತೃತ್ವದಲ್ಲಿ ಬಜೆಟ್ ಪೂರ್ವಭಾವಿ ಸಭೆ ಪ್ರಾರಂಭ.

ಮಾರ್ಚ್ ಎರಡನೇ ವಾರ ಬಜೆಟ್ ಮಂಡನೆಯಾಗುವ ಹಿನ್ನೆಲೆ, ಸಿಎಂ ಬಜೆಟ್ ಸಂಬಂಧ ಶಕ್ತಿಭವನದಲ್ಲಿ ಪೂರ್ವ ತಯಾರಿ ಸಭೆ ನಡೆಯಿತು. ಇಂದು ಬೆಳಗ್ಗೆ ಉನ್ನತ ಶಿಕ್ಷಣ ಇಲಾಖೆ, ಐಟಿಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆಗಳ ಪೂರ್ವಭಾವಿ ಸಭೆ ನಡೆಸಿದರೆ, ಮಧ್ಯಾಹ್ನದ ಬಳಿಕ ಕಂದಾಯ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ, ಕಾರ್ಮಿಕ ಇಲಾಖೆಗಳ ಸಚಿವರು ಹಾಗೂ ಅಧಿಕಾರಿಗಳ ಜೊತೆ ಸರಣಿ ಸಭೆ ನಡೆಸಿದರು.

ಸಿಎಂ ಜತೆ ಒಂದು ಗಂಟೆ ಬಜೆಟ್ ಕುರಿತು ಚರ್ಚೆ ನಡೆಸಿದ್ದೇನೆ: ಆರ್.ಅಶೋಕ್

ಪೂರ್ವಭಾವಿ ಬಜೆಟ್​​ನಲ್ಲಿ ಇಲಾಖೆಗಳ ಬಜೆಟ್ ಅನುದಾನ, ಕಳೆದ ಬಜೆಟ್ ಅನುದಾನದ ವಿನಿಯೋಗ, ಈ ಬಾರಿಯ ಇಲಾಖಾ ಅನುದಾನದ ಅಗತ್ಯತೆ ಸಂಬಂಧ ಅಧಿಕಾರಿಗಳು, ಸಚಿವರಿಂದ ಮಾಹಿತಿ ಪಡೆದರು. ಆರ್ಥಿಕ ಸಂಕಷ್ಟದ ಹಿನ್ನೆಲೆ, ಈ ಬಾರಿ ಅಳೆದು ತೂಗಿ ಬಜೆಟ್ ಮಂಡಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ಇಲಾಖೆಗಳಿಗೆ ವೆಚ್ಚ ಕಡಿತದೊಂದಿಗೆ ಅನುದಾನ ನೀಡುವ ಸಾಧ್ಯತೆ ಇದೆ.

ಬಜೆಟ್ ಸಭೆ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಸಿಎಂ ಜತೆ ಒಂದು ಗಂಟೆ ಬಜೆಟ್ ಕುರಿತು ಚರ್ಚೆ ನಡೆಸಿದ್ದೇನೆ. ವಿವಿಧ ಅನುದಾನಗಳ ಬಗ್ಗೆ ಸಿಎಂ ಹಾಗೂ ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇವೆ. ನಾಡ ‌ಕಚೇರಿಗಳು, ಜಿಲ್ಲಾ ಸಂಕೀರ್ಣಗಳು, ಮಿನಿ ವಿಧಾನಸೌಧಕ್ಕೆ ಹೆಚ್ಚಿನ ಅನುದಾನ ಕೇಳಿದ್ದೇನೆ ಎಂದರು.

ಇನ್ನು, ವಿಪತ್ತು ನಿರ್ವಹಣಾ ಕಾರ್ಯನಿರ್ವಹಿಸಲು ಸುಸಜ್ಜಿತ ಕಟ್ಟಡಕ್ಕೆ ಮನವಿ ಮಾಡಿದ್ದೇನೆ. ಪ್ರಕೃತಿ ವಿಕೋಪವಾಗುವ ಜಿಲ್ಲೆಗಳಲ್ಲಿ ಶಾಶ್ವತ ಪುನರ್ವಸತಿ ಕೇಂದ್ರ ನಿರ್ಮಾಣಕ್ಕೆ ಮನವಿ ಮಾಡಿದ್ದೇನೆ. ಸಿಎಂ‌ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಡಿಸಿ ನಡಿಗೆ-ಹಳ್ಳಿ ಕಡೆಗೆ ಕಾರ್ಯಕ್ರಮದಡಿ ಪ್ರತಿ ಡಿಸಿಗಳಿಗೆ 5 ಲಕ್ಷ ಮೀಸಲಿಡಲು ಮನವಿ ಮಾಡಲಾಗಿದೆ. ಹಳ್ಳಿ ಕಡೆಗೆ-ಡಿಸಿ ನಡಿಗೆ ಯೋಜನೆಗೆ 18 ಕೋಟಿ ರೂ. ಅನುದಾನಕ್ಕೆ ಮನವಿ ಮಾಡಲಾಗಿದೆ. ರೈತರ ಆತ್ಮಹತ್ಯೆ ಆದಾಗ ಪರಿಹಾರ ವಿಳಂಬವಾಗಬಾರದು. ರೈತರಿಗೆ ಕೂಡಲೇ ಪರಿಹಾರ ನೀಡಲು ಬಜೆಟ್​​ನಲ್ಲಿ ಸೂಕ್ತಕ್ರಮ ವಹಿಸಲು ಮನವಿ ಮಾಡಿದ್ದೇನೆ ಎಂದು ವಿವರಿಸಿದರು.

Last Updated : Feb 8, 2021, 7:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.